ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಎದೆಗಡಲನು ಮಥಿಸಿ ಪಡೆದಿಹ ಅಮೃತವದು ಪ್ರೀತಿ
ಭಾವದಲೆಯು ದಡವ ಸೇರಿದ ಸಂಗಮವದು ಪ್ರೀತಿ

ತೋರಿಕೆಗೆ ತಳೆದ ಹೂ ಹೇರಿಕೆಗೆ ಹಬ್ಬಿದ ಬಳ್ಳಿಯಲ್ಲ
ನೆಲ ಮುಗಿಲುಗಳ ನೆಚ್ಚಿ ಬಿರಿದ ಕುಸುಮವದು ಪ್ರೀತಿ

ಅಹಮಿಕೆಯ ಅರಿವಿಲ್ಲ ಸಂಶಯಗಳ ಸುಳಿವೆನಿತಿಲ್ಲ
ಗುಡಿಸಲನೇ ಗುಡಿಯ ಮಾಡಿದ ಪವಾಡವದು ಪ್ರೀತಿ

ಹೆಚ್ಚು ಕಡಿಮೆ ಎಂಬ ಗಡಿಗಳಿಲ್ಲ ಗಡಿಬಿಡಿಯೂ ಇಲ್ಲ
ಆಡಂಬರಕಾತುಕೊಳ್ಳದ ಸುಗ್ಗಿ ಸಂಭ್ರಮವದು ಪ್ರೀತಿ

ಈ ಒಲವ ಜನನಕೆ ಮಹೂರ್ತ ಘಳಿಗೆಗಳು ಬೇಕಿಲ್ಲ
ಬೆಸೆದ ಮನಗಳಂಗಳದ ನಿತ್ಯದ ಉತ್ಸವವದು ಪ್ರೀತಿ


About The Author

Leave a Reply

You cannot copy content of this page

Scroll to Top