ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಎಂದೂ ಮರೆಯದಾ ಗುರುತು ರಜಿಯಾ ಕೆ.ಬಾವಿಕಟ್ಟೆ ಕಡಲ ಮೌನದಲಿ ನೆಮ್ಮದಿಯ ಕಾಣುವ ಭರವಸೆಯ ನಿರಾಳದಿ ದಿಟ ದಾವಂತದಲಿ ಎಷ್ಟೋ ಕನಸುಗಳು ಆಸೆಗಳು ಮಡಿಲಿಗಂಟ್ಟಿದ್ದವು. ಸಂತಸದ ಮನವು ಬಾನು ಭೂವಿಗಳ ಅಂತರವೇ ಲೆಕ್ಕಿಸದಷ್ಟು ಸಂತೋಷದ ದಿನಗಳು ಅಪಾರತರದಲ್ಲಿದ್ದವು. . ದಿನದಿನವು ಕಳೆದಂತೆ ಕರಾಳತೆಯ ಕಹಳೇಗಳು ಬೆನ್ನ ಹಿಂದೆಯೇ ಬೆನ್ನಟ್ಟಿ ಹೊರಟುನಿಂತಿದ್ದವು. ಆಗಾಧತೆಯ ಖುಷಿಗಳೆಲ್ಲ ಕಳೆದು ಬರೀ ಸಾಲು ಸಾಲು ಸಮಾಧಿಯ ನಿಟ್ಟುಸಿರಿಗೆ ನನ್ನ ಜೊತೆ ಜೊತೆಗಿದ್ದ ಅಣ್ಣತಮ್ಮಂದಿರನೇ ಆ ವಿಧಿ ಬಲಿ ಪಡೆದು ನನ್ನ ನನ್ನಮ್ಮನ ಒಂಟಿಯಾಗಿಸಿದ್ದವು. ಐವರ ಒಕ್ಕೂಟದಲಿ ನಾನೋಬ್ಬಳೇ ಪ್ರೀತಿಯ ಕುಸುಮ ನನ್ನನಗಲಿ ದೂರ ದೂರ ಹೋದರೆಲ್ಲ ಒಂದೇ ಕ್ಷಣ ಕ್ಷಣದಲಿ ನಿಮಗಿದು ಸರಿನಾ? ನನ್ನ ಹೆತ್ತ ಒಡಲಿಗೆ ಯಾರು ಸಾಂತ್ವನ ನೀಡುವರು ಹೇ ದೈವವೇ ? ತಾಯಿಯ ನೋವಿಗೆ ನಾ ಅದೆಷ್ಟೋ ಸಹಕರಿಸಲಿ. ಮಸಣ ಮಾಳಿಗೆಯನ್ನೇ ಸೃಷ್ಟಿಸಿದೆಯಲ್ಲಾ‌ ಈ ಬದುಕಲಿ. ಅಳಿದುಳಿದ ಈ ಬದುಕಿಗೆ ಇನ್ನೂ ಯಾಕೇ ಬದುಕುವ ಹಂಗು ನೀನೇ ಕೊಟ್ಟ ಖುಷಿಗೆ ನೀನೇ ಕೊಳ್ಳಿ ಇಟ್ಟ ಮೇಲೆ ಇನ್ನೂ ಯಾಕೇ ಈ ಉಸಿರು ಹರಸಿ ಕರೆದೊಯ್ದದರು ಸರಿಯೇ ಇನ್ನೂ ಒಲ್ಲದ ಈ ಜೀವನ. ಆ ಕಡಲ ಮೌನದಲಿ ನಾ ನಿತ್ಯವೂ ರೋಧಿಸುವೇ ಕಂಬನಿಯನು ಧಾರೇ ನೀಡುವೆ ಅದು ಎಂದೂ ನನ್ನ ಕತೆಗೆ ಉತ್ತರಿಸಲೇ ಇಲ್ಲ . ನನ್ನಾಧಿ ಒಡಲಿಗೆ ಕಡಲು ಭೊರ್ಗರಿಸಿ ಒಡೆಯುದಷ್ಟೇ | ವಿನಹ ನನ್ನ ಪ್ರಶ್ನೇಗೆ ಎಂದೂ ಮೌನ ಮುರಿಯಲೇ ಇಲ್ಲ . ಇನ್ನೂ ನಾ ಜೀವಂತ ಶಿಲೆ ಅಷ್ಟೇ ಹೊರತು ಭಾವಗಳನು ಸಂಭ್ರಮಿಸೊ ಸಡಗರಿಸೂ ಮನವಾಗಲಾರೆನೂ ಎಂದಿಗೂ ಎಂದೆಂದಿಗೂ …… ಪದ್ಮರಾಗ….. ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಕರೆಯದೆ ಬರುವ ಅತಿಥಿ ಚೇತನಾ ಕುಂಬ್ಳೆ ಕರೆಯದೆ ಬರುವ ಅತಿಥಿ ನೀನು ಕರೆದರೂ ಕಿವಿ ಕೇಳಿಸದವನು ಯಾರೂ ಇಷ್ಟ ಪಡದ ಅತಿಥಿ ನೀನು ಎಲ್ಲಿ ಯಾವಾಗ ಹೇಗೆ ಯಾಕೆ ಯಾವ ನಿಮಿಷದಲ್ಲಿ ಯಾವ ರೂಪದಲ್ಲಿ ನೀನು ಬರುವೆಯೆಂದು ಗೊತ್ತಿಲ್ಲ ನನಗೆ ಮುನ್ಸೂಚನೆ ನೀಡದೆ ಬರುವೆ ನೀನು ಎಲ್ಲಿಂದ ಬರುವೆಯೋ ಎಲ್ಲಿಗೆ ಕರೆದೊಯ್ಯುವೆಯೋ ತಿಳಿದಿಲ್ಲ ನನಗೆ ಒಡೆದು ನುಚ್ಚುನೂರು ಮಾಡುವೆ ಸಣ್ಣಪುಟ್ಟ ಸಂತೋಷಗಳನ್ನು ಹೋಗುವೆ ನೀನು ಒಮ್ಮೆಯೂ ತಿರುಗಿ ನೋಡದೆ ಮನದ ತುಂಬ ವೇದನೆ ನೀಡಿ ಹಿರಿಯರೆಂದೋ ಕಿರಿಯರೆಂದೋ ಶ್ರೀಮಂತರೆಂದೋ ಬಡವರೆಂದೋ ನೋಡದೆ ಓಡಿ ಬರುವೆ ಎಲ್ಲರ ಬಳಿಗೆ ಕಾಲಕಾಲಕೆ ಕಾರಣ, ಸಮಾನರಲ್ಲವೆ ಎಲ್ಲರೂ ನಿನ್ನ ಕಣ್ಣಿಗೆ ಕಣ್ಣೀರು ಕಂಡರೂ ಕರಗದ ಹೃದಯ ನಿನ್ನದು ನೋವನ್ನರಿತರೂ ಮಿಡಿಯದ ಮನಸ್ಸು ನಿನ್ನದು ಓ ಅತಿಥಿಯೇ‌‌‌… ಯಾಕಿಷ್ಟು ಕ್ರೂರಿಯಾದೆ ನೀನು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ತಲೆ ಮಾರಾಟಕ್ಕಿದೆ.. ಶೀಲಾಭಂಡಾರ್ಕರ್ ತಲೆ ಮಾರಾಟಕ್ಕಿದೆ ಕೊಳ್ಳವವರಿದ್ದಾರೆಯೇ? ಸಾಕಾಗಿದೆ ಈ ತಲೆನೋವು, ಜಂಜಾಟಗಳು. ಆಗಾಗ ತಲೆ ಬಿಸಿ ಯಾರಿಗಾದರೂ ಕೊಟ್ಟು ಹಾಯಾಗಿರೋಣ ಅನಿಸುತ್ತಿದೆ. ಒಂದು ನಿಮಿಷವೂ ತೆಪ್ಪಗಿರಲ್ಲ. ಸುಮ್ನೆ .. ಏನಾದರೂ ವಟಗುಟ್ಟದಿರೆ ಸಮಾಧಾನವಿಲ್ಲ. ಬೇಡದ ಕಸವೇ ತುಂಬಿಕೊಂಡಿದೆಯಲ್ಲ. ದುಡ್ಡು ಕೊಡಬೇಕಾಗಿಲ್ಲ ಹಾಗೇ ಸ್ವಲ್ಪ ದಿನದ ಮಟ್ಟಿಗಾದರೂ ತಿರುಗಾಡಿಸಿ ತಂದರೂ ಅಡ್ಡಿ ಇಲ್ಲ. ಆಹಾ…!!! ಎಷ್ಟು ಗಮ್ಮತ್ತು.. ಖಾಲಿ ತಲೆ ನೆನೆಸಿಕೊಂಡಾಗಲೇ ಏನೋ ಪುಳಕ.. ಹಗುರವಾಗಿ ತೇಲಾಡುವ ತವಕ. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ಡಾ.ಗೋವಿಂದ ಹೆಗಡೆ ನೋಡ ನೋಡುತ್ತಿದ್ದ ಹಾಗೆ ಬೆಳಗಾಗಿಬಿಟ್ಟಿತು ಕನವರಿಸುತ್ತಿದ್ದಂತೇ ಕನಸು ಹರಿದುಬಿಟ್ಟಿತು ಹಂಬಲಿಸಿದ್ದೆಷ್ಟು ತಯಾರಿಯ ಸಂಭ್ರಮವೆಷ್ಟು ತಾಸೆರಡು ತಾಸಿನಲ್ಲಿ ‘ಆಟ’ ಮುಗಿದೇಬಿಟ್ಟಿತು ಹೊಳೆ ಮೈಲು ದೂರವಿರುವಾಗಲೇ ಸಿದ್ಧನಿದ್ದೆ ಪಾದವನ್ನೂ ನೆನೆಸದೆ ನೀರು ಸರಿದುಬಿಟ್ಟಿತು ಭಾರವನ್ನು ಅವರೂ ಹೊರುವ ನಿರೀಕ್ಷೆಯಿತ್ತು ನನ್ನ ತಲೆಗೇ ಎಲ್ಲ ಕಟ್ಟಿ ಮಂದಿ ಕೈಬಿಟ್ಟಿತು ಬೆಳಗಾದರೆ ಪರಿಹಾರ ಸಿಗುವ ವಿಶ್ವಾಸವಿತ್ತು ನಸೀಬು ಖೊಟ್ಟಿ, ರಾತ್ರಿಯೇ ಎಣ್ಣೆ ತೀರಿಬಿಟ್ಟಿತು ಕೈಗೆ ಸಿಗದೇ ನಡೆಯುವ ‘ಜಂಗಮ’ನ ಕೇಳಬೇಕು ಇರವು-ಅರಿವಿನ ನಡುವೇಕೆ ಬಿರುಕುಬಿಟ್ಟಿತು ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೇಡ ರಾಜೇಶ್ವರಿ ಭೋಗಯ್ಯ ಕಾವ್ಯಕ್ಕೆ ವಸ್ತುವಾಗಲೆಂದು ಜೇಡವನ್ನು ಆರಿಸಿಕೊಂಡಿದ್ದೆ ಕವಿಯೊಬ್ಬರು ಹೇಳಿದ್ದರು , ವಸ್ತು ಯಾವುದಾದರೂ ಆಗಬಹುದು ಕವನ ಕಟ್ಟುವುದಕ್ಕೆ, ಒಡೆದ ದೋಣಿ ,ಮುರಿದ ಏಣಿ ಹೀಗೆ… ಜೇಡ ಕಟ್ಟುತ್ತಲೇ ಇತ್ತು ಬಲೆಯನ್ನು ನಾ ಕೆಡವುತ್ತಲೇ ಇದ್ದೆ ಪದೇ ಪದೇ ಅದರ ಬದುಕನ್ನು ಕೂತು ನೋಡಿದ್ದೇ ಬಂತು, ಪದಗಳು ಬರಲಿಲ್ಲ ರಾಜ ಬಲೆ ಹೆಣವುದ ನೋಡಿಯೇ ಸ್ಪೂರ್ತಿಗೊಂಡನಲ್ಲ ಜೇಡ ಬಲೆಯನ್ನು ಹೆಣೆಹೆಣೆದು ಕಟ್ಟಿಯೇ ಬಿಟ್ಟಿತು ತನ್ನರಮನೆಯನ್ನು ದಿಕ್ಕೆಟ್ಟಿದ್ದವ ಅವ, ಜೇಡ ಮನೆಕಟ್ಟಿದ್ದ ನೋಡಿ ತಾನೂ ಕಟ್ಟಿದ ಪುನಃ ಸೈನ್ಯವ ನಾನೋ ಯಾರಿಗೂ ಆಗಿರಲಿಲ್ಲ ರಾಜ ಮುಳುಗಿರಲಿಲ್ಲ ಸಾಮ್ರಾಜ್ಯ ಸುಖಾಸುಮ್ಮನೆ ಯಾರು ಯಾರಿಗೋ ಮೂಡುವುದಿಲ್ಲ ಪದಗಳು ಜೀವ ತಲ್ಲಣಿಸದೆ ಕಟ್ಟಲಾಗುವುದಿಲ್ಲ ಬಲೆಯನ್ನೂ , ಬದುಕನ್ನು. *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮತ್ತೆ ವಸಂತ ತೇಜಾವತಿ.ಹೆಚ್.ಡಿ ಮರಳ ಅಂಗಳದೊಳಗೆ ಬಾಳರಂಗೋಲಿ ಬಿಡಿಸುವುದು ಬೇಡ ಗೆಳೆಯ… ಶಿಲೆಗಳಲ್ಲಿ ಕೆತ್ತೋಣ ಶಾಶ್ವತವಾಗಿ… ! ಭುವಿಯಾಗಸ ಚಂದ್ರಾರ್ಕರ ಸಾಕ್ಷಿ ಸಾಕು.. ತೊಟ್ಟ ಬಟ್ಟೆ ಒಳಗಿನ ಕಾಯ ಕುಳಿತ ಜಾಗ ಕೊಚ್ಚಿಹೋಗುವ ಮುನ್ನ ಎದ್ದು ನಡೆಯೋಣ.. ಗತದ ಕಹಿನೆನಪುಗಳ ದೊರೆತಿರುವ ಒಲವಿನಲಿ ಮುಳುಗಿಸಿಬಿಡು! ಒಡಲ ದಹಿಸಿದ ವ್ಯರ್ಥ ಮಂದಾಗ್ನಿಯ ಉಗುಳಿಬಿಡು.. ಮತ್ತೆ ಸ್ವಚ್ಛಂದವಾಗಿ ನಾ ನಿನಗೆ, ನೀ ನನಗೆಂದು ಒಲವಸಾಗರದಲ್ಲಿ ಮತ್ಸ್ಯಗಳಾಗೋಣ.. ! ಬೇರೆಲ್ಲ ಬದಿಗಿರಲಿ ಮೊದಲು ನಮ್ಮ ತನವ ಮೆರೆಯೋಣ. . ಹಮ್ಮು ಬಿಮ್ಮುಗಳ ದಾಟೋಣ ಅನರ್ಥ ಮೌಢ್ಯಗಳ ತೂರೋಣ ಜಡ ಮನಗಳಲಿ ಕಾಂತಿಯ ದೀಪ ಬೆಳಗೋಣ ಕೊಳಕು ಮನಸುಗಳ ಘಮದ ಸುಮಗಳಲಿ ಕಂಪು ಪಸರಿಸೋಣ… ಮತ್ತೆ ಬಂದಿದೆ ವಸಂತ.. ! ಕೋಗಿಲೆಯಾಗಿ ಕೂಗೋಣ ಗೆಳೆಯ ನವಬದುಕಿಗೆ ನಾಂದಿ ಹಾಡೋಣ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಒಂದು ಕೊಂಕಣಿ ಬಾಷೆಯ ಕವಿತೆ ಜವಾಬ್ ಪಂಚ್‍ವೀಸ್ ವರ್ಸಾ ಉಪರಾಂತ ಪರತ ತಾಕ್ಕಾ ಭೇಟೂಚೊ ಅವಕಾಶ. ತಶಿ ಮಣೂನ ಆಯ್ಲಾ ತಾಗೆಲೆ ಸಂದೇಶ‌. ಮನ ಧಾಂವ್ಲೆ ಪಂಚ್‍ವೀಸ ವರಸಾ ಮಾಕ್ಷಿ. ಪತಂಗಾ ವರಿ ಉಬಲೆ ದೇವ ಸಾಕ್ಷಿ. ತಾಗೆಲೊ ಏಕ ಸವಾಲಾ ಚೊ ಝಾಪ್ ಮೆಗೆಲೆ ಭಿತ್ತರಿ ವರಲಾ. ತ್ಯಾ ವೇಳ ಉತ್ರಾಂನ ಮೆಗೆಲೆ ಸಾಥ್ ದಿಲಲೆ ನಾ. ಆಜ ಹಾಂವ ತಾಗೆಲೆ ಸಗ್ಳೇ ಸವಾಲಾಚೆ ಜವಾಬ ದಿತ್ತಲಿ ಮನಾಚೆ ಜಡಾವಣ ದೆವೊನು ಹಗೂರ ಜಾತ್ತಲಿ ಧಾಂವಲಿ ಹಾಂವ ಸಾನ ಚೆಲ್ಯೆಲ ವರಿ. ತೆದನಾ ಆಮ್ಮಿ ಮೆಳ್ಚೆ ಕೆದಳಾಚೆ ಜಾಗೇರಿ. ಹರ್ದೆ ಧಡಧಡು. ಪೊಟ್ಟಾಂತು ಭಂವರಾ ಗೊಂದೊಳು. ಆಯ್ಲೊ ತೊ.. ತಾಣೆ ಲಾಗ್ಗಿ ಯೆವ್ಚೆ ದಿಸಲೆ. ವಯ್ ಕೀ ನಯ್ ಮಳೆಲೆ ಸಂಶಯ ಆಯ್ಲೆ. ಮಾಸ್ಕ್ ಗಾಲ್ಲೆಲೆ ತೊಂಡಾನ ಹಾಂವ ಹಾಸ್ಲಿ ತೋ ಹಾಸ್ಲೊ ಕಿ ನಾ ಮಳೆಲೆ ಮಾಕ್ಕಾ ದಿಸನಿ ಬಸ್ಲಿಂಚಿ ಆಮ್ಮಿ ಏಕ ಮೀಟರ್ ದೂರ ರಾಕುಕ ಮೊಣು ಸಾಮಾಜಿಕ ಅಂತರ. ತೋ ಬಶಿಲೊ ಮೌನ ಆನಿ ಮೆಗೆಲೆ ಉತ್ರಂ ಭಾಯರ ಪಣಿ. ಚಡತಾ ಆಶಿಲಿ ವತ್ತಾ ಚಿ ಹುನಸಾಣಿ ಸಾಬಾರ ವೇಳಾನ ತಾಣೆ ಆಪಯ್ಲೆ ಮೆಗೆಲೆ ನಾಂವ. ಹೂಂ ಮಳ್ಳೆ ಶಿವಾಂಯ್ ವಿಂಗಡ ಉಲ್ಲಯ್ನಿ ಹಾಂವ. ತಾಣೆ ಸಾಂಗ್ಲಿ ತಾಗೆಲಿ ಘರ್ ಚಿ ಖಬರ. ಚೆರ್ಡುಂವಾಲಿ, ಬಾಯ್ಲೆಲಿ ಆನಿ ತಾಗೆಲೆ ಉದ್ಯೋಗಾ ಚಿ. ಹಾಂವೆ ಮೆಗೆಲೆ ಸಂಸಾರಾ ಚಿ. ತಾಗೆಲೆ ಡಯಾಬಿಟೀಸ್ ಆನಿ ಮೆಗೆಲೆ ಸೈನಸ್. ಇತುಲೇ ಚಿ ಆಮ್ಮಿ ಉಲ್ಲಯಿಲೆ ಸಗ್ಳೇ ದೀಸ್. ಸಾಂಜ್ ಜಾಲ್ಲಿ ಸೂರ್‍ಯು ಬುಡ್ಲೊ. ತಾಗೆಲೆ ಸವಾಲಾಚೊ ಜವಾಬ ಮೆಗೆಲೆ ಭಿತ್ತರೀ ವರಲೊ. ಹಾಂವ ಮೆಗೆಲೆ ಘರಾ ಆನಿ ತೋ ತಾಗೆಲೆ ಘರಾ ಚಮಕಲೊ. ಮನಾಚೊ ಭಾರು ಮನಾನ ಪರತ ವಾಂವಲೊ. ********** ಶೀಲಾ ಭಂಡಾರ್ಕರ್

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನಾಲಿಗೆ ಕತ್ತರಿಸಿ ನಡೆದವರು ಜಹಾನ್ ಆರಾ ದೂರ ವಿಮಾನದಿಂದ ಹಾರಿ ಬಂದವರು ತಂದ ಆಧುನಿಕತೆಯ ಭಾರವನ್ನು ಸಾವಿರಾರು ಮೈಲಿ ಹೊತ್ತು ನಡೆಯುತ್ತಿದ್ದೇವೆ ಈಗ ಕಾಲುಗಳು ಸೋತಿವೆ ತಲುಪುವ ಊರು ಇನ್ನೂ ಬಹು ದೂರ ದುಡಿದು ತಿಂದ ದೇಹ ದಾರಿಯುದ್ಧಕ್ಕೂ ಬೇರೆಯವರ ದಾನಕ್ಕಾಗಿ ಕೈ ಒಡ್ಡಿತು ಮೇಲೆ ಕುಳಿತವನು ಆಡಿಸಿದಂತೆ ದೀಪವು ಹಚ್ಚಿದ್ದೇವೆ ನಮ್ಮ ರಕುತ ಬಸೆದು ಜಾಗಟೆಯೂ ಬಾರಿಸಿದ್ದೇವೆ ಖಾಲಿ ಹೊಟ್ಟೆ ಬಡಿದು ಹಗಲು-ರಾತ್ರಿ ಬಿಸಿಲು ಹಸಿವು ಯಾರ ಮಾತು ಕಿವಿಗೆ ಬೀಳಲಿಲ್ಲ ನಿಮ್ಮ ಆಶಾದಾಯಕತೆಯ ಹೊರತು ಊರಿನಲ್ಲಿ ತನ್ನವರು ಸತ್ತರು ಜೊತೆಗೆ ನಡೆದವರು ಇಲ್ಲವಾದರು ಕರಾಳತೆಯ ಕರಳು ಯಾವ ವಯಸ್ಸಿಗೂ ಮಿಡಿಯಲಿಲ್ಲ ಪ್ರಸವ ಬೇಗೆಯು ಸಹಿಸಿದೆವು ಗರ್ಭವನ್ನು ಇಳಿಸಿ ನಡೆದೆವು ಬಿಟ್ಟು ಬಂದ ಗೂಡು ಸೇರಲು ಹಗಲಿರುಳು ನಡೆದೆವು ಸೌಲಭ್ಯವಿದೆಯಂತೆ ಮಾಗಿದ ಮಾವಿನಂತೆ ನಮಗೆ ಗೊಟ್ಟೆಯಾದರು ಸಿಕ್ಕಿದರೆ ಚೀಪಿ ನಾವು ತಿಂದಷ್ಟೇ ಸುಖಿಸುವೆವು ನಡೆನಡೆದು ಸೊರಗಿದ ಚಪ್ಪಲಿಗಳು ನಮ್ಮ ಮೇಲೆ ವಿರಸ ಹಾಡುವೆ ಇನ್ನೂ ಪಾದದ ಚರ್ಮಕ್ಕೆ ಹೊಲಿಗೆ ಹಾಕಿಕೊಂಡು ನಡೆಯುತ್ತಿದ್ದೇವೆ ನೀವು ತಂದ ಹುಳುಗಳು ನಮ್ಮ ಹೆಸರು ಹೇಳುತ್ತಿದೆ ಕೇಳಿ ವಲಸಿಗರಿಂದ ಕಾರ್ಮಿಕರಿಂದ ‘ನಾ ರಾರಾಜಿಸುವೆ ‘ಎನ್ನುತ್ತಿವೆ ನೋಡಿ ನೀವು ಬಾಯಿಮುಚ್ಚಿಕೊಂಡು ಇರಲು ಹೇಳಿದ್ದೀರಿ ನಾವು ನಾಲಿಗೆಯನ್ನು ಕತ್ತರಿಸಿ ನಡೆಯುತ್ತಿದ್ದೇವೆ ನೋಡಿ ಸ್ವಲ್ಪ ಕರುಣೆ ಇದ್ದರೆ ನಿಮಗೆ ರಸ್ತೆಗಳನ್ನು ಕತ್ತರಿಸಿ ಕಿರಿದಾಗಿಸಿ ನಾಲ್ಕೈದು ಹೆಜ್ಜೆಗಳಲ್ಲಿ ಮನೆ ಸೇರುವಂತೆ *********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಜೀವನಕ್ಕೊಂದು ಕ್ಲಾಸ್ ಶೀಲಾ ಭಂಡಾರ್ಕರ್ ನಾನೊಂದು ಹೆಜ್ಜೆ ಇಡುವುದರಲ್ಲಿ..ಸಾಗುತ್ತದೆ. ನಾಲ್ಕು ಹೆಜ್ಜೆ ಮುಂದೆ ನನ್ನ ಜೀವನ. ಪುನಃ ನನ್ನ ಒಂದು ಹೆಜ್ಜೆಗೆ ಅದು ಮತ್ತೆ ನಾಲಕ್ಕು. ಆದರೂ ನಗುತ್ತಲೇ ಇದ್ದ ನನ್ನ ನೋಡಿ. ಕೇಳಿತೊಮ್ಮೆ ನನ್ನದೇ ಮನಸ್ಸು. ನಗುತ್ತಲೇ ಇರುವಿಯಲ್ಲ.. ಬದುಕೇ ನಿನ್ನಿಂದ ಬಲು ಮುಂದೆ ಸಾಗಿದ್ದರೂ..!! ನಾನಂದೆ.. ಎಷ್ಟು ವೇಗವಾಗಿ ಸಾಗಿದರೂ ಇದ್ದೇ ಇದೆಯಲ್ಲ ಮುಂದೆ ಗಡಿ.. ಅಲ್ಲಿಂದ ಇಡಲಾದೀತೆ ಒಂದೇ ಒಂದು ಅಡಿ. ಅಲ್ಲಿ ನಿಂತು ಕಾಯುತ್ತಿರಲಿ. ತಲುಪುತ್ತೇನೆ ನಾನು ನನ್ನದೇ ವೇಗದಲ್ಲಿ ನನ್ನದೇ ಗತಿಯಲ್ಲಿ ತಿರುಗಿ ನೋಡಿ ನಗುತ್ತೇನೆ. ಕಳೆದ ದಿನಗಳನ್ನೊಮ್ಮೆ. ಓಡುವ ಭರದಲ್ಲಿ ನಿಲ್ಲದೆ ಓಡಿದ ಜೀವನವನ್ನೊಮ್ಮೆ ಮಾತನಾಡಿಸಿ… ಜೀವಿಸುವುದು ಹೇಗೆಂದು ತಿಳಿಸಿಕೊಡುತ್ತೇನೆ.. *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ತೇಜಾವತಿ ಹೆಚ್.ಡಿ. ನಿನ್ನ ಬಿಟ್ಟು ನಾನು ಬಹುದೂರ ಬಂದಿರುವೆನು ಗೆಳೆಯ ನೀನು ಅತ್ತು ಕೂಗಿದರೂ ಕೇಳಿಸದಾಗಿದೆ ನನಗೀಗ ಗೆಳೆಯ ಇಷ್ಟು ದಿನ ಪ್ರೀತಿಯ ಭ್ರಮಿಸಿ ಕನವರಿಸಿ ನಿತ್ರಾಣವಾಗಿರುವೆನು ನಾನು ಮನವೀಗ ಅರಸಿಬಂದರು ಮರುನೋಡದೆ ಒಪ್ಪಿಕೊಳ್ಳದಾಗಿದೆ ಗೆಳೆಯ ಬಿಸಿಲ್ಗುದುರೆಯೇರಿ ಮೋಹದ ಓಣಿಯ ಜೀವಜಲಕ್ಕಾಗಿ ಓಡಿದೆ ನಾನು ಹೆಜ್ಜೆಗಳು ಬಸವಳಿದು ಕಣ್ಣರಳಿಸಲಾರದೆ ಕಳೆಗುಂದಿದೆ ಗೆಳೆಯ ಘಮಭರಿತ ಸುಮವೀಗ ನಿರ್ವಾತಕ್ಕೆ ಸಿಲುಕಿ ಕಠಿಣ ಶಿಲೆಯಾಗಿ ಬದಲಾಗಿದೆ ಕ್ರಿಯೆಗೆ ಪ್ರತಿಕ್ರಿಯಿಸುವ ಸೂಕ್ಷ್ಮ ಸಂವೇದನೆಗಳ ಕಳೆದುಕೊಂಡಿದೆ ಗೆಳೆಯ ನೀನೀಗ ಒಲವ ಅಮೃತಧಾರೆಯನ್ನೇ ಸ್ಪುರಿಸಿದರೂ ಹಿತವಾಗುತ್ತಿಲ್ಲ ನನಗೆ ಗೋರ್ಕಲ್ಲ ಮೇಲೆ ಮಳೆ ಸುರಿದು ನಿಷ್ಪ್ರಯೋಜಕವಾಗಿದೆ ಗೆಳೆಯ ಐಹಿಕದ ಯಾವುದೂ ಬೇಡ ದೂರದ ಬೆಳಕೊಂದ ಅರಸಿ ಹೊರಟಿಹೆ ಈಗ ನನ್ನಷ್ಟಕ್ಕೆ ನನ್ನ ಬಿಟ್ಟುಬಿಡು ನನ್ನಿಷ್ಟದ ಬದುಕು ಸನಿಹವಾಗಿದೆ ಗೆಳೆಯ ಹೋಗಬೇಕೆಂದಿರುವೆ ಜಾತಿಮತ ಲಿಂಗಭೇದ ತೂರಿ ನೀತಿನಿಯಮಗಳಾಚೆ ಸ್ವಚ್ಛಂದವಾಗಿ ನಿತ್ಯ ತೇಜದಿ ಪ್ರಜ್ವಲಿಸುವ ತಾರೆಯಾಗುವ ಹಂಬಲವಾಗಿದೆ ಗೆಳೆಯ *******

ಕಾವ್ಯಯಾನ Read Post »

You cannot copy content of this page