ಪುಸ್ತಕ ಸಂಗಾತಿ
ತಿಲಕಾ ನಾಗರಾಜ್ ಹಿರಿಯಡಕ
ಡಾ| ಶ್ರುತಿ ಮಧುಸೂದನ್
“ಪೇರಳೆ ಕಾಕು”


ಜೀವನದಲ್ಲಿ ಸದಾ ಜೊತೆಗಿದ್ದು, ನಿಸ್ವಾರ್ಥದಿಂದ, ಮುನ್ನಡೆಸೋ ಗೆಳೆಯ ಅಥವಾ ಗೆಳತಿ ಯಾರಾದರೂ ಇದ್ದಾರೆ ಅಂದ್ರೆ ಅದು ಪುಸ್ತಕ ಮಾತ್ರ. ಪುಸ್ತಕ ಯಾವತ್ತೂ ನಮಗೆ ಮೋಸ ಮಾಡೋದಿಲ್ಲ. ಬದಲಾಗಿ, ನಮ್ಮ ಜ್ಞಾನವನ್ನು ಹೆಚ್ಚಿಸುತ್ತದೆ, ನಮ್ಮನ್ನು ಪ್ರಬುದ್ಧರನ್ನಾಗಿಸುತ್ತದೆ. ನಾನಿಂದು ನಿಮಗೆಲ್ಲ ಪರಿಚಯಿಸ ಹೊರಟಿರುವ ಪುಸ್ತಕದ ಹೆಸರು “ಪೇರಳೆ ಕಾಕು”.
ಪೇರಳೆ ಕಾಕು ರುದ್ರಾಗ್ನಿ ಡಾ| ಶ್ರುತಿ ಮಧುಸೂದನ್ ಅವರ ಕಥಾ ಸಂಕಲನ. ಇಲ್ಲಿ ಒಟ್ಟು 13 ಕಥೆಗಳಿದ್ದು ಒಂದಕ್ಕಿಂತ ಒಂದು ಭಿನ್ನವಾಗಿದೆ. ಪುಟಗಳನ್ನು ತೆರೆಯುತ್ತಾ ಹೋದಂತೆ ಎಲ್ಲಾ ಕತೆಗಳು ನಿಮ್ಮನ್ನು ತನ್ನ ತೆಕ್ಕೆಗೆ ಎಳೆದುಕೊಂಡು ಓದಿಸಿಕೊಂಡು ಹೋಗುತ್ತವೆ. ನೀವೇನಾದ್ರು ಈ ಪುಸ್ತಕ ಹಿಡಿದಿರೋ ಅದ್ಭುತವಾದ ಕಥಾಲೋಕದಲ್ಲಿ ಸಂಚರಿಸುತ್ತಿರುವ ಅನುಭವ ನಿಮ್ಮದಾಗುತ್ತದೆ. ಅಷ್ಟರಮಟ್ಟಿಗೆ ರುದ್ರಾಗ್ನಿ ತಮ್ಮ ಪದಗಳ ಮೂಲಕ ಜಾದು ಮಾಡಿದ್ದಾರೆ.ಪೇರಳೆ ಕಾಕು, ರಾಸತಿ, ಸಾರ, ತಾರಾ, ರಾವತಿ, ಪಾಂಡು, ಧಾತ್ರಿ ಹೀಗೆ ಹಲವು ಪಾತ್ರಗಳು ಕಥೆ ಓದಿ ಮುಗಿದ ಮೇಲೂ ಮತ್ತೆ ಮತ್ತೆ ಕಾಡುತ್ತವೆ. ಛೆ! ಎಂದು ನೀಡುಸುಯ್ಯುವಂತೆ ಮಾಡುತ್ತವೆ. ಹಾಗಾದ್ರೆ ಎಲ್ಲವೂ ದುಖಾಂತ್ಯ ಕಥೆಗಳೇನು? ಅಂದ್ಕೊಂಡ್ರ ಅಲ್ಲ ಇಲ್ಲಿ ಸುಖಂತ್ಯ ಕಥೆಗಳು ಇವೆ. ಗಂಡ ತರುವ ಸಂಭಳವನ್ನು ಹೊಟ್ಟೆ ಬಟ್ಟೆ ಕಟ್ಟಿ ಜತನದಿಂದ ಖರ್ಚು ಮಾಡೋ ಸೌರಭ, ಗಂಡ ಮಕ್ಕಳಿಗಾಗಿ ತನ್ನ ಕನಸನ್ನೆ ಮರೆತು ಬದುಕುವ ಆರತಿ ಅಂತ ಪಾತ್ರಗಳು ನಮ್ಮ ನಿಮ್ಮ ನಡುವೆಯೇ ಇದ್ದಾರೆ ಅನ್ನಿಸುತ್ತದೆ.
ಹಾಂ ಎಲ್ಲವನ್ನೂ ನಾನೇ ಹೇಳ್ತಾ ಹೋದ್ರೆ ಏನಿದೆ… ನಿಮಗೂ ರುದ್ರಗ್ನಿಯ ಪದಗಳ ಲೋಕದಲ್ಲಿ ಸಂಚರಿಸಬೇಕೆ? ಹಾಗಾದ್ರೆ ಯಾಕೆ ತಡ? 9591889261ಈ ಸಂಖ್ಯೆಯನ್ನು ಸಂಪರ್ಕಿಸಿ ಒಂದೊಳ್ಳೆ ಪುಸ್ತಕವನ್ನು ನಿಮ್ಮದಾಗಿಸಿಕೊಳ್ಳಿ.
ತಿಲಕಾ ನಾಗರಾಜ್ ಹಿರಿಯಡಕ




