ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಇರುವುದೆಲ್ಲವ ಬಿಟ್ಟು
ಇರದುದರ ಕಡೆಗೆ,
ಹೊರಟ  ಮನಸ್ಸು  
ಮೌನದ ನಡಿಗೆಗೆ
ಒತ್ತು ನೀಡಿ  ಕಾಣದ
ಕನಸಿನ  ಕಡೆಗೆ  ಸಾಗಬಾರದು
ಹೃದಯದೊಳಗೆ  ಕಹಿ ಭಾವ
ತೊರೆಯಬೇಕು
ಹೊಸ  ಹೊಳವು  ತುಂಬಿ
ಇರುವುದೇ ಸಾಕೆಂದು
ನಡೆಯಬೇಕು
ಇರದುದರಲ್ಲಿ ಹುಟ್ಟಿಸು
ಹೊಸ ಸ್ಪಂದನದ ಬಂಧುರವ
ಹಳೆಯ ಸರಳುಗಳ ನೆರಳು,
ಬಂಧನ ಮುರಿದು,
ಹೊಸ ದಾರಿಯ
ಕಡೆಗೆ ಜೀವ ಹರಿದು.
ಇರುವುದರಲ್ಲಿ ನೆಮ್ಮದಿ
ಹುಡುಕಬೇಕು.
ಇರದುದರಲ್ಲಿ ಅರ್ಥವೇ
ಹುಡುಕಬೇಕು,ಹುಟ್ಟಬೇಕು,
ಕಳೆದುಹೋಗುವ
ಭಯದ ಅಂಚಿನ  ನೆಪ ಬೇಡ,
ಧೈರ್ಯದ ನೆಲೆಯಲ್ಲಿ
ಕನಸು ನಿಂತಿದೆ.
ಇರುವುದೆಲ್ಲವ ಬಿಟ್ಟು
ಸಾಗುವ ದಾರಿ, ಸಂಕಟಕರ  
ಇದ್ದುದರಲ್ಲಿ ಬದುಕು ಸಂತಸಕರ,
ಅದೇ ಜೀವನದ ನಿಜವಾದ  ಸಾರ
ಇರದುದರಲ್ಲಿ ಹುಡುಕುವ
ಆಸೆಯೊಳಗೆ  ಹರಿಯುವುದು
ಹೊಸ ಒಸಗೆ
ನಮ್ಮಲ್ಲಿ  ನಮ್ಮನ್ನೇ
ಕಂಡುಕೊಳ್ಳುವ
ಒಲವಿನ    ಆತ್ಮ ಬೆಸುಗೆ
ಬಂಧುರ ಸುಂದರ.


About The Author

Leave a Reply

You cannot copy content of this page

Scroll to Top