ಪುಸ್ತಕ ಸಂಗಾತಿ
ಗೊರೂರು ಅನಂತರಾಜು
ಹೆಚ್ ಎಸ್ ಗೋವಿಂದಗೌಡ
“ಕಂಪನಿ ಕಲಾವಿದರು”ಅವಲೋಕನ


ಅರಕಲಗೊಡು ತಾ. ಹನ್ಯಾಳು ಗ್ರಾಮದ ಹೆಚ್.ಎಸ್.ಗೋವಿಂದಗೌಡರು ಸದ್ಯ ಮೈಸೂರು ವಾಸಿ. ಪೌರಾಣಿಕ ರಂಗನಟರಾದ ಇವರು ರಂಗಕೃತಿಗಳ ಪ್ರಕಟಣೆ ಕೂಡ ಮಾಡುತ್ತಾ ರಂಗಸೇವೆಯಲ್ಲಿ ತಮ್ಮದೇ ಪಾತ್ರ ನಿರ್ವಹಿಸುತ್ತಿದ್ದಾರೆ. ಮೊನ್ನೆ ಇವರನ್ನು ಮನೆಯಲ್ಲಿ ಭೇಟಿಯಾದೆ. ಇತ್ತೀಚಿಗೆ ಮೈಸೂರಿನಲ್ಲಿ ಬಿಡುಗಡೆಯಾದ ಕೆಲವು ರಂಗಕೃತಿಗಳನ್ನು ನೀಡಿದರು. ಅದರಲ್ಲಿ ಕಂಪನಿ ಕಲಾವಿದರು ಒಂದು. ಇದರಲ್ಲಿ ನಾಟಕ ಕಂಪನಿಗಳ ಕಲಾವಿದರನ್ನು ಮಾತ್ರ ಪರಿಚಯ ಮಾಡಿದ್ದೇನೆ ಎಂದರು. ನಾನು (ಗೊರೂರು ಅನಂತರಾಜು) ೨೦೧೧ರಲ್ಲಿ ಪ್ರಕಟಿಸಿದ ಅಭಿನಯ ಅಭಿವ್ಯಕ್ತಿ ಕೃತಿಯಲ್ಲಿ ಸುಮಾರು ೧೫೦ ಮಂದಿ ರಂಗ ಕಲಾವಿದರನ್ನು ಪರಿಚಯಿಸಿದಂತೆಯೇ ಲೇಖಕರು ನಾಟಕ ಕಂಪನಿ ಕಲಾವಿದರ ಕಿರು ಪರಿಚಯ ಮಾಡಿರುವರು. ಅರಮನೆಯಲ್ಲಿ ಪ್ರತಿವರ್ಷ ಗೌರಿ ಹಬ್ಬದಲ್ಲಿ ಗೌರಿಪೂಜೆ ಮಾಡುತ್ತಿದ್ದರಾದ್ದರಿಂದ ಗೌರಿ ನರಸಿಂಹಯ್ಯ ಎಂದೇ ಕರೆಯಲ್ಪಟ್ಟ ಗೌರಿ ನರಸಿಂಹಯ್ಯನವರು ಹರಿಶ್ಚಂದ್ರ, ಶೂರಸೇನ, ರತ್ನಾವಳಿ, ಮಂದಾರವಲ್ಲಿ, ದ್ರೌಪದಿ, ಚಂದ್ರಮತಿ ಪಾತ್ರಗಳನ್ನು ನಿರ್ವಹಿಸಿದವರು. ೧೮೭೮ರಲ್ಲಿ ಮುಂಬೈನ ಮರಾಠಿ ಹಾಗೂ ಪಾರ್ಸಿ ನಾಟಕಗಳಿಂದ ಪ್ರಭಾವಿತರಾಗಿ ಇಂದ್ರಸಭಾ ಬಾಣಾಸುರೋಪಾಖ್ಯಾನ ನಾಟಕ ೧೮೮೧ರಲ್ಲಿ ಅಂದಿನ ದಿವಾನರು ರಂಗಾಚರ‍್ಲು ಅವರ ಅಧ್ಯಕ್ಷತೆಯಲ್ಲಿ ನಾಯಕನ ಪಾತ್ರದಲ್ಲಿ ರಂಗಗೀತೆ ಗಾಯನದಿಂದ ಪ್ರೇಕ್ಷಕರ ಮನಸೂರೆಗೊಂಡವರು ಮಂಡ್ಯ ರಂಗಾಚರ‍್ಯರು. ಉಡುಪಿ ಬಳಿಯ ನಂದಳಿಕೆ ಗ್ರಾಮದಲ್ಲಿ ೧೮೬೬ರಲ್ಲಿ ಜನಿಸಿದ ಬಿಡಾರಂ ಕೃಷ್ಣಪ್ಪನವರು ಯಕ್ಷಗಾನ ಮಂಡಳಿಯವರು ಆಡುತ್ತಿದ್ದ ದಶಾವತಾರ ನಾಟಕದಲ್ಲಿ ಸ್ತಿçà ಪಾತ್ರ ಮಾಡುತ್ತಿದ್ದರು. ವಿರಾಟಪರ್ವ ಗಯಚರಿತ್ರೆ ನಾಟಕ ಬರೆದ ಗಿರಿಭಟ್ಟರ ತಮ್ಮಯ್ಯ ನವರು ಶಾಕುಂತಲ ನಾಟಕದಲ್ಲಿ ಕಣ್ವ ಋಷಿಯ ಪಾತ್ರಕ್ಕೆ ಖ್ಯಾತಿ ಪಡೆದಿದ್ದರು. ೩೩ ವರ್ಷ ಕಲಾವಿದರಾಗಿದ್ದ ಲಕ್ಷಿö್ಮÃಪತಿಶಾಸ್ತಿç ಆಲ್ ರೌಂಡ್ ಆಕ್ಟರ್. ಅರಮನೆಯಲ್ಲಿ ವಿದೂಷಕನಾಗಿ ತೆಳ್ಳಗೆ ಕುಳ್ಳಗೆ ಇದ್ದ ಪುಟ್ಟಾರಿಶಾಸ್ತಿç ಹಾಸ್ಯ ಪಾತ್ರದಾರಿ. ಬಸವಪ್ಪ ಶಾಸ್ತಿçಗಳು ಕಾಳಿದಾಸನ ಶಾಕುಂತಲ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ ಮೇಲೆ ೧೮೮೧ರಲ್ಲಿ ಪ್ರದರ್ಶನಗೊಂಡ ಈ ನಾಟಕದಲ್ಲಿ ಅರಮನೆ ಕಂಪನಿಯ ಗಿರಿಭಟ್ಟರ ತಮ್ಮಯ್ಯ, ಲಕ್ಷಿö್ಮÃಪತಿಶಾಸ್ತಿçಗಳ ಜೊತೆಗೆ ದುಷ್ಯಂತನ ಪಾತ್ರದಲ್ಲಿ ಯಶಸ್ಸು ಗಳಿಸಿದ ನಟರು ನಟಶೇಖರ ಎಂ.ಡಿ.ಸುಬ್ಬಣ್ಣನವರು. ಅರಮನೆ ಕಂಪನಿ ೧೯೧೭ರಲ್ಲಿ ಕೊನೆಗೊಂಡು ೧೯೧೯ರಲ್ಲಿ ಶಾಕುಂತಲ ಕರ್ನಾಟಕ ನಾಟಕ ಸಭಾ ಎಂಬ ಹೆಸರಿನಿಂದ ಪ್ರಾರಂಭಗೊAಡು ಮದ್ರಾಸಿಗೆ ಪ್ರಯಾಣ ಮಾಡಿ ರಾಣಿ ಪಾತ್ರದಲ್ಲಿ ಟಿ.ನರಸೀಪುರದ ಎನ್.ಸುಬ್ಬಣ್ಣ ಮತ್ತು ರಾಜಪಾರ್ಟಿನ ವಿದ್ವಾನ್ ಬಿ.ರಾಚಪ್ಪನವರ ರಾಜನ ಪಾತ್ರದ ನಟನೆಗೆ ಜನ ಮೆಚ್ಚಿ ಬಂಗಾರದ ಪದಕ ಕೊಟ್ಟರು.
ರಂಗದಿAದ ಸಿನಿಮಾರಂಗಕ್ಕೆ ಬಂದ ಜಿ.ವಿ.ಅಯ್ಯರ್ ತಮ್ಮ ೮ನೇ ವಯಸ್ಸಿನಲ್ಲೇ ಗುಬ್ಬಿ ಕಂಪನಿ ಸೇರಿದವರು. ರಾಜವಿಕ್ರಮ ನಾಟಕದಲ್ಲಿ ಭಟ್ಟಿ ಎಂಬ ಮಂತ್ರಿ ಪಾತ್ರ ಮಾಡುತ್ತಿದ್ದ ಟಿ.ನರಸೀಪುರ ತಾ. ಮುಸುವಿನ ಕೊಪ್ಪಲು ಭಟ್ಟಿಮಹದೇವಪ್ಪ ಮತ್ತು ಮಳವಳ್ಳಿ ತಾ. ಬೆಳಕವಾಡಿಯ ಶನಿದೇವರ ಪಾತ್ರ ನಟನೆಯಿಂದ ಶನಿಮಹದೇವಪ್ಪ ಎಂದು ಖ್ಯಾತರಾದ ಇವರು ಸಿನಿಮಾ ರಂಗದಲ್ಲಿ ಬೆಳಗಿದವರು. ಹಾಸನ ಜಿಲ್ಲೆಯ ರಾಜಾನಂದ್ ೩೦ಕ್ಕೂ ಹೆಚ್ಚು ವರ್ಷ ನಾಟಕ ರಂಗದಲ್ಲಿದ್ದು ನಾಟಕಗಳನ್ನು ಬರೆದವರು. ಚಕ್ರತೀರ್ಥ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದು ೩೦೦ ಚಿತ್ರಗಳಲ್ಲಿ ನಟಿಸಿದ ಇವರ ಶ್ರೀ ಶಿರಡಿ ಸಾಯಿಬಾಬಾ ಮಹಾತ್ಮೆ, ಮಕರಜ್ಯೋತಿ ಮಣಿಕಂಠ ನಾಟಕಗಳನ್ನು ಗೋವಿಂದಗೌಡರು ಪ್ರಕಟಿಸಿದ್ದಾರೆ. ವಿಶೇಷ ಧ್ವನಿಯ ಚಿತ್ರನಟ ಕೆ.ಎಂ.ರತ್ನಾಕರ್, ಹೊ.ನ.ಪುರ ತಾ. ಜೋಡಿಗುಬ್ಬಿಯ ಕಂಚಿನ ಕಂಠದ ಚಿತ್ರನಟ ಧೀರೇಂದ್ರ ಗೋಪಾಲ್, ನಂಜನಗೂಡು ಚಿತ್ರರಂಗದ ಖಳನಟ ನಾಗಪ್ಪ, ಪೋಷಕ ಪಾತ್ರದ ಚಿತ್ರನಟ ದ.ಕ.ದ ಸದಾಶಿವ ಬ್ರಹ್ಮಾವರ್, ಚಿಂತಾಮಣಿಯ ಚಿತ್ರನಟಿ ಎಂ.ಎನ್.ಲಕ್ಷಿö್ಮÃದೇವಿ, ಚೋಮನದುಡಿ ಖ್ಯಾತಿಯ ಸ್ವರ್ಣಕಮಲ ಪ್ರಶಸ್ತಿ ವಿಜೇತ ಮೂಡುಬಿದರೆಯ ಎಂ.ವಿ.ವಾಸುದೇವರಾವ್, ಪರಸಂಗ ಗೆಂಡೆತಿಮ್ಮ ಚಿತ್ರದಿಂದ ಪ್ರಸಿದ್ಧಿಯಾದ ಡಿಂಗ್ರಿ ನಾಗರಾಜ್, ೪ನೇ ವಯಸ್ಸಿಗೆ ಬಣ್ಣ ಹಚ್ಚಿದ ಚಿತ್ರನಟ ಎಂ.ಎಸ್.ಉಮೇಶ್. ವಿಲನ್ ಆಗಿ ಚಿತ್ರರಂಗಕ್ಕೆ ಬಂದು ಹಾಸ್ಯನಟರಾದ ಮೈಸೂರಿನ ದಿನೇಶ್, ೭೫ ಚಿತ್ರಗಳಲ್ಲಿ ನಟಿಸಿ ೩ ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದ ಮಂಗಳೂರಿನ ಕಲ್ಪನಾ, ಭೂತಯ್ಯನ ಮಗ ಅಯ್ಯು ಚಿತ್ರದ ನಟನೆಗೆ ಪ್ರಶಸ್ತಿ ವಿಜೇತ ಲೋಕೇಶ್, ದೆಹಲಿಯ ರಂಗಶಾಲೆಯಲ್ಲಿ ತರಬೇತಿ ಪಡೆದ ಗುಬ್ಬಿ ವೀರಣ್ಣನವರ ಮೊಮ್ಮಗಳು ಜಯಶ್ರೀ ಬಿ. ಕಂಠದಾನ ಕಲಾವಿದೆ ಸರ್ವಮಂಗಳ, ಸುಬ್ಬಾಶಾಸ್ತಿç, ಸಂಸ್ಕಾರ, ಕಾಡು ಚಿತ್ರಗಳಲ್ಲಿ ನಟಿಸಿರುವ ಜಿ.ವಿ.ಶಿವಾನಂದ, ಚಿತ್ರರಂಗದಲ್ಲಿ ಮಿಂಚಿರುವ ಶರಣ್ ಹಾಗೂ ಶೃತಿ ಅವರ ತಂದೆ ಜಿ.ವಿ.ಕೃಷ್ಣ ಇವರ ನಾಟಕ ಕಂಪನಿಯ ಪಾತ್ರದ ಕಿರು ಪರಿಚಯ ಮಾಡಿದ್ದಾರೆ. ೧೯೭೦ರ ದಶಕದಲ್ಲಿ ಕುರುಕ್ಷೇತ್ರ ನಾಟಕವೆಂದರೆ ಪಿ.ವಜ್ರಪ್ಪ ಎಂಬ ಖ್ಯಾತಿಗೆ ಪಾತ್ರರಾಗಿದ್ದ ಇವರು ನೂರಾರು ರಂಗಗೀತೆಗಳನ್ನು ಬರೆದಿರುವರು. ಐದು ದಶಕ ವೃತ್ತಿ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿರುವ ಮಾಲತಿಶ್ರೀ ಮೈಸೂರು ಇವರ ಪರಿಚಯ ಒಳಗೊಂಡು ಎಲೆಮರೆಕಾಯಿ ಯಂತೆ ಇದ್ದು ಮರೆಯಾಗಿ ಹೋದ ಅನೇಕ ಕಲಾವಿದರನ್ನು ಪರಿಚಯಿಸಿದ್ದಾರೆ. ಅರಮನೆ ಕಂಪನಿ ಸಮಕಾಲೀನರು ಬೋಧರಾಯ, ಸಂಗೀತಗಾರ ಸದಾಶಿವರಾಯರ ಮೊಮ್ಮಗ ಸರ್ಟನ್ ರಾಮರಾವ್, ಹರ‍್ಮೋನಿಯಂ ವಾದ್ಯದ ಬೆಂಗಳೂರಿನ ಅರುಣಾ ಚಲಪ್ಪ, ಶಿವಮೊಗ್ಗದ ಸಿ.ಬಿ.ಜಯರಾಮ್, ಸದಾರಮೆ ನಾಟಕದ ಕಾಲಾಪಿಲ್ಲಯ್ಯ, ಮೈಸೂರು ಬೆಳಕವಾಡಿಯ ಶ್ರೀನಿವಾಸ ಅಯ್ಯಂಗಾರ್, ಕೋಲಾರ ಕುರುಡಿ ಗ್ರಾಮದ ಸಂಗೀತರತ್ನ ಚಿಕ್ಕರಾಮರಾಯ, ನಾಟಕ ಶಿರೋಮಣಿ ಎ.