ಮಹಿಳಾ ದಿನದ ವಿಶೇಷ, ಹೆಚ್. ಎಸ್. ಪ್ರತಿಮಾ ಹಾಸನ್
ಮಹಿಳಾದಿನದ ವಿಶೇಷ ಹೆಚ್. ಎಸ್. ಪ್ರತಿಮಾ ಹಾಸನ್ ನಾರಿಗಾಗಿ ಒಂದು ದಿನ “ಮಹಿಳಾ ದಿನಾಚರಣೆ ಅತಿಮುಖ್ಯ ಜಗದಲ್ಲಿಸಹನೆ ತುಂಬಿರುವ ಮಮತಾಮಯಿ ಹೆಣ್ಣುಕಹಿಯನುಂಡರು ಕೂಡ ನಗುಚೆಲ್ಲಿ ಜೀವಿಸುತಸಿಹಿಯ ಹಂಚುತ ಜಗಕೆ ಲಕ್ಷ್ಮಿದೇವಿ”….ಈ ಮೇಲಿನ ಮುಕ್ತಕದಂತೆ ಮಹಿಳಾ ದಿನಾಚರಣೆಯನ್ನು ಆಚರಿಸುವುದು ಮಹಿಳೆಗೆ ನೀಡುವಂತಹ ಒಂದು ಗೌರವ. ಆ ಗೌರವಕ್ಕೆ ಮಹಿಳೆ ಪಾತ್ರಳಾಗಿದ್ದಾಳೆ. ನಾವು ಸ್ತ್ರೀಯನ್ನು ನಾರಿ ಮಣಿ, ಮಹಿಳೆ, ಹೆಂಗಸು, ಹಲವಾರು ಹೆಸರುಗಳಲ್ಲಿ ಕರೆಯುವುದು ಎಲ್ಲರಿಗೂ ತಿಳಿದಂತ ವಿಷಯ. ನಾರಿಯು ಸಹನೆಯನ್ನು ತುಂಬಿರುವಂತಹ ಮಮತಾ ಮಯಿಯಾಗಿರುವ ಹೆಣ್ಣನ್ನು ಎಷ್ಟು ಗೌರವಿಸಿ ಸನ್ಮಾನಿಸಿದರು ಕಡಿಮೆಯೇ. ಅವಳಿಗೂ ಒಂದು ದಿನ ಸೀಮಿತವಾಗಿಟ್ಟಿರುವುದು ಸಂತಸದ ಸುದ್ದಿ. ಆಕೆಯ ಪ್ರತಿದಿನವೂ ಮಹಿಳಾ ದಿನಾಚರಣೆಯ ಆಗಿರುತ್ತದೆ. ಎಷ್ಟೇ ನೋವುಗಳು ಬಂದರೂ ಸಹ ಅದನ್ನೆಲ್ಲ ನುಂಗುತ್ತಾ ಇತರರಿಗೆ ಸಂತೋಷವನ್ನು ನೀಡುವವಳು ಹೆಣ್ಣು. ಎಷ್ಟೇ ನೋವಿದ್ದರೂ ನಗು ಮುಖವನ್ನು ತೋರಿಸಿಕೊಂಡು ಕಹಿಯನ್ನು ತನ್ನಲ್ಲಿ ಇರಿಸಿಕೊಂಡು ಇತರರಿಗೆ ಸಿಹಿಯನ್ನು ಉಣಿಸುವವಳು ಹೆಣ್ಣು. ಎಲ್ಲೆಡೆಯು ನಗು ನಗುತ ಪಾಲಿಗೆ ಬಂದದ್ದೇ ಪಂಚಾಮೃತ ಎನ್ನುತ್ತಾ ತನ್ನ ಪಾಡಿಗೆ ತಾನು ಜೀವನವನ್ನು ಮಾಡಿಕೊಂಡು ಹೋಗುತ್ತಾಳೆ. ಅವಳು ತ್ಯಾಗಮಯಿ ಎನ್ನುವುದಕ್ಕೆ ಎಷ್ಟು ಪದಗಳು ಹೇಳಿದರು ಕಡಿಮೆ . ಹೇಳಬೇಕೆಂದರೆ ಬಹಳಷ್ಟು ಉದಾಹರಣೆಗಳ ಮಾಲೆಯೇ ಇವೆ. ಪ್ರಸ್ತುತ ಜಗತ್ತಿನಲ್ಲಿ ಮಹಿಳಾ ದಿನಾಚರಣೆ ಬರ್ತಿದ್ದರೆ ಸಾಕು. ಮಹಿಳೆಯರನ್ನು ಹೊಗಳುವುದು ಎಷ್ಟು? ಆಕೆಯನ್ನು ಅಟ್ಟದ ಮೇಲೆ ಕೂರಿಸುವುದೆಷ್ಟು? ಮಹಿಳೆಯರ ಹೆಸರಿನಲ್ಲಿ ಮಾಡುವಂತಹ ಕಾರ್ಯಕ್ರಮಗಳೆಷ್ಟು? ಲೆಕ್ಕವೇ ಇಲ್ಲ. ಒಮ್ಮೆ ಯೋಚಿಸಿ ನೋಡಿ. ದಿನಾಚರಣೆಯಂದು ನೀಡುತ್ತಿರುವ ಗೌರವವನ್ನು ಅವರಿಗೆ ಮನೆಯಲ್ಲಿ ನೀಡುತ್ತಿದ್ದೇವೆಯೆ? ಅವರ ಜೀವನದಲ್ಲಿ ನಾವು ಉತ್ತಮ ಸ್ಥಾನಕ್ಕೆ ಹೋಗಲು ಅವಕಾಶ ನೀಡುತ್ತಿದ್ದೇವೆಯೆ? ಇಂದಿಗೂ ಸಹ ಮಹಿಳೆಯರ ಕಷ್ಟಗಳು ಹೇಳತೀರದು.ಮನೆಯ ಜವಾಬ್ದಾರಿಗಳನ್ನೆಲ್ಲ ಆ ಮಹಿಳೆ ತೆಗೆದುಕೊಂಡು ಗಂಡಿನಂತೆ ದುಡಿಯುತ್ತಿರುವ ಎಷ್ಟು ಕೋಟಿ ಉದಾಹರಣೆಗಳಿವೆ. ನಾರಿ ನಿನಗೆ ಯಾರು ಸಮ. ನಿನ್ನನ್ನು ಯಾರಿಗೂ ಹೋಲಿಸಲು ಸಾಧ್ಯವಿಲ್ಲ ಹೀಯಾಳಿಸುವ,ಹಿಂಜರಿಯುವ ಪ್ರಪಂಚದಲ್ಲಿ ನಿನ್ನ ಸ್ಥಾನ ಅಪಾರವಾದದ್ದು. ಯಾರು ಸಹ ನಿನ್ನ ಸ್ಥಾನವನ್ನು ತೆಗೆದುಕೊಳ್ಳುವುದಕ್ಕಾಗುವುದಿಲ್ಲ. ನಾರಿ ನೀನು ಅಬಲೆಯಲ್ಲ ಸಬಲೆ.ಇಂದು ಹಲವಾರು ಸಮಸ್ಯೆಗಳ ಮಧ್ಯೆಯೂ ಸಹ ನೀನು ಕೆಲಸಗಳಲ್ಲಿ ತೊಡಗಿ ಹಲವಾರು ಜವಾಬ್ದಾರಿಗಳನ್ನು ನಿಭಾಯಿಸುತ್ತಿರುವ ತ್ಯಾಗ ಮೂರ್ತಿ ನೀನು. ನಿನ್ನಲ್ಲಿರುವ ನೋವೆಷ್ಟು, ಹುಟ್ಟಿದಾಗಲಿಂದಲೇ ಕಷ್ಟ ಎಂಬುದು ನಿನ್ನ ಬೆನ್ನೇರಿದೆ. ನೋವು ನಲಿವುಗಳು ಎಷ್ಟೇ ಇದ್ದರೂ. ಜವಾಬ್ದಾರಿಯುತ ಜೀವನ ಮಾಡುವವಳು ನೀನೊಬ್ಬಳೇ. ಯಾವುದೇ ಮನೆಯಲ್ಲಿನ ಸಮಸ್ಯೆ ಆಗಿರಬಹುದು. ಮನೆಯ ಒಳಗಿನ ಕೆಲಸವಾಗಿರಬಹುದು. ಗಮನವಿಟ್ಟು ಮಾಡುವಂತಹ ವ್ಯಕ್ತಿ ನೀನೊಬ್ಬಳೇ. ಅರಿಯದ ಎಷ್ಟೋ ಜನರು ಹೆಣ್ಣು ಮಗುವಾಯಿತೆಂದರೆ ಹೆಂಡತಿ ಮಕ್ಕಳನ್ನೇ ಬಿಟ್ಟು ಹೋಗುತ್ತಾರೆ.