ಕಾವ್ಯ ಸಂಗಾತಿ
ಡಾ.ರೇಖಾ ಉದಯ್
ಗಜಲ್


ನಿನ್ನೊಳಗಿನ ಸೆಳೆತಕ್ಕೆ ಸೋತಿದ್ದೇನೆ ಕವಿತೆ
ನನ್ನೊಳಗಿನ ಭಾವನೆಗಳ ಹೇಳಿದ್ದೇನೆ ಕವಿತೆ
ಸೋತು ಗೆದ್ದು ನನ್ನೊಳಗೆ ನೀನಾಗಿದ್ದೀಯಲ್ಲೇ
ನಿನ್ನಿಂದ ನವೀರಾದ ಭಾವ ತಾಳಿದ್ದೇನೆ ಕವಿತೆ
ದುಗುಡ ದುಮ್ಮಾನಗಳ ಸರಸಿ ಆವರಿಸಿದ್ದಿಯಲ್ಲೇ
ನೀನಿಲ್ಲದ ನಾನು ಶೂನ್ಯಳೆಂದು ಕೇಳಿದ್ದೇನೆ ಕವಿತೆ
ಮುದುಡಿದ ಮನಸ್ಸಿಗೆ ಹೊಸ ಸಂಚಲನ ಮೂಡಿಸಿದೆ
ನನ್ನಲ್ಲಿ ತಿಳಿಯದೆ ನೀ ಅವಿತದ್ದು ನೋಡಿದ್ದೇನೆ ಕವಿತೆ
ಒಣಗಿದ ಮರದಲ್ಲಿ ಹೊಸ ಚಿಗುರ ಕಂಡಂತಾಗಿದೆ
ರೇಖೂಳ ಮೇಲಿರುವ ಆ ಒಲವಿಗೆ ನಕ್ಕಿದ್ದೇನೆ ಕವಿತೆ
ಡಾ.ರೇಖಾ ಉದಯ್



