ಕಾವ್ಯ ಸಂಗಾತಿ
ನಾಗರಾಜ ಬಿ. ನಾಯ್ಕ
“ಗಾಳಿ ಎಳೆಗೆ……….”


ಎಲ್ಲೋ ಕುಳಿತ
ಕೋಗಿಲೆಯೊಂದು ಕೂಗುತ್ತಿತ್ತು
ಸುಮ್ಮನೇ
ಮರದ ತುದಿಗೆ ಗಾಳಿ ಎಳೆಗೆ
ಹೇಳುತ್ತಿತ್ತು ಹಾಡನೇ
ಆಚೆ ನೋಡಿ ಈಚೆ ನೋಡಿ
ಜಗವನ್ನೆಲ್ಲಾ ತಿರುಗಿ ನೋಡಿ
ರಾಗದಲ್ಲಿ ತಾಳ ಬೆರೆಸಿ
ಕೂಗುತ್ತಿತ್ತು ಮೆಲ್ಲನೆ
ಜೀವದಲ್ಲೇ ಜೀವನ
ಹಾಡಿನಲ್ಲೇ ಪಾವನ
ಸಗ್ಗವೆಂಬ ಪ್ರೀತಿಗೆ
ನೂರು ಭಾವ ರೀತಿಗೆ
ಗಾಳಿಯೊಂದು ನಾಳೆಗೆ
ಉಸಿರೊಂದು ಉಳಿವಿಗೆ
ಹಾಡುತ್ತಿತ್ತು ಕೋಗಿಲೆ
ತನ್ನ ದಿನದ ರೂಢಿಗೆ
ನೋವನ್ನೆಲ್ಲಾ ಮರೆತು
ಬಾಳಿದರೆ ಒಳಿತು
ಬುವಿಯ ಒಳಗೆ
ಜೀವವೊಂದು ಗುರುತು
ನಾಗರಾಜ ಬಿ. ನಾಯ್ಕ
́




ಕವನ ಅರ್ಥಪೂರ್ಣವಾಗಿ ಮೂಡಿಬಂದಿದೆ.
ಧನ್ಯವಾದಗಳು ತಮ್ಮ ಓದಿಗೆ