ಕಾವ್ಯ ಸಂಗಾತಿ
ಚಂದ್ರು ಪಿ ಹಾಸನ್
“ಓ ನಲ್ಲೇ ..”


ನನ್ನೆದೆ ಕೋಗಿಲೆ ಕೂಗಿದೆ
ಹೃದಯದ ತುಡಿತವ ಕೇಳದೆ
ಎಲ್ಲಿರುವೆ? ನೀನೆಲ್ಲಿರುವೆ?
ಗೆಳತಿ ನಿನ್ನೇ ಕಾದಿರುವೆ
ವಸಂತಕ್ಕೆ ವಸುಂಧರೆ
ಹಸನಾಗಿ ಸೂಸುತ್ತಿದೆ
ಸರಸರನೆ ಕೋಕಿಲೆ
ಸೊಗಸಾಗಿ ಹಾಡುತ್ತಿದೆ
ಹಸನಾದ ಸಮಯವು
ಬೆಸುಗೆಗೆ ಸಮ್ಮತಿಸಿದೆ
ನಲ್ಲೇ ಯಾಕೀಗೆ ಕಸರತ್ತು?
ಒಲ್ಲೇ… ಸಾಕಾಗಿದೆ ಬೇಸತ್ತು
ಗೆಳತಿಯ ನನ್ನೊಡತಿಯ
ಬರುವಿಕೆ ನೋಡುತ್ತಿರೇ
ನಿನ್ನ ಅರಿವನ್ನು ಅರಿಯದೇ
ಎನ್ನ ಮನವಿಲ್ಲಿ ಸೊರಗಿದೆ
ತಂಪಾಗಿ ಇಂಪಾಗಿ
ಬೀಸುವ ಗಾಳಿಯೇ
ಒಮ್ಮೆ ನನ್ನವಳ ಸ್ಪರ್ಶಿಸಿ
ನನ್ನೋಲೆಯಾ ತಿಳಿಸುವೆಯಾ?
ಕನಸಲ್ಲೂ ಮನಸಲ್ಲೂ
ಇನ್ಯಾರನೂ ನಾನೊಲ್ಲೇ
ನೆಲೆಸಿ ಹರ್ಷಿಸಿ ಪೋಷಿಸಿ
ನಿಲ್ಲೇ ಈ ಕನ್ನಡಿಗನಲ್ಲೇ….
ಚಂದ್ರು ಪಿ ಹಾಸನ್,



