ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

ಕಾವ್ಯಯಾನ

ಗಝಲ್ ಲಕ್ಷ್ಮಿ ದೊಡಮನಿ ರಾಜಕಾರಣದ ಈ ಜೀವನ ಥಳುಕೆನಿಸುತ್ತದೆ ಎಚ್ಚರದಿಂದಿರುಕುರ್ಚಿ ತಲ- ತಲಾಂತರವಾಗಿ ತಮಗೆ ದಕ್ಕ ಬೇಕೆನಿಸುತ್ತದೆ ಎಚ್ಚರದಿಂದಿರು ಬದಲಾವಣೆ ಇಲ್ಲಿನ ನಿಯಮ ಯಾವುದೂ ಶಾಶ್ವತವಲ್ಲಮೃಗಜಲಕ್ಕೆ ಬೆನ್ನಟ್ಟಿದ ಪಶುವಿನಂತಾಗುತ್ತದೆ ಎಚ್ಚರದಿಂದಿರು ಬಿತ್ತಲಿಕ್ಕೆ ಹೋದವರು ಹೆಗ್ಗಣ ಬಿಲವನ್ನು ತೋಡಿದರಂತೆದಾರಿ ತಪ್ಪಿಸುವ ಆಸೆ-ಆಮಿಷಗಳನ್ನು ಒಡ್ಡಲಾಗುತ್ತದೆ ಎಚ್ಚರದಿಂದಿರು ಅಧಿಕಾರಕ್ಕಾಗಿ ಏನು ಬೇಕಾದರೂ ಮಾಡಬಹುದೆಂಬ ತರಬೇತಿಯುಂಟುಮನ ನಾಚಿಕೆ,ಮಾನ ತೊರೆದು ಕೊರಡಿನಂತಾಗುತ್ತದೆ ಎಚ್ಚರದಿಂದಿರು ನಿಜಕ್ಕೆ ಸಮಾಧಿ ಕಟ್ಟಿ ಸುಳ್ಳಿಗೆ ಕಲಶವೇರಿಸುತ್ತಾರೆ ‘ಚೆಲುವೆ’ನಿನ್ನನ್ನೇ ನೀನು ನಂಬದಂತೆ ಭ್ರಮೆ ಹುಟ್ಟಿಸಲಾಗುತ್ತದೆ ಎಚ್ಚರದಿಂದಿರು ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬೋಧಿಸತ್ವನೊಂದಿಗೆ ಯಶೋಧರೆ —(ಯಶೋಧರೆಯ ಸ್ವಗತ ) ಲಕ್ಷ್ಮೀ ಪಾಟೀಲ್ ಅರಮನೆಯ ನೆನಪಾಗಿ ಬಂದೆಯಾ ಸಿದ್ಧಾರ್ಥಹೇಳದೆ ಹೋದರೆ ಸಿಗುವುದೇ ಜ್ಞಾನೋದಯ?ನಮಿಸಲಾರೆ ಮಂಡಿಯೂರಿ ನಿನಗೆಲೋಕದ ಗುರುವೆಂದು ನನಗೀಗಲೂ ನೀ ಸಿದ್ಧಾರ್ಥ ಗಾಢ ನಿದ್ದೆಯ ತಡವದೆ ಆ ರಾತ್ರಿ ನೀ ಹೇಳದೆ ಹೋದೆನನ್ನ ಮುಂದಿನ ಕತ್ತಲೆ ಕಳೆದೆ ನಿದ್ರೆ ಜಾರಿಸಿದೆಇಲ್ಲೊಂದು ಜ್ಞಾನೋದಯಕ್ಕೆ !ಮನೆ -ಮನದಾಚೆಗೊಂದು ಮಿಣುಕು ದೀಪ ಉಳಿಸಿದೆಬುದ್ದ ನಿನಗೊಂದು ಕೃತಜ್ಞತೆ ನಾನು ಹೆಂಡತಿಯಾಗಿ ಉಳಿದಿಲ್ಲರಾಹುಲ ಮಗನಾಗಿ ಉಳಿದಿಲ್ಲನಿನ್ನ ಭಿಕ್ಕು ಸಂಘದಲ್ಲಿ ನಾವು ಬಿಕ್ಕುಗಳಲ್ಲಈ ಅರಮನೆಯಲ್ಲಿ ಹುಟ್ಟಿ ಬೆಳೆದ ನೀನೀಗಅರಮನೆಯ ಮುಂದೆ ಬೌದ್ಧ ಭಿಕ್ಷು ಕರ್ಮ ಚಕ್ರ ಕಳಚಿ ಧರ್ಮ ಚಕ್ರ ಹಿಡಿದೆಬುದ್ದತ್ವ ಸುಲಭ ಸಿದ್ದ !ಲೋಕದ ತನು ಮನ ಶೋಧಕ್ಕೆ ನೀ ಹೊರಟಂದೇನಿತ್ಯ ನಡೆದಿದೆ ಇಲ್ಲಿ ನನ್ನ ತನು ಮನದ ಶೋಧಶೋದೋನ್ಮಾದದ ರಂಗ ಶಾಲೆಯಲ್ಲಿಬುದ್ದತ್ವದ ಪಾಠ ಕೇಳಿಸಬೇಡ ಮಲಗಿ ಬಿಟ್ಟಿದೆ ಅಮೋಘ ಸುಖವಿಲ್ಲಿಅಜ್ಞಾನ -ಮುಗ್ಧತೆ ಗಳ ತಲೆದಿಂಬಿನಲಿಧೈನ್ಯತೆ ಹತಾಶೆ ವಿಕ್ಷಿಪ್ತತೆಗಳ ಚಂದಕ್ಕೆಹೇರದಿರು ಮತ್ತೊಂದು ಭಾರಕರ್ಮಚಕ್ರದ ಮೇಲೊಂದು ಧರ್ಮಚಕ್ರಮುಕ್ತ ಸಂವಾದಗಳು ಬುದ್ಧತ್ವ ಒಪ್ಪುವುದಿಲ್ಲ ಸಿದ್ದಾರ್ಥ ಕೇಳಿದೆ ಸುಜಾತಾ ಕೊಟ್ಟ ಪಾಯಸ ತಿಂದ ಮೇಲೆಯೇಅರಳಿಯ ನೆರಳಲ್ಲಿನಿಮಗೆ ಜ್ಞಾನೋದಯವಾಯಿತಂತೆ !ಉತ್ತರವಿದೆಯಾ ಸಿದ್ದಾರ್ಥ?ಯಾಕೆ ಹೆಣ್ಮಕ್ಕಳು ಬದುಕಿಸುವ ಸತ್ವದಿಂದನಿಮ್ಮಂತವರು ಬೋಧಿಸತ್ವ ರಾಗುತ್ತಾರೆ?ಅದೇ ಜನನಿಬಿಡ ಲೋಕದ ಮುಂದೆನಿಮ್ಮ ಬುದ್ದತ್ವ ಭಿಕ್ಷೆ ಬೇಡುತ್ತದೆ?ಪ್ರಾರ್ಥಿಸುವೆನಿಷ್ಟೆ ಸಿದ್ದಾರ್ಥಬೀಳದಿರಲಿ ನನ್ನ ಮಗ ನಿನ್ನ ಜೋಳಿಗೆಯಲಿಕಸಿಯದಿರು ಕರ್ಮಚಕ್ರ : ಈ ಕೊನೆ ಗಳಿಗೆಯ ಜೀವಸತ್ವ ******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮುಖವಾಡಗಳ ಕವಿತೆಗಳು  ಸುಜಾತಾ ರವೀಶ್ ಮುಖವಾಡ ಧರಿಸಿ ಧರಿಸಿ ಬೇಸರವೆನಿಸಿ ತೆಗೆಯಹೋದಳು ಒಂದು ದಿನ  ಎಳೆದರೂ ಇಲ್ಲ ತೊಳೆದರೂ ಇಲ್ಲ  ಚಾಕುವಿನಿಂದ ಕೆತ್ತಿದರೂ ಬರಲಿಲ್ಲ  ಕೊನೆಗೆ ಡಾಕ್ಟರ ಬಳಿ ಹೋದಾಗ ತೆಗೆಯಲಾಗದು ಜೀವಕಪಾಯ ಎಂದರು!  ಗತ್ಯಂತರವಿಲ್ಲ ಮಾಡುವುದೇನು?  ಸಾಯಲು ತೆಗೆದಿಡುವುದಾ ಬದುಕಲು ಹಾಕಿಕೊಳ್ಳುವುದಾ  ತೆಗೆದಿಟ್ಟು  ಸತ್ತು ಬದುಕುವುದಾಹಾಕಿಕೊಂಡು ಬದುಕಿ ಸಾಯುವುದಾನಿರ್ಧರಿಸಲಾಗುತ್ತಿಲ್ಲ ಅವಳಿಗೀಗ ಕಚೇರಿಯ ರಾಜಕಾರಣ ಕೆಲಸದ ಕಸಿವಿಸಿಚಿಟ್ಟೆನಿಸುವ ತಲೆನೋವು ಏನೋ ಒಂದು ಬೇಯಿಸಿಟ್ಟರೆ “ಥೂ..ಉಪ್ಪುಮಯ ಪಲ್ಯ ನನ್ನ ಬೇಗ ಮೇಲೆ ಕಳಿಸಿ ಬಿಡ್ತೀಯಾ “ ಕಟ್ಟಿಕೊಂಡಾಗಿನಿಂದ ಸುರಿಸಿದ ಕಣ್ಣೀರುಉಪ್ಪಾಗಿ ಕ್ಷಾರವಾಗಿದೆ ಇವಳ ಸ್ವಗತ ಮಾತಿಗೇನು ಕಮ್ಮಿ ಇಲ್ಲ ಖಾರಕ್ಕೆ ಮೆಣಸಿನ ಕಾಯೇ ಬೇಕಿಲ್ಲ ಚುಚ್ಚಿ ನೋಯಿಸುವ ಉವಾಚಒಟ್ನಲ್ಲಿ ನೆಮ್ಮದಿ ಹಾಳು ಬೇಸರ  ಬಿಕ್ಕಿನ ಜತೆ ಹಸಿವನೂ ನುಂಗಿ ಮಲಗಿದಳು ಎಲ್ಲಾ ಮರೆತ ಅವನಿಗೇನೋ ಲಹರಿ ಕೊಂಚ ಕೊಸರಾಟ ಮಿಡುಕಾಟ ಉಸಿರಾಟ ಗಾದೆಯ ನಿಜ ಮಾಡಿದ ಸಾರ್ಥಕ್ಯ ಎದೆಗೊರಗಿದ ಅವಳಿಗೊಂತರಾ ಸಮಾಧಾನ  ಅಲಾರಾಂ ಸದ್ದಿಗೆ ಎದ್ದಾಗ ಏನೋ ಚೈತನ್ಯ ಜಗವೇ ಸುಂದರವೆನಿಸಿ ಕಾಫಿ ತಂದಿತ್ತಾಗ “ಕಲಗಚ್ಚು! ಇಷ್ಟು ದಿನವಾದರೂ ಹದವರಿತಿಲ್ಲ” ಮಾತಿಗೆ ಬೆನ್ನಾಗಿ ಕಿವುಡಾದಳು ಮೂಕಳಾದಳುಮತ್ತೆ ಎದುರಾಡಲು ಕಸುವಿಲ್ಲ ಸಮಯವಂತೂ ಮೊದಲೇ ಇಲ್ಲ  ***********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಗಝಲ್ ರತ್ನರಾಯ ಮಲ್ಲ ಮನಸು ಮರುಗುತಿದೆ ಗಾಲಿಬ್ಕನಸು ಬಳಲುತಿದೆ ಗಾಲಿಬ್ ಒಂಟಿತನವು ಮನೆ ಮಾಡಿದೆತನುವು ಸೊರಗುತಿದೆ ಗಾಲಿಬ್ ಖಿನ್ನತೆಯು ಗೂಡು ಕಟ್ಟಿದೆಹೃದಯ ನರಳುತಿದೆ ಗಾಲಿಬ್ ಬುದ್ಧಿ ಮಂಕಾಗಿದೆ ಇಂದುಮನವು ಎಡವುತಿದೆ ಗಾಲಿಬ್ ಇರುಳಲಿ ಕುಳಿತಿಹನು ‘ಮಲ್ಲಿ’ಬದುಕು ಕರಗುತಿದೆ ಗಾಲಿಬ್ ********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಹೂಗನಸು ಬಾಲಕೃಷ್ಣ ದೇವನಮನೆ ಹಿತವಾದ ಹೂಗನಸಲಿಸಂಚಾರಿ ಮಧುರ ಭಾವದುಂಬಿತಿಳಿಯಾದ ಬಾನಲ್ಲಿ ರೆಕ್ಕೆ ಹರಡಿಇಳೆಗೆ ಚಂದ್ರನನೇ ಹೊತ್ತುತಂದಿದೆ ಕತ್ತಲೆ ಮೈಗೆ ಮುಸ್ಸಂಜೆಬಳಿದ ರಂಗು ಹಾಗೇ ಉಳಿದಿದೆತಬ್ಬಿಕೊಳುವ ತೆರೆಯ ಆಟದಂಡೆಯಲಿ ಇನ್ನೂ ಮುಂದುವರಿದಿದೆ… ಎಲೆಯುದುರಿದ ಶಿಶಿರಕೆತಂಗಾಳಿ ಬೀಸಿ ಚೈತ್ರ ಬಂದಿದೆಹೂ ದಳದ ಮೇಲೆಇಬ್ಬನಿ ಸಾಲು ಸಂತೆ ತೆರೆದಿದೆ ಚಿಗುರು ಮೊಗ್ಗಿನ ಮನಸುಪರಿಮಳದ ಪಯಣ ಹೊರಟಿದೆತುಂತುರು ಹನಿಗಳ ಹಿಂಡು ರೆಪ್ಪೆ ತೆರೆದುಹೂಗನಸಿಗೆ ಬೆಳಕು ಹರಿದಿದೆ **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಮಳೆಹಾಡು-2 ಆಶಾ ಜಗದೀಶ್ ಚಿಟಪಟ ಸದ್ದಿಗೆ ಸೋಲದ ಗುಂಡಿಗೆಇದೆಯೇ ಹೇಳು ಮಳೆ ಹನಿಯೇ… ಗೂಡಿನೊಳಗೆ ಬಚ್ಚಿಟ್ಟುಕೊಂಡಗುಬ್ಬಿ ಕಣ್ಣ ಬೆರಗು ನೀನುನೆಂದ ಗರಿಗಳ ಹರವಿ ಒಣಗಿಸಿಕೊಳ್ಳುವಾಗಕಾಡಿದ ಕಾಡುವ ನೆನಪು ನೀನುಶಂಕು ಹೊತ್ತ ಹುಳುವಿನಕೋಡು ನೀನು ಅಂಜಿಕೆ ನೀನುನಾಚಿಕೆ ನೀನು ಮೈಯ್ಯ ಪಸೆಯೂ ನೀನು ನೂರು ವರ್ಷವನ್ನೇ ಕ್ಷಣಿಕ ಎಂದುಕೊಳ್ಳುವನಮ್ಮೆದುರು ಮಳೆಗೆ ಹುಟ್ಟಿ ಸಾಯುವಹುಳುಗಳೆಷ್ಟೋ ಎಷ್ಟೊಂದು ಪಾಠಗಳಬಿಟ್ಟು ಹೋಗುತ್ತವೆ!ಮಳೆಯೇ.. ನಿನ್ನದೊಂದು ಸ್ಪರ್ಷಕ್ಕೆಬಲಿಯಾಗಲೇಂದೇ ಹುಟ್ಟು ಪಡೆಯುತ್ತವೆಮತ್ತೆ ಮತ್ತೆ ಹುಟ್ಟಿ ಸಾಯುತ್ತವೆ ನಾವು ಮಳೆಯೊಂದರ ಹನಿಯನ್ನೂಒಳಗಿಟ್ಟುಕೊಳ್ಳಲಾಗದೆ ಕುಡಿದುಹೊರ ಚೆಲ್ಲುತ್ತೇವೆ…ಆರದ ದಾಹವನ್ನು ಪೊರೆಯುತ್ತಾಮಳೆಯ ಕರೆಯುವ ವಿಧಾನವನ್ನುಮರೆಯುತ್ತೇವೆ ಮಳೆಯೇ ಈಗೊಂದು ಹಾಡನ್ನುಗುನುಗಬೇಕೆನಿಸುತ್ತಿದೆನಿನ್ನದೇ ಪಲ್ಲವಗಳ ಹಾಡೊಂದನ್ನು ಕಟ್ಟಿನಿನ್ನನ್ನು ಮುಚ್ಚಟೆಯಿಂದಕರೆಯಬೇಕೆನಿಸುತ್ತಿದೆಸೋ….. ಗುಟ್ಟುತ್ತಾ…ರಿಮಝಿಮ ತಾಳಕ್ಕೆ ಸರಿಗಟ್ಟಿ…. **********

