ಕಾವ್ಯಯಾನ
ನಿಮ್ಮ ಸ್ಥಿತೀನೂ ಇದೇನಾ ಗಾಯತ್ರಿ ಆರ್. ಟ್ರಿಣ್….ಟ್ರಿಣ್….ಟ್ರಿಣ್… ರಿಂಗಣಿಸಿತು ಮನೆಯ ದೂರವಾಣಿ ಅತ್ತಲಿಂದ ಬಂತೊಂದು ಧನಿ ಕರ್ಕಶವಾಗಿ ಈ ಯುಗಾದಿಗೆ ರಜೆ ಇಲ್ಲ ನಾವು ಬರಲ್ಲ ಕಾಯಬೇಡಿ ನಮಗಾಗಿ ವಾರದಿಂದ ಮಗ, ಸೊಸೆ, ಮೊಮ್ಮಕ್ಕಳು ಬರುವರೆಂದು ಮಾಡಿದ ಸಿಹಿ ತಿಂಡಿಗಳೆಲ್ಲಾ ಅವಳ ನೋಡಿ ನಗುತ್ತಿತ್ತು ವ್ಯಂಗ್ಯವಾಗಿ. ಅಹ..ಹಾ ಅಹ…ಹಾ ಅಹ…ಹಾ. ಮನೆಯ ಮೂಲೆಯ ಪಲ್ಲಂಗದಲ್ಲಿ ಪವಡಿಸಿದ್ದ ಪತಿರಾಯ ಮಡದಿಯ ಹುಸಿನಗುವಿಂದ ಎಲ್ಲವನ್ನೂ ಅರಿತೆಂದ ನಿನ್ನ ಮನೆಕಾಯ ನನ್ನನ್ನೂ ಬಿಡದೆ, ನಿನಗೂ ಆಗದೆ, ಸಿಹಿ ಕರಿವಾಗ ನೋಡಿಲ್ಲಿ ಆದ ಸುಟ್ಟಗಾಯ ಹಚ್ಚುತ್ತಲೇ ಮುಲಾಮು ಹೇಳಿದಳು ಬೇಗ ಆಗುವುದು ಗುಣ ನಿಮ್ಮ ಗಾಯ ಇಟ್ಟಿರುವಿರೇ… ನಿಮ್ಮಬಳಿ ಕಾಣದ ನನ ಗಾಯಕ್ಕೆ ಔಷಧಿಯ ಉತ್ತರವಿಲ್ಲ!! ಇಬ್ಬರ ಕಣ್ಣುಗಳ ನಡುವೆ ಮೌನ ಮೆಲ್ಲ ಮೆಲ್ಲನೆ ಹಾಕಿತ್ತು ಕೇ…ಕೇ ಹಿಹಿಹೀ…ಹಿಹಿಹೀ…ಹಿಹಿಹೀ. ಜಾಗತೀಕರಣವೇನೋ ಮಾಡಿತು ವಿಶ್ವವನ್ನೇ ಒಂದು ಕುಟುಂಬವನ್ನಾಗಿ ಬಡ ರಾಷ್ಟ್ರಗಳು ಸಾಗಿದವು ಅಭಿವೃದ್ಧಿಯತ್ತ ದಾಪುಗಾಲಾಕಿ ಆದರೇನು? ಮಾನವ ಸಂಬಂಧಗಳು ಹೊರಳಾಡುತಿದೆ ಡೋಲಾಯಮಾನವಾಗಿ ಹೀಗೆಂದು ಚಿಂತಿಸುತ್ತಿರುವಾಗಲೇ ಆಕೆಗೆ ಬಂತೊಂದು ತಂತಿ! ನಾಳೆ ನಾವು ಬರುವೆವು ಅದನೋದಿದ ಆಕೆಯ ಕಾಲು ಕುಣಿಯಿತು ಪಾಡು ತಾ ಗಾನ ಆ…ಆ…ಆ.ಅಹಾಹ… ಲಗುಬಗೆಯಿಂದ ಎಡವಿ ಎಡವದಂತೆ, ಬಿದ್ದು ಬೀಳದಂತೆ ಓ…ಡುತಾ ಅಡುಗೆ ಕೋಣೆಗೆ ಕೈ ಹಾಕಿ ತಿಂಡಿ ಡಬ್ಬಿಗೆ ಕೇಳಿದಳು ಈಗೇನಂತಿ? ಮತ್ತದೇ ಮನೆಯ ಮೂಲೆಯಿಂದ ಬಂತೊಂದು ಸಶರೀರ ವಾಣಿ ಬೀಗಬೇಡ ಮಾರಾಯ್ತಿ… ಇದಕ್ಕೆಲ್ಲಾ ಕಾರಣ ಕರೋನ ಮೀಟಿದ ಕೃತಕ ತಂತಿ! ಕೃತಕವೋ… ನೈಸರ್ಗಿಕವೋ .. ಅಂತೂ ನಿಜ ನುಡಿದಿತ್ತು ಮುಂಜಾನೆಯ ಹಾಲಕ್ಕಿ. ಕೆಡುಕಿನಲೂ ಕರೋನ ಕರುಣಿಸಿತೇ ಕ..ರು..ಣಾ ..? ತೆರಳು ಬಾರದೂರಿಗೆ ಕರೋನ ಎಂದೆದ್ದ ಅವಳ ಕೈ ಅವಳಿಗರಿವಿಲ್ಲದೇ ಗುಡಿಯ ದೇವಿಗೆ ಸಲಿಸಿತು ನಮನ ಹಾಡುತಾ ಸವಿಗಾನ ಆ..ಹ.ಹಾ..ಹಾ..ಹಾ..ಹಾ **************









