ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಅನುವಾದ

ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ‌ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್

ಅನುವಾದ ಸಂಗಾತಿ ಗಾಳಿಗಾಗಿ ಹೋರಾಟ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್ ಗಾಳಿಗೆ ಗಾಳಾಡುವ ಜಾಗವೇ ಇಲ್ಲವಂತೆಒಂದು ಸುಳಿಗಾಳಿ ಸುದ್ದಿ ತಂದುಕೊಟ್ಟಿತು—ಉಸಿರಾಟವೇ ಸಿಗದಂತೆ ಎದೆಗೆ ಅಪ್ಪಳಿಸಿಸ್ಕೂಲಿನಲ್ಲಿ ಇರುವ ಮೊಮ್ಮಗಳು ನೆನಪಾಯಿತು—ಅವಳಿಗೆ ಹೇಳಬೇಕುಅನ್ನದ ಡಬ್ಬಿಯ ಜೊತೆಗೆಒಂದು ಆಕ್ಸಿಜನ್ ಡಬ್ಬಿಯನ್ನೂ ಹಾಕಿಕೊಡಲು,ಒಂದು ಮಾಸ್ಕ್ ಕೊಂಡು ಕೊಡಲು.ರಾಜಧಾನಿ ನಗರಸಂಸತ್ತಿನ ಮುಂದೆ ಮೊಣಕಾಲೂರಿದೆ ಎನ್ನುವವಾರ್ತೆಯನ್ನು ಹೊತ್ತು ತಂದ ಪತ್ರಿಕೆನಮ್ಮ ಮನೆಯ ಗೇಟಿನ ಬಳಿಹಾವಿನಂತೆ ಸರಿದು ಕಾಣಿಸಿತು—ಸಂಸತ್ತನ್ನೇ ತಮ್ಮ ಸುರಕ್ಷತೆಗೆಅಂತರಿಕ್ಷದಲ್ಲಿ ಕಟ್ಟಿಕೊಳ್ಳಲುಎಂಜಿನಿಯರ್‌ಗಳು, ವಿಜ್ಞಾನಿಗಳ ಜೊತೆಸಭೆಯಲ್ಲಿ ಆಡಳಿತಗಾರರುಬ್ಯುಸಿ ಯಾಗಿದ್ದಾರೆ ಅಂತೆ—ತಮ್ಮ ಬ್ಯಾಂಕ್ ಖಾತೆಗಳಲ್ಲಿಮೊಟ್ಟೆಗಳನ್ನು ಉಳಿಸಿಕೊಂಡುಕಾರ್ಪೊರೇಟ್ ಅನಾಕೊಂಡಾಗಳುನಿದ್ರೆಗೆ ಜಾರಿರುವ ದೃಶ್ಯಸೋಷಿಯಲ್ ಮೀಡಿಯಾದಲ್ಲಿ ವೈರಲ್ ಅಂತೆಮತ್ತೊಂದು ಸುದ್ದಿ.ಐದು ವರ್ಷಕ್ಕೊಮ್ಮೆಸಾರ್ವತ್ರಿಕ ಶವಪರೀಕ್ಷೆಗಳು—ಜೀವಂತ–ನಿರ್ಜೀವದೇಹಗಳ ಜಾತ್ರೆಪರಿಸರದ ಪಾಡೆಯ ಮೇಲೆಪ್ರಜಾಸತ್ತಾತ್ಮಕ ಮೆರವಣಿಗೆಹಳದಿ ಬಳಿದಿದ್ದ  ಕೊರಡಗಳಿಂದಮಹಾ ನಾಯಕರ ಪ್ರದರ್ಶನ—ಅಧಿನಾಯಕನನಾನ್–ಬೈಯಾಲಾಜಿಕಲ್ ಅಹಂಕಾರಕ್ಕೆಸಾಷ್ಟಾಂಗ ವಂದನೆ ಸಲ್ಲಿಸುವಶಲ್ಯಾವಶೇಷವಾದ ಸ್ವಾತಂತ್ರ್ಯ.ನಗರಗಳಿಂದ ಮನುಷ್ಯರಂತೆಮನುಷ್ಯರಿಂದ ನಗರಗಳಂತೆಯಾರು ಮೊದಲು ಓಡಬೇಕು ಅನ್ನೋದು ತಿಳಿಯದೆಒಂದು ಸಂಧಿಗ್ಧ ಕ್ಷಣದಲ್ಲಿನಲಿದು ಹೋಗುತ್ತಿರುವ ಕಾಲಕ್ಕೆಮತ್ತೊಂದು ಅಕಾಲದ ಗರ್ಭಧಾರಣೆದೇಶವಿಡೀಮಾಲಿನ್ಯದ ಪ್ರಸವ ವಾಸನೆ!ಅಪ್ಪಂದಿರೇ!ನೀವು ಮಕ್ಕಳಿಗಾಗಿ ಆಸ್ತಿಗಳನ್ನು ಸೇರಿಸುತ್ತೀರಾ—ಸರಿ, ಆದರೆ ಸ್ವಲ್ಪ ಆಕ್ಸಿಜನ್ ಕೂಡ ಸಂಗ್ರಹಿಸಿ.ಇನ್ನು ನಿಮ್ಮ ಆತುರಗಳನ್ನು ಬದಿಗಿಟ್ಟುಗಾಳಿಗಾಗಿ ಹೋರಾಟಗಳನ್ನು ಆರಂಭಿಸಿ! ಮಂಜಿನ ಮುಖವಾಡ …ಬೆಳದಿಂಗಳ ನಗು…ಗಾಳಿಯಲ್ಲಿ ಕಾವಲು ಕಾಸುತ್ತಿರುವಮೃತ್ಯುವನ್ನುಗುರುತಿಸಲಾಗುವುದೇ ಇಲ್ಲ ತೆಲುಗು ಮೂಲ : ಪ್ರಸಾದ ಮೂರ್ತಿಕನ್ನಡ ಅನುವಾದ : ಕೋಡೀಹಳ್ಳಿ  ಮುರಳೀ ಮೋಹನ್