ಕಾವ್ಯಯಾನ Read Post »

ಕಾವ್ಯಯಾನ

ನಾವು ಪ್ರಜ್ವಲಿಸಬೇಕು’

 ‘ ವಸುಂಧರಾ ಕದಲೂರು ಸೂರ್ಯನನ್ನು ನಮ್ಮಿಂದ ಬಚ್ಚಿಟ್ಟಿದ್ದಾರೆ.ನಾವಂತೂ ಕತ್ತಲಲ್ಲಿ ಕೂರುವಜಾಯಮಾನದವರಲ್ಲ, ಹುಡುಕುತ್ತೇವೆಬೆಳಕಿನ ನಾನಾಮೂಲಗಳನ್ನುನಮ್ಮ ಹಾದಿಗಳಲಿ. ನಮಗೆ ಬೆಳಕು ಬೇಕಿದೆ. ಅವರು ಬಂದೂಕು ತೋರುತ್ತಾರೆಉಸಿರು ಬಿಡಬಾರದೆಂದು ನಮಗೆಭಯವೆಂಬುದು ನಿರ್ಧಾರಕವಲ್ಲ ಕಡೆಗೆನಿರ್ಣಾಯಕವೂ ಅಲ್ಲ. ನಮಗೆ ಉತ್ತರ ಬೇಕಿದೆ. ಹಸಿದ ಬದುಕಿಗೆ ಹಳಸಿದ ಮೇಲೋಗರವೇಮೃಷ್ಟಾನ್ನ ಎಂಬ ಆಸೆಹುಟ್ಟಿಸುವಕನ್ನಕೋರರು ನಮ್ಮ ಕನಸಿನ ತಿಜೋರಿಗೆಹುಡುಕಾಡುತ್ತಾರೆ ಸದಾ ಎಚ್ಚರಿರುವನಾವು ಮಲಗುವುದಿಲ್ಲ. ನಮಗೆ ಜಾಗೃತಿ ಬೇಕಿದೆ ನಿಡುಗಾಲದ ಮೌನಕ್ಕೆ ದನಿಯ ತುಂಬುತ್ತಾ, ಅನುಗಾಲದ ನೋವಿಗೆ ಮುಲಾಮು ಹಚ್ಚುತ್ತಾಸಂತೈಸುವ ನಮ್ಮದೇ ಕೈಗಳನ್ನು ನಾವೀಗಬಲಪಡಿಸಬೇಕಿದೆ, ನಮಗೆ ನಿಯತ್ತಿನ ಹೆಗಲು ಬೇಕಿದೆ. ಮಣಭಾರದ ದುಃಖ ಮರೆತು ತೆರೆದುಕೊಳ್ಳಲುನಾವು ನಿರುಮ್ಮಳಾಗಬೇಕು. ನಮಗೆ ನ್ಯಾಯ ಬೇಕು ನಮ್ಮ ದನಿಗೆ ಕಿವಿ ಬೇಕು, ನಮಗೆ ಶಕ್ತಿ ಬೇಕು.ಸ್ವಯಂ ಪ್ರಜ್ವಲಿಸಲು ನಾವೇ ಉರಿಯಬೇಕು.ನಮಗೆ ಹೊಳೆವ ಯುಕ್ತಿ ಬೇಕಿದೆ. ********* .