ಅಂತಹ ಉದಾಹರಣೆಗಳು ಬಹಳಷ್ಟಿದೆ. ಅಂತಹ ಕ್ರೂರ ಮೃಗಗಳು ಗಂಡಿನ ಹೆಸರಿನಲ್ಲಿದ್ದಾರೆ. ಎಲ್ಲರೂ ಈ ಪ್ರಪಂಚದಲ್ಲಿ ಹಾಗೆ ಇದ್ದಾರೆ ಎಂದು ಹೇಳುತ್ತಿಲ್ಲ. ಗಂಡು ಹೆಣ್ಣು ಎಂಬ ಭೇದ ಭಾವದಲ್ಲಿ ಜೀವನ ಮಾಡುತ್ತಿರುವುದು ಇಂದಿಗೂ ಪ್ರಸ್ತುತ ಜಗತ್ತಿನಲ್ಲಿ ಇದೆ. ಅದರ ಅನುಭವವನ್ನು ಪ್ರತಿಯೊಬ್ಬರೂ ನೋಡುತ್ತಿರುತ್ತಾರೆ. ಮನೆಗೆ ಒಂದು ಹೆಣ್ಣು ಇಲ್ಲ ಎಂದರೆ ಅದು ಮನೆಯಾಗುವುದಿಲ್ಲ. ನರಕದ ಕೂಪವಾಗುತ್ತದೆ. ದಯಮಾಡಿ ನೋಡಿ ಹೆಣ್ಣು ಇಲ್ಲದ ಮನೆ ಮನೆಯಲ್ಲ. ಎಷ್ಟೋ ಗಂಡು ಮಕ್ಕಳಿರುವಂತಹ ಮನೆಗಳಲ್ಲಿ ನಾನು ನೋಡಿದ್ದೇನೆ. ಸೊಸೆ ಎಂದಿಗೂ ಮಗಳಾಗುವುದಿಲ್ಲ ಎಂದುಹೇಳುತ್ತಾರೆ ಮಗಳು ಎಂದು ಸೊಸೆಯಾಗುವುದಿಲ್ಲ. ಎನ್ನುವ ಭ್ರಮೆಯಲ್ಲಿ ಇರುತ್ತಾರೆ. ಆದರೂ ಹೆಣ್ಣು,ಹೆಣ್ಣೆ. ಆಕೆ ಎಂದಿಗೂ ತನಗಾಗಿ ಏನನ್ನು ಬಯಸುವುದಿಲ್ಲ ಇತರರ ಸೇವೆಗಾಗಿ ಜೀವನವಿಡೀ ಮುಡುಪಾಗಿರುತ್ತಾಳೆ.ಮಹಿಳೆ ತನ್ನ ಜೀವನದಲ್ಲಿ ಮನೆಯ ನಿರ್ವಹಣೆಗಾಗಿ ಮನೆಯಲ್ಲೂ ಕೆಲಸವನ್ನು ಮಾಡುತ್ತಾ, ಹೊರಗಡೆಯೂ ದುಡಿಯುತ್ತಾ, ತನ್ನದೇ ಆದಂತಹ ಸೇವೆಯನ್ನು ನಿಷ್ಕಲ್ಮಶವಾಗಿ ಎಲ್ಲಾ ಕಡೆಯಲ್ಲೂ ಮಾಡುತ್ತಾಳೆ. ಅವಳ ಹುಟ್ಟು ಸೇವೆಗಾಗಿ ಎಂಬುದನ್ನು ತೋರಿಸುತ್ತಾಳೆ. ಜಗದ ನಿಯಮದಲ್ಲಿ ಜೀವನದ ಕಷ್ಟ ಸುಖಗಳನ್ನು ಎದುರಿಸುತ್ತ ಬಾಳುವವಳು ಹೆಣ್ಣು . ಎಷ್ಟೆಂದು ಹೇಳುವುದು ಅವಳ ಕಾರ್ಯದ ಉದಾಹರಣೆಯನ್ನು ಮನೆಯ ನಿರ್ವಹಣೆಗಾಗಿ ಮನೆಯಲ್ಲಿಯೇ ಎಷ್ಟು ವಿದ್ಯಾವಂತ ಮಹಿಳೆಯರು ಹೊರಗೂ ದುಡಿದು, ಮನೆಯಲ್ಲೂ ಸಹ ದುಡಿಯುತ್ತಾರೆ. ಮನೆಯಲ್ಲಿ ಇರುವಂತಹ ಅವಿದ್ಯಾವಂತ ಮಹಿಳೆಯರು ಸಹ ತಮ್ಮ ಕೈಯಲ್ಲಿ ಆಗುವ ಕರಕುಶಲ ಕೆಲಸಗಳನ್ನು ಮಾಡಿ ದುಡಿಯುತ್ತಿದ್ದಾರೆ . ಬಟ್ಟೆ ಹೊಲಿಯುವುದಾಗಿರಬಹುದು, ತೋರಣಗಳನ್ನು ಹಾಕುವುದಾಗಿರಬಹುದು, ಮೇಣಗಳನ್ನು ಮಾಡುವುದಾಗಿರಬಹುದು, ವಸ್ತುಗಳನ್ನು ಕಟ್ಟಿಕೊಡುವುದಾಗಿರಬಹುದು, ಊಟದ ಎಲೆಗಳನ್ನು ತಯಾರು ಮಾಡುವುದು ಹೀಗೆ ಹಲವಾರು ವಿಧದಲ್ಲಿ ಅವಿದ್ಯಾವಂತ ಮಹಿಳೆಯರು ಸಹ ದುಡಿಯುತ್ತಾರೆ. ವಿದ್ಯಾವಂತ ಮಹಿಳೆಯರು ತಮ್ಮ ಕೈಲಾದಷ್ಟು ಅವರು ದುಡಿಯುತ್ತಾ ಕಾರ್ಖಾನೆಗಳಿಗೆ ಹೋಗುತ್ತಾರೆ. ಎಷ್ಟೇ ಮುಜುಗರದ ಪರಿಸ್ಥಿತಿ ಇದ್ದರೂ. ಯಾವುದಕ್ಕೂ ಹೆದರದೆ ಅಂಜದೆ ಕೆಲಸವನ್ನು ಮಾಡುತ್ತಾರೆ. ಒಟ್ಟಾರೆ ಹೆಣ್ಣಿಗೆ ಎಷ್ಟು ವಿಮರ್ಶೆಮಾಡಿ ಪಟ್ಟಿ ಮಾಡಿ ವಿಶೇಷತೆಗಳನ್ನು ಹೇಳಿದರು ಕಡಿಮೆಯೇ. ನಾರಿ ನಿನಗೆ ಯಾರು ಸಮ ನಿನ್ನ ತ್ಯಾಗಕ್ಕೆ ಬೆಲೆಯೇ ಇಲ್ಲ ಎಂಬ ಮಾತಿಗೆ ಸರಿಯಾದ ಅರ್ಥವನ್ನು ನೀಡುವವಳು ನಾರಿಯೆ .ಒಟ್ಟಾರೆ ನಮ್ಮ “ಪ್ರತಿಮಾ ಸಾಮಾಜಿಕ ಸಾಂಸ್ಕೃತಿಕ ಟ್ರಸ್ಟ್. ಕರ್ನಾಟಕ ವು ಮಹಿಳೆಯರ ಪ್ರತಿಭೆ ನೋವು ಸಂತೋಷಕ್ಕೆ ಸ್ಪಂದಿಸಿ ಕರಕುಶಲ ತರಬೇತಿ ನೀಡಿ ಯಶಸ್ವಿಯಾಗಿ ಕಾರ್ಯ ನಿರ್ವಹಿಸುತ್ತಿರುವುದು ಸಂತಸದ ವಿಷಯವಾಗಿದೆ. ಮಹಿಳೆಯರ ತ್ಯಾಗಕ್ಕೆ ಅವರ ಕೆಲಸಕ್ಕೆ ನಿಮಗೊಂದು ನನ್ನ ನಮಸ್ಕಾರ. ಹೆಣ್ಣಿನ ಬಗ್ಗೆ ಹೇಳುತ್ತಾ ಹೋದರೆ ಎಷ್ಟು ಹೇಳಿದರು ಕಡಿಮೆಯೆ ಎಂದು ಹೇಳುಬಹುದು. ಧನ್ಯವಾದಗಳು ಜೈ ಹಿಂದ್ ಜೈ ಭಾರತ ಮಾತೆ.
ಮಹಿಳಾ ದಿನದ ವಿಶೇಷ, ಹೆಚ್. ಎಸ್. ಪ್ರತಿಮಾ ಹಾಸನ್ Read Post »