ಪ್ರಸಾದ ಮೂರ್ತಿಯವರ ತೆಲುಗು ಕವಿತೆ “ಗಾಳಿಗಾಗಿ ಹೋರಾಟ”ದ‌ ಕನ್ನಡಾನುವಾದ ಕೋಡಿಹಳ್ಳಿಮುರಳೀ ಮೋಹನ್ Read Post »

ಪುಸ್ತಕ ಸಂಗಾತಿ

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ

ಪುಸ್ತಕಸಂಗಾತಿ ಕೆ ಎನ್ ಚಿದಾನಂದ “ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಇತಿಹಾಸವು ಆಧಾರಗಳಿಂದಲೇ ಸೃಷ್ಟಿಯಾಗಿದೆ. ಆಧಾರಗಳಿಲ್ಲದೆ ಇತಿಹಾಸವಿಲ್ಲ. ಒಂದು ಸ್ಥಳದಲ್ಲಿ ದೊರೆತ ಸಾಹಿತ್ಯ, ನಾಣ್ಯ, ಶಾಸನ, ಸ್ಮಾರಕ, ದೇವಾಲಯ, ಮುಂತಾದವುಗಳು ತನ್ನದೇ ಚರಿತ್ರೆಯನ್ನು ಜಗತ್ತಿಗೆ ಸಾರುತ್ತವೆ. ಕಾಲ ಎಲ್ಲವನ್ನು ಮೆರೆಸುತ್ತದೆ ಮತ್ತು ಎಲ್ಲವನ್ನು ಮರೆಸುತ್ತದೆ. ಆದರೆ ಅಲ್ಲಿ ಉಳಿಯುವ ಸಾಕ್ಷಿಗಳು ಮತ್ತೆ ಮತ್ತೆ ನೆನಪುಗಳನ್ನು ಮರುಕಳಿಸುತ್ತದೆ. ಕಾಲದ ಹೆಜ್ಜೆ ಗುರುತುಗಳನ್ನು ಹುಡುಕುವುದು ಎಂದರೆ ಒಂದು ಅನ್ವೇಷಣೆಯೇ ಸರಿ. ​”ದೇಶ ಸುತ್ತು ಕೋಶ ಓದು” ಎಂಬ ಜನಜನಿತವಾದ ಗಾದೆ ಮಾತು ಕೇವಲ ಜ್ಞಾನಾರ್ಜನೆಯ ಮಾರ್ಗವಲ್ಲ; ಅದು ಮನುಷ್ಯನ ಅಸ್ತಿತ್ವದ ವಿಸ್ತರಣೆಯ ಸಂಕೇತವೂ ಹೌದು. ಇಡೀ ಪ್ರಪಂಚವನ್ನು ಒಂದು ಮಹತ್ತರವಾದ ಗ್ರಂಥವೆಂದು ಭಾವಿಸುವುವಾದರೆ, ಪ್ರೇಕ್ಷಣೀಯ ಸ್ಥಳಗಳು ಆ ಗ್ರಂಥದ ಒಂದೊಂದು ಅಮೂಲ್ಯವಾದ ಅಧ್ಯಾಯಗಳು ಎನ್ನಬಹುದು. ನಾಗರಿಕತೆಯ ಆರಂಭದಿಂದ ಇಂದಿನ ಆಧುನಿಕ ಯುಗದವರೆಗೆ, ಮನುಷ್ಯ ಹೊಸತನ್ನು ಹುಡುಕುತ್ತಾ, ಪ್ರಕೃತಿಯ ಸೊಬಗನ್ನು ಆರಾಧಿಸುತ್ತಾ ಮತ್ತು ಪೂರ್ವಜರು ಬಿಟ್ಟು ಹೋದ ಸ್ಮಾರಕಗಳ ಮೌನ ಸಂಭಾಷಣೆಯನ್ನು ಆಲಿಸುತ್ತಾ ಸಾಗಿದ್ದಾನೆ. ​ಪ್ರವಾಸವೆಂಬುದು