ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಕಾಣದಾಗಿದೆ ದಾರಿ
ಒಲವು ಮೂಡಿಸುವ ಮಲ್ಲಿಗೆಯ ಕಂಪಿನ ವಾಸನೆಯಿಲ್ಲದೆ
ಯಾತಕೀ ಮೌನ
ಹೇಳಲಾಗದೆ ಒದ್ದಾಡಿ
ಬಿಡಲಾಗದೆ ಗುದ್ದಾಡಿ
ಹರಿಯುತಿದೆ ಮನ ನಿನ್ನೊಡನೆ

ದೂರದ ಆಸೆಗಳ ಕನವರಿಕೆ
ಕಾಣದ ಕೈಗಳ ಅಡೆತಡೆ
ಸುಖದ ಅಮಲು ಪಡೆಯುವ ಕಸರತ್ತು
ಅಡ್ಡವಾಗಿವೆ ಹಲವು ಬಿಕ್ಕಟ್ಟು
ಕಾಡುತಿವೆ ನೆನಪುಗಳ ಚೌಕಟ್ಟು
ನಿನ್ನ ಮನದ ಮೌನದ ತಾಕತ್ತು
ಗೊತ್ತಿಲ್ಲ ನನಗೆ ಹಕೀಕತ್ತು

ಜೀವನ ಸಂಗ್ರಾಮದಿ ಬಯಕೆಗಳ ಗುಚ್ಛ ನೂರೆಂಟು
ಈಡೇರಿದ ಆಸೆಗಳ ಕನವರಿಕೆ ಕೆಲವುಂಟು
ಎಲ್ಲವೂ ಆಗುವುದೆನ್ನುವ
ಭ್ರಮೆ ಬೇಡ
ನದಿಯ ಹರಿವಿನಂತೆ
ಶರಧಿಯ ಸೇರಿ ಪಾವನವಾಗು ಪಾವನವಾಗು


About The Author

Leave a Reply

You cannot copy content of this page

Scroll to Top