ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಯುದ್ದ ನಿರ್ನಾಮ”


ಮಾನ ಉಳಿಸಿ ದ್ವೇಷ
ಅಳಿಸಲು ಕಾಲವಿನ್ನು ಬೇಕೇನು?
ಪ್ರಾಣ ಹುಡುಕಿ ಕೊಂದವರಿಗೆ
ಅಣ್ವಸ್ತ್ರದ ಬಳಕೆಯ ಅಗತ್ಯವೇನು?
ನೊಂದ ಆ ಜೀವಗಳು ಶಾಂತಿ
ಬಯಸಿ ಪ್ರತಿಭಟಿಸಿದ್ದು ತಪ್ಪೇನು?
ಕೊಂದ ಪಾಪವು, ನೊಂದ ಹೆತ್ತವರ
ಮನಸ್ಸಿನಾಳದ ಘಾಸಿಯನು ಅಳಿಸಿತ್ತೇ?
ಹೊಗೆ, ಶಬ್ದ, ಬೆಂಕಿ, ಸೈರನ್
ದ್ರೋನ್ ಕ್ಷಿಪಣಿಗಳ ನರ್ತನ ನಿಲ್ಲಿಸಿ,
ಹಗೆ ಹಳೆಯ ಬಿಟ್ಟು ನಗೆಯ ಸೂಸಿರಿ,
ಕೈಯ ಕುಲುಕಿ, ಶಾಂತಿಯ ಮರು ಸ್ಥಾಪಿಸಿ.!
ಹಮೀದ್ ಹಸನ್ ಮಾಡೂರು.