ಹೊಸ ಚೇತನವನ್ನು ತುಂಬುವ ಪಯಣವಾಗಿದೆ. ​ಪ್ರವಾಸವೆಂದರೆ ಕೇವಲ ಒಂದು ಭೌಗೋಳಿಕ ಬಿಂದುವಿನಿಂದ ಮತ್ತೊಂದು ಬಿಂದುವಿಗೆ ಚಲಿಸುವುದಲ್ಲ. ಅದು ನಮ್ಮೊಳಗಿನ ಸಂಕುಚಿತ ಭಾವನೆಗಳನ್ನು ಕಿತ್ತೆಸೆದು, ವಿಶಾಲವಾದ ವಿಶ್ವದೊಂದಿಗೆ ಮೇಳೈಸುವ ಪ್ರಕ್ರಿಯೆಯಾಗಿದೆ. ಒಂದು ಕಲ್ಲಿನ ಕೆತ್ತನೆಯಲ್ಲಿ ಅಡಗಿರುವ ಶಿಲ್ಪಿಯ ಶ್ರಮ, ಗೋಪುರದ ಭವ್ಯತೆ ಅಥವಾ ಪ್ರಕೃತಿಯ ಮಡಿಲಲ್ಲಿ ಹರಿಯುವ ಜಲಪಾತದ ನಿನಾದ ಇವೆಲ್ಲವೂ ನಮಗೆ ಬದುಕಿನ ಅರ್ಥವನ್ನು ಹೊಸದಾಗಿ ಕಲಿಸಿಕೊಡುತ್ತವೆ. ನನ್ನ ಹಿತೈಷಿ  ಸ್ನೇಹಿತರಾದ ಗೊರೂರು ಅನಂತರಾಜು ಅವರು ಹೆಸರೇ ಹೇಳುವಂತೆ ಗೊರೂರಿನವರು. ಇವರ ಬರಹದ ಹವ್ಯಾಸ ನಿಲ್ಲದ ಪಯಣವಾಗಿದೆ. ತನಗೆ ಗೊತ್ತಿರುವ ವಿಷಯದೊಂದಿಗೆ ಮತ್ತಷ್ಟು ಅಧ್ಯಯನ, ವಿಷಯ ಸಂಗ್ರಹದ ಮೂಲಕ ಲೇಖನಗಳನ್ನು ಪ್ರಕಟಿಸುತ್ತಿರುವ ಇವರು ಅವೆಲ್ಲವನ್ನು ಒಟ್ಟಾಗಿಸಿ ಓದುಗರಿಗೆ ಒಂದೆಡೆ ಸಿಗುವಂತೆ ಮಾಡಿರುವ ಈ ಪ್ರಯತ್ನ ನಿಜಕ್ಕೂ ಶ್ಲಾಘನೀಯವಾದುದು. ಗೊರೂರು ಅನಂತರಾಜುರವರು ಪ್ರವಾಸಿ ಸ್ಥಳಗಳಿಗೆ ಭೇಟಿ ನೀಡುವ ಮೂಲಕ ಸುಮ್ಮನಾಗಲಿಲ್ಲ : ಬದಲಾಗಿ ಆ ಸ್ಥಳದ ಕುರಿತು ಮಾಹಿತಿ ಸಂಗ್ರಹಿಸಿ ಓದುಗ ಬಳಗಕ್ಕೆ ಉಣಬಡಿಸಿದ್ದಾರೆ. ಎಡತೊರೆ ಎನಿಸಿದ ಕಾವೇರಿ ನದಿಯ ತಟದಲ್ಲಿ ನಿರ್ಮಾಣಗೊಂಡಿರುವ ಅರ್ಕೇಶ್ವರ ದೇವಾಲಯ ಕುರಿತ ಮಾಹಿತಿ ನೀಡಿದ್ದಾರೆ. ಮೂಗೂರಿನ ತ್ರಿಪುರ ಸುಂದರಿ ದೇವಾಲಯದ ಕುರಿತ ಮಾಹಿತಿ ವಿಚಾರ ಪೂರ್ಣವಾಗಿದೆ. ತಲಕಾಡಿನಲ್ಲಿ ಪಂಚಲಿಂಗ ದರ್ಶನದ ಬಗೆಗೆ ನೀಡಿರುವ ಮಾಹಿತಿ, ಅಲಮೇಲಮ್ಮನ ವಿಚಾರ, ಕಾವೇರಿ ತಟದಲ್ಲಿನ ಮರಳರಾಶಿ, ಗಂಗ ಇತಿಹಾಸದ ಬಗ್ಗೆ ಬೆಳಕು ಚೆಲ್ಲಿರುವರು. ಬಿಳಿಗಿರಿರಂಗನ ಬೆಟ್ಟದಲ್ಲಿ ನೆಲೆಸಿರುವ ರಂಗನಾಥ ಸ್ವಾಮಿಯ ದೇವಾಲಯದ ಕುರಿತು ನೀಡಿರುವ ಮಾಹಿತಿ ಓದುಗರಿಗೆ ಅತ್ಯುಪಯುಕ್ತವಾಗಿದೆ. ಬೆಲಗೂರಿನ ಹಾಲು ರಾಮೇಶ್ವರ ದೇವಾಲಯದ ಐತಿಹ್ಯವನ್ನು ತಿಳಿಯುುತ್ತಾ ಓದು ಮುಂದುವರಿದಾಗ ಅನಂತರಾಜುರವರ ಹುಟ್ಟೂರಾದ ಗೊರೂರಿನ ತ್ರಿಕೂಟಲಿಂಗೇಶ್ವರ ದೇವಾಲಯ ಮಾಹಿತಿ ದೊರಕುತ್ತದೆ. ಪ್ರವಾಸಿ ತಾಣಗಳ ಕುರಿತು ತಿಳಿಯುವ ನಮ್ಮ ಓದುವ ಪಯಣ, ಗೊರೂರಿನ ರಥಚಕ್ರಗಳ ಕುರಿತಂತೆ ತಿಳಿಸುತ್ತದೆ. ಚುಂಚನಕಟ್ಟೆಯ ಕೋದಂಡರಾಮನ ದೇವಾಲಯದ ವಿಚಾರವನ್ನು ಲೇಖಕರಾದ ಗೊರೂರು ಅನಂತರಾಜು ರವರು ತುಂಬಾ ಚೆನ್ನಾಗಿ ಓದುಗರಿಗೆ ಕಟ್ಟಿಕೊಟ್ಟಿದ್ದಾರೆ. ಈ ಪ್ರವಾಸ ಕಥನ ಕೇವಲ ಕರ್ನಾಟಕದ ಸ್ಥಳಗಳನ್ನು ಮಾತ್ರವಲ್ಲದೇ ತಮಿಳುನಾಡಿನ ಕುಂಭಕೋಣಂನ ನವಗ್ರಹ ದೇವಾಲಯಗಳವರೆಗೂ ಕರೆದೊಯ್ಯುತ್ತದೆ. ​ಒಟ್ಟಿನಲ್ಲಿ ಈ ಕೃತಿಯ ಆಶಯವೇನೆಂದರೆ, ಈ ಕೃತಿಯು ಕೇವಲ ಪ್ರವಾಸಿ ತಾಣಗಳ ಪಟ್ಟಿಯಲ್ಲ; ಇದು ಇತಿಹಾಸ ಮತ್ತು ವರ್ತಮಾನದ ನಡುವಿನ ಸೇತುವೆ. ನಮ್ಮ ನಾಡಿನ ಅಪ್ರತಿಮ ವಾಸ್ತುಶಿಲ್ಪ, ಪ್ರಕೃತಿಯ ಅಚ್ಚರಿಗಳು ಮತ್ತು ಧಾರ್ಮಿಕ ಕೇಂದ್ರಗಳ ಹಿಂದಿರುವ ತಾತ್ವಿಕ ಹಿನ್ನೆಲೆಯನ್ನು ಓದುಗರಿಗೆ ಮನದಟ್ಟು ಮಾಡುವ ಪ್ರಯತ್ನ ಇಲ್ಲಿ ನಡೆದಿದೆ. ಪ್ರತಿಯೊಂದು ಸ್ಥಳಕ್ಕೂ ತನ್ನದೇ ಆದ ಕಥೆಯಿದೆ, ತನ್ನದೇ ಆದ ನೋವು-ನಲಿವುಗಳಿವೆ. ಆ ಸ್ಥಳಗಳ ಮೌನದಲ್ಲಿ ಅಡಗಿರುವ ಇತಿಹಾಸದ ಚೀತ್ಕಾರವನ್ನು ಅಥವಾ ಶಾಂತಿಯನ್ನು ಗುರುತಿಸುವ ದೃಷ್ಟಿಕೋನವನ್ನು ಈ ಬರಹಗಳು ನೀಡುತ್ತವೆ. ಪ್ರವಾಸೀ ತಾಣಗಳು ಸಂಸ್ಕೃತಿಯ ಪ್ರತಿಬಿಂಬವಾಗಿವೆ.