ನಾವು ಪ್ರಜ್ವಲಿಸಬೇಕು’ Read Post »

ಕಾವ್ಯಯಾನ

ಕಾವ್ಯಯಾನ

ನೆಲ ಮುಗಿಲು ಫಾಲ್ಗುಣ ಗೌಡ ಅಚವೆ. ಗುಡ್ಡಗಳ ಮಲೆಯನ್ನು ತಬ್ಬಿ ಮಲಗಿದೆ ಬಾನುಮುಸುಕಿ ಮುದ್ದಾಡುತಿದೆ ಮಂಜು ತಾನು ಚಂದಿರನ ರಮಿಸುವ ಅಬ್ಬರದ ಕಡಲಂತೆಹಿಮ ಹೊದಿಕೆ ಹೊದೆಯುತಿದೆ ಇಳೆಯು ತಾನು ಸಂಗೀತದಾಲಾಪ ಅನುರಣಿಸುತಿದೆ ಇಲ್ಲಿಕಲೆಯ ಸಾಕ್ಷಾತ್ಕಾರ ಸಾಕಾರವಿಲ್ಲಿ ದಿಗಂತದಾಚೆಯೂ ವ್ಯಾಪಿಸಿದೆ ಅಗಸವುಅಲೆವ ನದಗಳನೇರಿ ತಾನು ಸೂರ್ಯನನು ಮರೆಸುತ್ತ ಏಕಾಂತವ ಸರಿಸಿಲೋಕಾಂತ ಸಾರಿತಿದೆ ಮರವು ತಾನು ಸಾಲು ಬೆಟ್ಟಗಳೆಲ್ಲ ನಿನ್ನಂತೆ ಕಾಣುತಿವೆಪ್ರಕೃತಿಯಂತಿಹ ನಿನ್ನ ತಬ್ಬಿ ಹಿಡಿದುಹೂಮಳೆಯ ದನಿಯಂತ ಹೂನಗೆಯು ನಿನ್ನದುಮಳೆಯುಂಟು ನಿನ್ನ ಹೆಸರಿನೊಳಗು! *******

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ಬರೆಯುವ ನಿತ್ರಾಣದ ತಾಣ ನೂರುಲ್ಲಾ ತ್ಯಾಮಗೊಂಡ್ಲು ಬರೆಯುವುದೆಂದರೆ ಬಿಳಿಯಾದ ಪರ್ವತಗಳ ಮೇಲೆಹಾರುವ ಹಕ್ಕಿಗಳ ರುಜುವಲ್ಲಕೊರಳೆತ್ತಿ ಕೂಗುವ ಕೋಗಿಲೆಯ ರೆಕ್ಕೆ ಪುಕ್ಕಗಳೊಳಗಿನ ಹೇನಿನ ಕಡಿತದ ಕುರಿತು ದಾಖಲಿಸುವುದು ಪಾಡು ಹಾಡಾಗುವ ಮಣ್ಣು ಬೀಜ ಗರ್ಭದ ತಪ್ತತೆ ಆವಾಹಿಸುವುದುಹೂವು ಹಣ್ಣು ಪತ್ರ ಮಾಗಿ ಬಾಗಿ ಶಿಶಿರದಲಿ ನಡುಗಿ ಕೊರಗಿಕೊನೆಗೆ ಪತ್ಝಡ್ ನಲಿ ಉದುರುವಅದರ ಕೊನೆಯುಸಿರ ನಾದವನು ಎದೆಗಿಳಿಸುವುದು ಬರಿ ಬೆಳಗು ಬಣ್ಣಗಳ ಪದಗಳೇ ಬೇಕಿಲ್ಲಸೂರ್ಯ ಚಂದ್ರರ ಕವಿತೆಯ ಬನಿಗೆಕರುಳು ಕತ್ತರಿಸುವ ಕರಾಳ ಇರುಳ ಇಳೆಯಲಿನೆಲ-ನೊಸಲು ಪದಗಳ ನಿಟ್ಟುಸಿರುದುಮುಗುಡಬೇಕು ಕಸುಬುದಾರಿಕೆಯಲಿ ಜನಮನದ ಪ್ರಭುತ್ವದ ಮೋಹ, ದೈವಪರತೆರಂಗಸ್ಥಳದ ಪರದೆ ಹಿಂದಿನ ಗುಲಾಮಿತನವಿದ್ದಂತೆಕಲೆಗೆ ಜೀವಸೆಲೆ ,ಕೃತಜ್ಞತೆ ಇಲ್ಲವೆಂದ ಮೇಲೆಯಾವ ಕಸುಬಿನ ನೆಲೆಯೂ ಕೊಲೆಯ ತಾಣವೇ. **********

