ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎಲ್ಲೋ ಕುಳಿತ
ಕೋಗಿಲೆಯೊಂದು ಕೂಗುತ್ತಿತ್ತು
ಸುಮ್ಮನೇ
ಮರದ ತುದಿಗೆ ಗಾಳಿ ಎಳೆಗೆ
ಹೇಳುತ್ತಿತ್ತು ಹಾಡನೇ
ಆಚೆ ನೋಡಿ ಈಚೆ ನೋಡಿ
ಜಗವನ್ನೆಲ್ಲಾ ತಿರುಗಿ ನೋಡಿ
ರಾಗದಲ್ಲಿ ತಾಳ ಬೆರೆಸಿ
ಕೂಗುತ್ತಿತ್ತು ಮೆಲ್ಲನೆ
ಜೀವದಲ್ಲೇ ಜೀವನ
ಹಾಡಿನಲ್ಲೇ ಪಾವನ
ಸಗ್ಗವೆಂಬ ಪ್ರೀತಿಗೆ
ನೂರು ಭಾವ ರೀತಿಗೆ
ಗಾಳಿಯೊಂದು ನಾಳೆಗೆ
ಉಸಿರೊಂದು ಉಳಿವಿಗೆ
ಹಾಡುತ್ತಿತ್ತು ಕೋಗಿಲೆ
ತನ್ನ ದಿನದ ರೂಢಿಗೆ
ನೋವನ್ನೆಲ್ಲಾ ಮರೆತು
ಬಾಳಿದರೆ ಒಳಿತು
ಬುವಿಯ ಒಳಗೆ
ಜೀವವೊಂದು ಗುರುತು


́

About The Author

1 thought on “ನಾಗರಾಜ ಬಿ. ನಾಯ್ಕ “ಗಾಳಿ ಎಳೆಗೆ……….””

  1. ಡಾ. ಹೆಚ್. ನಟರಾಜ್ ಆರ್ಯ

    ಕವನ ಅರ್ಥಪೂರ್ಣವಾಗಿ ಮೂಡಿಬಂದಿದೆ.

Leave a Reply

You cannot copy content of this page

Scroll to Top