ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜೋಗದ ಸಿರಿ ಬೆಳಕಿನಲ್ಲಿ
ಬೆಳಗಿದ ಕವಿ ಹೃದಯ|
ಜೀವ ಹೂವಾಗಿ ನಗಿಸುತ
ಸ್ಪಂದಿಸಿದ ವಿಸ್ಮಯ||

ಪ್ರಶಸ್ತಿಗಳ ಸರಮಾಲೆಯಲ್ಲಿ
ಶೋಭಿವಂತ ನಿಸಾರ್|
ವೈಚಾರಿಕ ಲೇಖನಗಳಲ್ಲಿ
ಖ್ಯಾತಿ ಅಹ್ಮದ್ ಸರ್||

ಜಾತ್ಯಾತೀತರಾಗಿ ಬಾಳಿದ
ಶರಣಗುಣದವರು|
ಭಗವದ್ಗೀತೆ ವಚನಗಳ ಹೇಳಿ
ಕೊಂಡಾಡಿದವರು||

ಪ್ರಕೃತಿಯ ಸೌಂದರ್ಯದ
ಪ್ರೇಮದ ಆರಾಧಕರು|
ಶಾಲೆಗಳಲ್ಲಿ ಎಲ್ಲರ ಪ್ರೀತಿಯ
ಮೆಚ್ಚಿನ ಅಧ್ಯಾಪಕರು||

ಕಾಲೇಜುಗಳಲ್ಲಿ ನಲ್ಮೆಯ
ಒಲವಿನ ಪ್ರಾಧ್ಯಾಪಕ|
ಸಂವೇದನಾಶೀಲ ಕವಿಗಳ
ಹೃದಯದ ನಾಯಕ||

ವಿವೇಕ ವೈಚಾರಿಕ ಕೃತಿಗಳ
ವಿಶಿಷ್ಟ ಲೇಖಕರು|
ಲಕ್ಷಗಟ್ಟಲೆ ಅಭಿಮಾನಿಗಳ
ನಿಷ್ಕಲ್ಮಷ ಮಾಲಕರು||

ನಿತ್ಯೋತ್ಸವ ಆರತಿ ಬೆಳಗಿದ
ಕನ್ನಡಮ್ಮನ ಐಸಿರಿ|
ಕನ್ನಡಿಗರ ಮನ ಮನೆಗಳಲ್ಲಿ
ಜೋಗದ ಬೆಳಕಿನ ಸಿರಿ||

ಕುರಿಗಳು ಸಾರ್ ಕುರಿಗಳು
ಕುರುಡು ಅನುಕರಣೆ|
ಸಾಮಾಜಿಕ ಕಳಕಳಿಯ ಗೀತೆ
ಜನರಿಗೆ ಆಕರ್ಷಣೆ||

ಸಂವೇದನಾಶೀಲ ಕವಿಗೆ
ಸ್ಪಂದನದ ನಮನ|
ನಿತ್ಯೋತ್ಸವ ನಿಸರ್ಗ ಕವಿಗೆ
ತಲೆಬಾಗಿ ನಮನ||


About The Author

Leave a Reply

You cannot copy content of this page

Scroll to Top