​ಒಂದು ಪ್ರೇಕ್ಷಣೀಯ ಸ್ಥಳವು ಒಂದು ಜನಾಂಗದ ಸಂಸ್ಕೃತಿ ಮತ್ತು ಕಲಾಪ್ರೌಢಿಮೆಯ ಕೈಗನ್ನಡಿಯಾಗಿರುತ್ತದೆ. ಹಳೇಬೀಡು-ಬೇಲೂರಿನ ಶಿಲ್ಪಕಲೆಗಳು ಕೇವಲ ಕಲ್ಲುಗಳಲ್ಲ, ಅವು ಅಂದಿನ ಕಾಲದ ಜನರ ಸೌಂದರ್ಯ ಪ್ರಜ್ಞೆಯ ಸಾಕಾರ ರೂಪಗಳು. ಹಾಗೆಯೇ, ಪಶ್ಚಿಮ ಘಟ್ಟಗಳ ಹಸಿರು ಕೇವಲ ಅರಣ್ಯವಲ್ಲ, ಅದು ನಮ್ಮ ಜೀವಸಂಕುಲದ ಅಸ್ತಿತ್ವದ ಮೂಲ. ಇವುಗಳನ್ನು ರಕ್ಷಿಸುವುದು ಮತ್ತು ಮುಂದಿನ ಪೀಳಿಗೆಗೆ ದಾಟಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಈ ಹೊತ್ತಿಗೆಯು ಆ ಜವಾಬ್ದಾರಿಯನ್ನು ಪ್ರತಿಯೊಬ್ಬ ಓದುಗನಲ್ಲೂ ಜಾಗೃತಗೊಳಿಸುತ್ತದೆ ಎಂಬ ನಂಬಿಕೆ ನನಗಿದೆ.​ಪ್ರವಾಸವು ಮನುಷ್ಯನನ್ನು ವಿನಮ್ರನನ್ನಾಗಿ ಮಾಡುತ್ತದೆ. ಜಗತ್ತು ಎಷ್ಟು ವಿಶಾಲವಾಗಿದೆ ಮತ್ತು ಅದರ ಮುಂದೆ ತಾನು ಎಷ್ಟು ಸಣ್ಣವನು ಎಂಬ ಸತ್ಯದ ದರ್ಶನ ಪ್ರವಾಸಿಗನಿಗಾಗುತ್ತದೆ. ಈ ಕೃತಿಯ ಪುಟಗಳನ್ನು ತಿರುವಿದಾಗ ಓದುಗರು ಕೇವಲ ಮಾಹಿತಿಯನ್ನು ಪಡೆಯದೆ, ಆಯಾ ಸ್ಥಳಗಳ ಅನುಭೂತಿಯನ್ನು ಪಡೆಯಲಿ ಎಂಬುದು ನನ್ನ ಆಶಯ. ಆಗ ಮಾತ್ರ ಗೊರೂರು ಅನಂತರಾಜುರವರು ಹೊರತರುತ್ತಿರುವ ಈ ಕೃತಿಯ ಉದ್ದೇಶ ಸಾಧಿತವಾದಂತೆ. ಕಾಲದ ಪ್ರವಾಹದಲ್ಲಿ ಅಳಿಯದೆ ಉಳಿದಿರುವ ಈ ಐತಿಹಾಸಿಕ ಮತ್ತು ನೈಸರ್ಗಿಕ ತಾಣಗಳತ್ತ ಒಂದು ಅರ್ಥಪೂರ್ಣ ಪಯಣ ಬೆಳೆಸಲು ಈ ಕೃತಿ ನಿಮಗೆ ಪ್ರೇರಣೆಯಾಗಲಿ. ಕೆ. ಎನ್. ಚಿದಾನಂದಸಹ ಶಿಕ್ಷಕರುಜಿ. ಜಿ. ಜೆ. ಸಿ., ಪ್ರಧಾನ ಪ್ರೌಢಶಾಲಾ ವಿಭಾಗಆರ್. ಸಿ. ರಸ್ತೆ, ಹಾಸನ -573201

