ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಖುಷಿಯ ಆಸ್ತಿ”


ಖುಷಿ ಮರೀಚಿಕೆಯಲ್ಲ
ಮನಸು ಮರುಳುಗಾಡಲ್ಲ
ಪುಟ್ಟಪುಟ್ಟ ಆಸೆಗಳು
ದೊಡ್ಡ ದೊಡ್ಡ ನಿರಾಸೆಗಳು
ಮಜಲುಗಳು
ಎಲ್ಲಾ ಗೋಜಲುಗಳ ಕುಸ್ತಿ
ಈ ದಿನ ರವಿ ಪೂರ್ವದಲ್ಲಿರುವುದಕ್ಕೆ ಖುಷಿಯಾಗಿರು,
ಈ ದಿನವೂ ಸಾಗರದಲ್ಲಿ
ಉಬ್ಬರವಿಳಿತ ಕಂಡು ನಿಬ್ಬೆರಗಾಗು.
ಇರುವ ಭಕ್ತಿ ಮೆರೆಸಲೂ ಖುಶಿ
ಇಲ್ಲದಿರುವ ಆಸ್ತಿ ಮರೆಯಲೂ ಖುಶಿ ಖುಶಿ
ಇರುವಷ್ಟಕ್ಕೆ ತೃಪ್ತಿ
ಇಲ್ಲದಾಗಿದ್ದಷ್ಟಕ್ಕೆ ಖುಷಿ
ಹುಟ್ಟಿದ್ದಕ್ಕೆ, ಇರುವಷ್ಟನ್ನೇ ಅನುಭವಿಸಿದ್ದಕ್ಕೆ,
ಖುಷಿಯಾಗಿರು ಸದಾ.
ಮುಷ್ಟಿಯಲ್ಲಿ, ಮನಸಲ್ಲಿ
ಉಳಿದಷ್ಟಕ್ಕೆ ತೃಪ್ತಿ
ಕನಸಲ್ಲಿ ಕಂಡದ್ದಕ್ಕೂ ತೃಪ್ತಿ
ನನಸಲ್ಲಿಹೊಂದಿದ್ದಕ್ಕೂ ತೃಪ್ತಿ
ತೃಪ್ತಿಯೇ ಖುಷಿಯ ಆಸ್ತಿ
ಡಾ ಡೋ ನಾ ವೆಂಕಟೇಶ




ಕವಿತೆ ಓದಿದ ಮೇಲೆ ತುಂಬಾ ಖುಷಿಯೇ ಖುಷಿ.
Wow beautiful ❤️
ಬಹಳ ಸುಂದರ ಕವಿತೆ. ಓದಿದಾಗ ಮನಸ್ಸಿಗೆ ತುಂಬಾ ಮುದವಾಯ್ತು.
ಶ್ರೀಧರ