ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಬಾಡದ ಹೂವ ಕಿತ್ತೆಸೆಯಬಹುದೇ ಮುಡಿಯಿಂದ ತೆಗೆದು
ಜಿಗಿತ ಪ್ರೀತಿ ಚಿವುಟಿ ಒಗೆಯಬಹುದೇ ಎದೆಯಿಂದ ತೆಗೆದು

ಹೆಣ್ಣು ಮಣ್ಣು ಹೊನ್ನಿ ಗಾಗಿ ನೆತ್ತರು ಹರಿದಿದೆ ಈ ಭೂಮಿ ಮೇಲೆ
ನೋವಾಯಿತೆಂದು ಕರುಳ ಕಿತ್ತು ಹಾಕಬಹುದೇ ಒಡಲಿಂದ ತೆಗೆದು

ಗಿಡದಲ್ಲಿ ಅರಳಿದ ಹೂವಿಗಿಂತ ಕೃತಕ ಹೂಗಳೆ ಚಂದ ತೋರುತ್ತವೆ
ಬೆಂಕಿ ಸುಟ್ಟಿತೆಂದು ದೀಪವನು ಗಾಳಿಗಿಡಬಹುದೇ ಒಳಗಿಂದ ತೆಗೆದು

ಇಲ್ಲಿ ಮುಖವಾಡಗಳೇ ಮಾತಾಡುತ್ತಿವೆ ಯಾವುದನ್ನು ನಂಬುವುದು
 ಸತ್ಯ ಕಹಿಯೆಂದು ಸುಳ್ಳನ್ನೇ ಮೆರೆಸಬಹುದೇ ಪಾಪದಿಂದ ತೆಗೆದು

ಅವ ಇಟ್ಟಂತೆ ಇರಬೇಕು ನಾವೆಲ್ಲ ಇರುವಷ್ಟು ದಿನ ನಗು ನಗುತ
 ಮೌನವಾದ ಅರುಣಾಗೆ ಮೂಗಿ ಅನ್ನಬಹುದೇ ಯಾದಿಯಿಂದ ತೆಗೆದು

ಜಾತಿ‌ಮತ ಪಂಥಗಳ ಹೆಸರಲ್ಲಿ ಉಸಿರಾಡುತ್ತಿದೆ ಜಗವು
ಮನುಜ‌ಮತ ಉಳಿಯಬಹುದೇ ಮೋಸದಿಂದ ತಗೆದು

ಒಡಲ ಕೂಸೆ ಒಮ್ಮೊಮ್ಮೆ ದೂರ ವಾಗಬಹುದು ಮರೆತು
ಕರುಳ ಕುಡಿಯನು ದೂರ ತಳ್ಳಬಹುದೆ ಸಿಟ್ಟಿನಿಂದ ತಗೆದು

ತೋರಿಕೆಯ ಮಾತುಗಳು ಆಡಂಬರದ ಆಟಗಳು ಮೆರೆಯುತ್ತಿವೆ
ಕೃತ್ರಿಮತೆಯೆದುರು ನಿಜ ಮರೆಸಬಹುದೆ  ಹುಸಿಯಿಂದ ತಗೆದು

ಲೋಕವನಾಳುವ ಮಾಲೀಕನೊಬ್ಬ‌ ಮೇಲಿಹನು ಜೋಗಿ
ಅವನ ತಕ್ಕಡಿಯಲ್ಲಿದೆ ನಮ್ಮ ಆಟ ಗೆಲ್ಲಬಹುದೆ ತಂತ್ರದಿಂದ ತಗೆದು


About The Author

Leave a Reply

You cannot copy content of this page

Scroll to Top