“ಪ್ರವಾಸಿ ತಾಣಗಳು ಸಂಸ್ಕೃತಿಯ ಪ್ರತಿಬಿಂಬ ಗೊರೂರು ಅನಂತರಾಜು ಪ್ರವಾಸ ಕಥನ” ಕೆ ಎನ್ ಚಿದಾನಂದ Read Post »

ಕಾವ್ಯಯಾನ

ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ”

ಕಾವ್ಯ ಸಂಗಾತಿ ಹಮೀದ್ ಹಸನ್ ಮಾಡೂರು “ಪ್ರಕೃತಿ ಚಮತ್ಕಾರ” ಕತ್ತಲನು ಓಡಿಸಿ…ಮುಂಜಾನೆಯ ತೇರಲಿ,ಸೂರ್ಯ ಏರಿ ಬಂದ ಬಾನಲಿ,ಬೆಳಕು ಬೀರುತ್ತ ಕಿರು ನಗೆಯಲಿ,! ಭುವಿಯ ಬೆಳಕಾಗಿಸಿ…ಖುಷಿ ತಂದಿತು ಜನಮನದಲಿ,ಸಂತಸ ಎಲ್ಲೆಡೆಯು ಸಂಭ್ರಮದಲಿ,ಚಿಲಿಪಿಲಿ ಹಕ್ಕಿಗಳು ಹಾಡ ಇಂಪಿನಲಿ,! ತಂಪು ಶೀತಲ ಗಾಳಿಗೆ…ಮೈ ಪುಳಕಿತಗೊಂಡ ತನುಮನಬೀಸಿದ ತಂಗಾಳಿಗೆ ರೋಮಾಂಚನಮರ ಗಿಡಗಳ ಸ್ವಾಗತದ ನಿತ್ಯ ನರ್ತನ,! ಮತ್ತೆ ಕತ್ತಲಾಗಿಸಿ…ಸೂರ್ಯ ಪಶ್ಚಿಮಕ್ಕೆ ಜಾರಿದ,ಕೆಂಪು ಬಾನಲಿ ಬೆಂಕಿಯ ಚೆಂಡಾದ,ರಸಿಕರ ಕಣ್ಗಳ ಆನಂದಿಸಿ ಮರೆಯಾದ,! ಕರಿ ಬಾನಿನುದ್ದಕ್ಕೂ….ಮಿನುಗು ತಾರೆಗಳ ಆಲಂಕಾರ,ಬೆಳದಿಂಗಳ ಚಂದ್ರನ ಪೂರ್ಣ ಆಕಾರಪ್ರಕೃತಿ ಮಡಿಲಿಗೆ ಬೆಳಕು ಮತ್ತೆ ಚಮತ್ಕಾರ.! ಹಮೀದ್ ಹಸನ್ ಮಾಡೂರು.

ಹಮೀದ್ ಹಸನ್ ಮಾಡೂರು ಅವರ ಕವಿತೆ “ಪ್ರಕೃತಿ ಚಮತ್ಕಾರ” Read Post »

You cannot copy content of this page

Scroll to Top