ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೀಗಿರಲಿ ಬದುಕು
ಬಯಕೆಗಳ ಹೊರೆ ಹೊತ್ತು
ಸಾಗುವ ದಾರಿಯಲಿ
ನನಸಾಗುವ ಕನಸುಗಳಿರಬೇಕು

ಮನದ ಗೂಡಿನಲ್ಲಿ
ಗೆಲುವಿನ ಹೆಜ್ಜೆ ಹಾಕುತ್ತ
ಬಾನೆತ್ತರಕ್ಕೆ ಬೆಳೆಯಬೇಕು

ಸೋಲು ಗೆಲುವಿನ ನಡುವೆ
ಸವಾಲುಗಳ ಸೇತುವೆ ಕಟ್ಟಿ
ಸಂತಸದಿ ಸಾಗಬೇಕು

ಭಾವಗಳ ಬೆಸೆಯುತ್ತ
ಹೊಸತನವ ಅರಸುತ್ತ
ನಸುನಗುತ ನಲಿಯಬೇಕು

ಸದ್ದಿಲ್ಲದೆ ಸಾಧಿಸುತ
ಸುದ್ದಿಯಾಗಿ ಸಂಭ್ರಮಿಸಿ
ಗದ್ದಲವಿಲ್ಲದೆ ಗದ್ದುಗೆ ಏರಬೇಕು
ಡಾ. ಗೀತಾ ದಾನಶೆಟ್ಟಿ

About The Author

Leave a Reply

You cannot copy content of this page

Scroll to Top