ವಿ. ವರದಾಚಾರ್ಯರ ಬುಜಭಲದಂತಿದ್ದ ಕೃಷ್ಣಮೂರ್ತಿರಾಯ, ತುಮಕೂರು ದ್ಯಾವರಾಯಪಟ್ಟಣದ ಡಿ.ಆರ್.ಕೃಷ್ಣಮೂತಿಥ, ಗುಂಡ್ಲುಪೇಟೆಯ ಕಲಿಯುಗ ಭೀಮ ಜಿ.ವಿ.ಕೃಷ್ಣಮೂರ್ತಿ, ಚಿತ್ರಕಲೆಯ ಅಚಾರ್ ಕೆ.ವಿ, ಸೊರಬ ತಾ. ಮೂಡಿಯ ಅಣ್ಣಪ್ಪ ಎಂ.ಎಸ್, ಮೈಸೂರು ಹಳೇ ಬಂಡಿಕೇರಿಯ ಹಾರ್ಮೋನಿಯಂ ಎಂ.ಶಿವಪ್ಪ, ಚಿಕ್ಕನಾಯಕನಹಳ್ಳಿಯ ಸಿ.ಎಲ್.ರಾಮರಾಜೇ ಅರಸ್, ಗುಬ್ಬಿ ಕಂಪನಿಯ ಜಿ.ವಿ. ಸುಂದರಮ್ಮ, ಪ್ರಾಕ್ಟೀಸ್ ಮೇನೇಜರ್ ಮುನಿಯಪ್ಪ, ಟಿಪ್ಪುಸುಲ್ತಾನ್ ನಾಟಕದ ಮೀರ್ ಸಾದಿಕ್ ಪಾತ್ರ ಖ್ಯಾತಿಯ ಸಾಗರ ತಾ. ಮುಡಗೋಡು ಗ್ರಾಮದ ಎಂ.ಶಾAತ ಕುಮಾರ್, ಕನ್ನಡ ರಂಗಭೂಮಿ ಚಾಣಕ್ಯ ಎಂ.ಸಿ.ಮಹದೇವಸ್ವಾಮಿ, ಹರಿಕಥೆ ಮಾಡುತ್ತಾ ಹರಿಕಥಮ್ಮ ಎಂದೇ ಕರೆಯಲ್ಪಟ್ಟ ವೆಂಕಟೇಶಮ್ಮ, ಗುಬ್ಬಿ ಕಂಪನಿ ಸ್ತಿçà ಪಾತ್ರದಾರಿ ತ್ರಿಪುರಾಂಬ, ೭೬ ವರ್ಷ ಸುಧೀಘ ರಂಗಸೇವೆಯ ಮೈಸೂರು ಆರ್. ಮಂಜುಳಮ್ಮ, ಕೆ.ಆರ್.ಪೇಟೆ ಹೊಸಹೊಳಲು ಗ್ರಾಮದ ಎಚ್.ಆರ್.ನಂಜಶೆಟ್ಟರು, ಆಂಜನೇಯ ಪಾತ್ರ ಖ್ಯಾತಿಯ ಬೆಳ್ಳೂರು ನಂಜುAಡಯ್ಯ ಉತ್ತರ ಕರ್ನಾಟಕದವರು. ಬಿ.ಎಂ.ಸೀತರಾಮರಾಜು ಜನಪ್ರಿಯ ಸಂಗೀತ ನಿರ್ದೇಶಕರು. ಗುಬ್ಬಿ ವೀರಣ್ಣರ ಮಗ ಚನ್ನಬಸವಣ್ಣ, ಪೇಂಟರ್ ಎಲ್.ನಾರಾಯಣಯ್ಯಂಗಾರ್, ಬೆಂಗಳೂರು ಪದ್ಮ ವೇಣುಗೋಪಾಲ್, ಮಾವನ ಮನೆ ನಾಟಕದ ಭಾಗೀರಥಿ ಪಾತ್ರದಾರಿಣಿ ಪ್ರಭಾ ಜಿ.ಸಿ.ಬಸವರಾಜು, ಮೇಲುಕೋಟೆ ಎಂ.ಎನ್.ಪ್ರೇಮಕುಮಾರಿ ಕೂಡಿ ಬಾಳೋಣ ಚಲನಚಿತ್ರದಲ್ಲಿ ನಟಿಸಿರುವರು. ೯೮ ವಯಸ್ಸಿನ ಕುಪ್ಯ ಎಂ.ಎಸ್.ವೆAಕಟರಾA ಲೇಖಕರಿಗೆ ತಾವು ಕಂಡ ಇಲ್ಲಿಯ ಕೆಲವು ನಟರ ಪಾತ್ರಾಭಿನಯ ಮಾಹಿತಿ ನೀಡಿರುವರು. ಇವರ ಪರಿಚಯವನ್ನು ನಾನು ನಿಂತು ಹೋದ ರಂಗವೈಭವ ಪುಸ್ತಕದಲ್ಲಿ ಮಾಡಿರುವೆನು. ಉಡುಪಿ ಕಡೆಯ ಬಂಗೇರ ಐತಪ್ಪ, ಮೇಕಪ್ ಮಾಡುವ ತರೀಕೆರೆ ಕೃಷ್ಣಮೂರ್ತಿ, ಸ್ತಿçà ನಾಟಕ ಮಂಡಳಿ ನರ್ತಕಿ ಎಂ.ಕೆ.ಸುಜಾತ, ಚನ್ನರಾಯಪಟ್ಟಣ ತಾ. ಚಿಕ್ಕೋನಹಳ್ಳಿಯ ಸಿ.ವಿ.ವೀರಭದ್ರಾಚಾರ್, ಶೃಂಗೇರಿಯ ಪ್ರಸಿದ್ಧ ನಟಿ ಬಿ.ಎಸ್.ಮಂಜುಳಾ ಅವರ ಸಹೋದರಿ ಬಿ.ಎಸ್.ಪೂರ್ಣಿಮ, ಗುಬ್ಬಿ ತಾ. ಒಡೆಯರ್ ಮಟಿಘಟ್ಟ ಗ್ರಾಮದ ಚನ್ನಬಸವಯ್ಯ, ಮೈಸೂರು ಟಿ.ಎಸ್. ದೊರೆಸ್ವಾಮಿ, ಅರಸೀಕೆರೆ ತಾ. ಯೆರಗೇನಹಳ್ಳಿಯ ರಂಗಸAಗೀತ ಶಿಕ್ಷಕರು ವೈ.ಎಂ.ಪುಟ್ಟಣ್ಣಯ್ಯ, ೨ನೇ ಮಳವಳ್ಳಿ ಸುಂದರಮ್ಮ ಎಂದು ರಂಗದಿಗ್ಗಜ ಹೊನ್ನಪ್ಪ ಭಾಗವತರಿಂದ ಕರೆಸಿಕೊಂಡಿದ್ದ ಮೈಸೂರಿನ ಕಲಾವತಿ, ಶ್ರೀಕೃಷ್ಣಲೀಲೆ ನಾಟಕದಲ್ಲಿ ಕೃಷ್ಣನ ಪಾತ್ರ ಮಾಡಿ ರಂಗನಾಯಕಿ ಎಂದು ಮರುನಾಮಕರಣಗೊಂಡ ಬೆಂಗಳೂರಿನ ನಿರ್ಮಲ, ಕೋಲಾರದ ಕಲಾರತ್ನ ಕೆ.ಎನ್.ಬಸವರಾಜು, ಮಂಡ್ಯದ ಎನ್.ಶಾಂತಮ್ಮ, ಇಂದಿಗೂ ನಟಿಸುತ್ತಿರುವ ಮೈಸೂರಿನ ಎಸ್.ಸರೋಜಿನಿ, ಆಲನಹಳ್ಳಿಯ ಎ.ಪಿ.ರಾಜಪ್ಪ, ನಂಜನಗೂಡು ತಾ. ಬಿಳಗಲಿ ಗ್ರಾಮದ ಸುಲೋಚನ ಇವರಿಗೆೆ ನಾಟಕ ಅಕಾಡೆಮಿ ಪ್ರಶಸ್ತಿ ದೊರಕಿದೆ. ಇತ್ತೀಚಿಗೆ ೨೭-೧-೨೦೨೬ರಂದು ನಿಧನರಾದ ಮಂಡ್ಯ ನಾಗರಾಜಾಚಾರ್ ಇವರು ಹಾಸನದಲ್ಲಿ ರಾಮಾಯಣ ನಾಟಕ ಕಲಿಸಿ ಅವರನ್ನು ಮಾತನಾಡಿಸಿದ್ದೆನು. ಚಿಕ್ಕನಾಯಕನಹಳ್ಳಿಯ ಹಾಸ್ಯ ಕಲಾನಿಪುಣ ಬಿ.