ಕಾವ್ಯ ಸಂಗಾತಿ
ಡಾ ಶಶಿಕಾಂತ ಪಟ್ಟಣ ರಾಮದುರ್ಗ
“ಒಂಟಿತನಕೆ ಆಸರೆ”


ಒಂಟಿ ಹೃದಯದ ಮೂಲೆ
ಮೂಲೆಯಲಿ ಕತ್ತಲು ಕವಿದಾಗ
ಯಾರೋ ಸಣ್ಣ ದೀಪ ಹಚ್ಚಿದ ಭಾವ
ಆಸರೆಯಾಗಿ ಬರುವುದು ನೋಡಾಗ
ಕಣ್ಣೀರ ಹನಿಯ ಜೊತೆ ಮಾತನಾಡುವ
ಗಾಳಿಯ ಸ್ಪರ್ಶವೇ ಸಾಂತ್ವನ
ಮೌನದ ನಡುವೆ ಬೆಳಕು ಹರಡುವ
ಭರವಸೆಯದೇ ಒಂದು ಬಂಧನ
ನೀ ಒಂಟಿಯಲ್ಲ, ಜಗವೇ ಜೊತೆಯಿದೆ
ಚುಕ್ಕಿಗಳು ಸಾಕ್ಷಿ ನಮ್ಮ ಪಯಣಕೆ
ನಿನ್ನ ನೋವಿಗೂ ಒಂದು ಅರ್ಥವಿದೆ
ಬದುಕು ಚಿಗುರುವುದು ವಸಂತ ನಿನಗಾಗಿ
ಕಾಲ ನೋವನ್ನು ಮಾಯಿಸುವ ಮಂತ್ರ
ನಾಳೆಯೆಂಬ ಕನಸೇ ಆಸರೆ
ಎದ್ದು ನಿಂತರೆ ಸಾಕು ಗೆಳತಿ
ಒಂಟಿತನವೂ ತಾನೆ ದೂರ ಸರಿವ ಕರೆ
ಡಾ ಶಶಿಕಾಂತ ಪಟ್ಟಣ ರಾಮದುರ್ಗ




Excellent Sir
ಅದ್ಭುತ ಕವನ ಸರ್