ಕಾವ್ಯಯಾನ
ಮೌನ ಮಲ್ನಾಡ್ ಮಣಿ ನೀರವ ಮೌನ, ಸುಯಿಗುಡುತಿದೆ ತಂಗಾಳಿ, ಒಂದೇ ಸಮ ಜಿಂಗುಟ್ಟುತಿದೆ ಜಿರುಂಡೆ, ಜೆಡ್ಡು ಗಟ್ಟಿದ ಮನಸ್ಸು. ಮಳೆ ತೊಟ್ಟಿಕ್ಕಿದರು,ಮರ ಚಿಗುರೊಡೆದರು ತರಗೆಲೆ ರಾಶಿ ರಾಶಿಯಾಗಿ ಬಿದ್ದಿದೆ. ಮನಸ್ಸು ಮರಗಟ್ಟಿದೆ ಪೈರು ತೆನೆಯೊಡೆದರು, ಒಣಹುಲ್ಲುಗಳ ರಾಶಿಯಲ್ಲಿ. ಕಾಯ ಕಳೆದು ಕೊಂಡಿದೆ ಅಂತಃ ಶಕ್ತಿ, ಕಳೆಬರ ಮಾತ್ರವೇ ಉಳಿದಿದೆ ಮಣ್ಣಿನೊಡಲಿನಲಿ. ಹರಿದ ಅರಿವೆಗೆ ತೇಪೆ ಹಚ್ಚುತ್ತಿದೆ ಅದೇ ಹರಕು ಭಾವ ಮೊಂಡು ಸೂಜಿ ದಾರ ಹಿಡಿದು. ವಸಂತ ಇದ್ದರು ಸಂತಸವಿಲ್ಲ, ಸಂಕ್ರಮಣ ಕಾಲ ಅರಿವಿಲ್ಲ, ಹರಿದಾಡುವ ಭಾವವಿಗ ವ್ಯಭಿಚಾರಿ. **********