ಕೆ. ಪಂಚಲಿAಗಯ್ಯ ಇವರ ಚಿಕ್ಕಪ್ಪ ರಂಗದಿಗ್ಗಜ ಸಿ.ಬಿ.ಮಲ್ಲಪ್ಪನವರು. ಕಲಾತಪಸ್ವಿ ಬಿ.ಕೆ.ಈಶ್ವರಪ್ಪ ಇವರ ರಂಗಪರಿಚಯವನ್ನು ನಾನು ಹೊಟ್ಟೆಪಾಡಿನ ಮಾರ್ಕೆಟಿನಲ್ಲಿ ಸುಳ್ಳಿನ ಮಾರಾಟ ಕೃತಿಯಲ್ಲಿ ಮಾಡಿರುವೆನು. ತುಮಕೂರು ಮಲ್ಲಸಂದ್ರದ ಡಾ.ಲಕ್ಷö್ಮಣದಾಸ್ ಇದೇ ಕೃತಿಗೆ ಆಶಯನುಡಿ ಬರೆದಿರುವರು. ಚಾಮರಾಜನಗರ ಆಲೂರು ಗ್ರಾಮದ ನಾಗರಾಜು, ತಬಲವಾದಕ ವಿ.ಎಂ.ಧನಪಾಲ್, ಕೊಪ್ಪಳ ಕುಕನೂರಿನ ಸರಸ್ವತಿ ಜುಲೇಖಾ ಬೇಗಂ, ತಿಪಟೂರಿನ ಟಿ.ಎಚ್.ಹೇಮಲತ, ಈಗಲೂ ರಂಗದಲ್ಲಿರುವ ಅರಳಗುಪ್ಪೆಯ ಎನ್.ಸುಮಿತ್ರಮ್ಮ, ಇದೇ ಊರಿನ ನೀಲಕಂಠಾಚಾರ್, ಕಾಮಿಡಿ ಪಾತ್ರದಾರಿ ಎಂ.ನಾಗರಾಜ್ ಇವರ ದೊಡ್ಡಪ್ಪ ಚಿತ್ರನಟ ಡಿಕ್ಕಿಮಾಧವರಾವ್. ಮೈಸೂರಿನ ಕಲಾವಿದೆಯರು ಕಮಲಮ್ಮ, ಇಂದ್ರಾಣಿ, ಹೇಮಲತಾ, ವಸಂತಕುಮಾರಿ. ಸುವರ್ಣಮ್ಮ, ಮಂಜುಳಾರಾಜ್, ಎಸ್.ಭಾರತಿ, ಶಕುಂತಲಾ ವಾಸುದೇವನ್ ಇವರುಗಳ ಪರಿಚಯವಿದೆ. ತಿಪಟೂರು ತಾ. ಕೋಟನಾಯಕನಹಳ್ಳಿಯ ಪರಪ್ಪ, ಇದೇ ತಾ. ಹೊನ್ನವಳ್ಳಿಯ ಲಕ್ಷö್ಮಮ್ಮ ಇವರ ಸೋದರಮಾವ ಚಿತ್ರನಟ ನರಸಿಂಹರಾಜು. ಅರಸೀಕೆರೆ ತಾ. ಬಾಣಾವರದ ಬಿ.ಲೀಲಾವತಿ, ಸೊಲ್ಲಪುರ ಗ್ರಾಮದ ಎಸ್.ಎಸ್.ಗಾಯಿತ್ರಿ, ಬೆಂಗಳೂರು ಬಿ.ಎ. ಶಾಂತಮ್ಮ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಹೆಚ್.ಕೆ.