ಕಾವ್ಯಯಾನ Read Post »

ಕಾವ್ಯಯಾನ

ಕಾವ್ಯಯಾನ

ನೀ ಬದಲಾದರೆ ನಾಗರಾಜ್ ಹರಪನಹಳ್ಳಿ ಆಕೆ ಎದುರಾದಾಗ ಹೀಗೆಒಂದು ಪ್ರಶ್ನೆ‌ ಎಸೆದಳುನೀ ಬದಲಾದರೆ…. ನಾ‌ ಸ್ವಲ್ಪ ಹೊತ್ತು ಮಾತಾಡಲಿಲ್ಲ ಆಕೆ ಒತ್ತಾಯಿಸಿದಳುತುಟಿಗೆ ಮುತ್ತಿಟ್ಟು ಮತ್ತೆ ಕೇಳಿದಳುನೀ ಬದಲಾದರೆ ?? ದೀರ್ಘ ನಿಟ್ಟುಸಿರು ಬಿಟ್ಟೆಹಾಗೂ ಹೇಳಿದೆ ;ಕನ್ನಡಿಯ ಎದುರು ನಿಂತು ಪ್ರಶ್ನಿಸಿಕೊ ಎಂದೆ ಮತ್ತೆ ಅವಳೆಡೆಗೆ ಹೊರಳಿಕತ್ತು ಬಳಸಿ ,ಹೆರಳಿನ ಹಿಂಬಾಗಕೆ ಮುತ್ತಿಟ್ಟು ಹೇಳಿದೆ;ಸೂರ್ಯನ ಗಮನಿಸುಆಕಾಶ ಗಮನಿಸುಬಯಲ ಓದುವುದ ಕಲಿಸಮುದ್ರದ ಎದುರು ನಿಂತುಅದರ ರೋಧನವ ಅರಿ ಮನುಷ್ಯರ ಬದುಕಿನ‌‌ ದೇಹದ‌ ನಶ್ವರತೆಯ ಅವಲೋಕಿಸು ಹಾಗೂ ….ಹಾಗೂನನ್ನ ಕಣ್ಣುಗಳ ದಿಟ್ಟಿಸುನನ್ನ ತೋಳಿನಲ್ಲಿ ಸುಮ್ಮನೆ ಕರಗಿ‌ಹೋಗು….. ಚಾಡಿಗಳ ಜಾಡಿಸಿ ಒದೆಕಿವಿ ಕಚ್ಚುವವರ ಕುಡಗೋಲಿನಿಂದ‌ ಕೊಚ್ಚಿಹಾಕುಹಾಳು ಹಡಬೆ ರಂಡೆಯರಮಾತಿಗೆ ಅಡುಗೆ ಮನೆಯ ಲಟ್ಟಣಿಗೆಯಿಂದ ತಿವಿ ನಾನು ಉರಿವ ಕೆಂಡದಂಡೆ ದಿಗ್ಭ್ರಮೆಗೊಳ್ಳುವಂತೆ ಹರಿವ ನದಿ…ಜಗದ ಮೌನ ಗರ್ಭೀಕರಿಸಿಕೊಂಡ ಕಣಿವೆಸುಮ್ಮನೆ ನನ್ನೆದುರು ಕುಳಿತು ಅಪ್ಪಿ ಆಲಂಗಿಸು … ನೀ ಬದಲಾದರೆ ಎಂಬ ಪ್ರಶ್ನೆಗಳ ಹುಟ್ಟಿದಲ್ಲಿ ನೇತು ಹಾಕು ಬಿಮ್ಮನೆ ಘಮ್ಮನೆ ಮಘ ಮಘಿಸುವ ಮಲ್ಲಿಗೆಯಂತೆ ಪ್ರೀತಿಸು, ಪ್ರೀತಿಸು…; ಅಪ್ಪಟವಾಗಿ ಪ್ರೀತಿಸು…ಪ್ರೀತಿ ಬೆಳಕೆಂಬ ಬೆಳಕಿನ ಬೆನ್ನು ಹತ್ತು…. *********************

ಕಾವ್ಯಯಾನ Read Post »

You cannot copy content of this page