ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಒಂಟಿ ಹೃದಯದ ಮೂಲೆ
ಮೂಲೆಯಲಿ  ಕತ್ತಲು ಕವಿದಾಗ  
ಯಾರೋ ಸಣ್ಣ ದೀಪ   ಹಚ್ಚಿದ ಭಾವ  
ಆಸರೆಯಾಗಿ ಬರುವುದು ನೋಡಾಗ

ಕಣ್ಣೀರ ಹನಿಯ ಜೊತೆ ಮಾತನಾಡುವ  
ಗಾಳಿಯ ಸ್ಪರ್ಶವೇ ಸಾಂತ್ವನ  
ಮೌನದ ನಡುವೆ ಬೆಳಕು ಹರಡುವ  
ಭರವಸೆಯದೇ ಒಂದು ಬಂಧನ

ನೀ ಒಂಟಿಯಲ್ಲ, ಜಗವೇ ಜೊತೆಯಿದೆ  
ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ  
ನಿನ್ನ ನೋವಿಗೂ ಒಂದು ಅರ್ಥವಿದೆ  
ಬದುಕು ಚಿಗುರುವುದು ವಸಂತ ನಿನಗಾಗಿ

ಕಾಲ ನೋವನ್ನು ಮಾಯಿಸುವ ಮಂತ್ರ  
ನಾಳೆಯೆಂಬ ಕನಸೇ ಆಸರೆ  
ಎದ್ದು ನಿಂತರೆ ಸಾಕು ಗೆಳತಿ  
ಒಂಟಿತನವೂ ತಾನೆ ದೂರ ಸರಿವ ಕರೆ


About The Author

1 thought on “ಡಾ ಶಶಿಕಾಂತ ಪಟ್ಟಣ ರಾಮದುರ್ಗ ಅವರ ಕವಿತೆ “ಒಂಟಿತನಕೆ ಆಸರೆ””

Leave a Reply

You cannot copy content of this page

Scroll to Top