ಯೋಗಾನರಸಿಂಹ ಅವರ ಪುತ್ರ ಮೈಸೂರು ಎಚ್.ವೈ.ರಾಜೇಶ್ವರ್, ಸೋಮವಾರಪೇಟೆಯ ಮೇರಿ ವಸಂತ ಮತ್ತು ಇವರ ಯಜಮಾನರು ವಸಂತಕುಮಾರ್, ಇಂದಿಗೂ ರಂಗಸೇವೆ ಮುಂದುವರೆಸಿರುವ ಜಯಂತಿ ಇವರ ಯಜಮಾನರು ಕಳಲೆ ದೊರೆಯವರು. ಹರಿಹರದ ರಾಜೇಶ್ವರಿ, ನಂಜನಗೂಡು ತಾ. ಹುರ ಗ್ರಾಮದ ಎಚ್.ಎನ್.ಶೇಷಾಚಲ, ಮಂಡ್ಯ ಗಂಜಾAನವರಾದ ಮಂಗಳಗೌರಿ, ಮೈಸೂರು ಶ್ರೀಕಂಠು, ಐದು ದಶಕಗಳ ಕಾಲ ರಂಗ ಸೇವೆ ಮಾಡಿದ ಲಕ್ಷö್ಮಮ್ಮ, ಸರಗೂರು ಶ್ರೀಪತಿರಾವ್, ಗುಬ್ಬಿ ಮುರಳೀಧರ್, ತುರುವೇಕೆರೆ ತಾ. ಸಂಪಿಗೆ ಗ್ರಾಮದ ಶಂಕರ್, ಹೊಸದುರ್ಗ ತಾ. ಕಾಮಸಂದ್ರದ ನರಸಿಂಹಮೂರ್ತಿ, ಸೋದರ ಸಂಬAಧಿ ಬಂಧುಗಳಾಗಿದ್ದ ಅಡಗೂರು ಬಸವರಾಜು, ಶಿವಲಿಂಗಯ್ಯ, ಸಿದ್ಧಲಿಂಗಮರಿಗಳು, ತುಮಕೂರು ಸೀತಕಲ್ ಕೃಷ್ಣಮೂರ್ತಿ, ನಂಜನಗೂಡು ತಾ. ಮೂಲದ ಎನ್.ಎಸ್.ಮೂರ್ತಿ, ಗುಬ್ಬಿ ಕಂಪನಿಯ ಬ್ರಾಂಚ್ ಕಂಪನಿ ಬಾಲ ಕಲಾವರ್ಧನಿ ಕಲಾವಿದರು ಶ್ರೀಕಂಠಾಚಾರ್, ಹರ‍್ಮೋನಿಯಂ ಮಾಸ್ಟರ್ ಸಕ್ಕರೆ ಪಟ್ಟಣದ ಶಾಮಣ್ಣಿ, ಟಿ.ನರಸೀಪುರ ಚಿದರಹಳ್ಳಿ ಗ್ರಾಮದ ಸಿ.ಎನ್.ಶ್ರೀಕಂಠಮೂರ್ತಿ, ನಾಟಕ ಕಂಪನಿಗಳಲ್ಲಿ ಜೋಡಿ ನೃತ್ಯಗಾರ್ತಿ ಸಹೋದರಿಯರು ರಾಧಾ ಮತ್ತು ಶಾಂತ ಹಾಗೂ ಕಡೆಗೆ ಹರ‍್ಮೋನಿಯಂ ಜಾದುಗಾರ ಮೇಲುಕೋಟೆ ಎಂ.ಶ್ರೀಕAಠಶೆಟ್ಟರ ಪರಿಚಯ ಸೇರಿದಂತೆ ೧೨೫ ರಂಗ ಕಲಾವಿದರ ಪರಿಚಯ ಒಳಗೊಂಡ ಕಂಪನಿ ಕಲಾವಿದರು ಕೃತಿ ಗತಿಸಿಹೋದ ನಾಟಕ ಕಂಪನಿಗಳನ್ನು ಜೊತೆಗೆ ಪರಿಚಯಿಸುತ್ತದೆ.

ಗೊರೂರು ಅನಂತರಾಜು, ಹಾಸನ.
ಪ



