ಕಾವ್ಯ ಸಂಗಾತಿ
ಹಮೀದ್ ಹಸನ್ ಮಾಡೂರು
“ಪ್ರಕೃತಿ ಚಮತ್ಕಾರ”


ಕತ್ತಲನು ಓಡಿಸಿ…
ಮುಂಜಾನೆಯ ತೇರಲಿ,
ಸೂರ್ಯ ಏರಿ ಬಂದ ಬಾನಲಿ,
ಬೆಳಕು ಬೀರುತ್ತ ಕಿರು ನಗೆಯಲಿ,!
ಭುವಿಯ ಬೆಳಕಾಗಿಸಿ…
ಖುಷಿ ತಂದಿತು ಜನಮನದಲಿ,
ಸಂತಸ ಎಲ್ಲೆಡೆಯು ಸಂಭ್ರಮದಲಿ,
ಚಿಲಿಪಿಲಿ ಹಕ್ಕಿಗಳು ಹಾಡ ಇಂಪಿನಲಿ,!
ತಂಪು ಶೀತಲ ಗಾಳಿಗೆ…
ಮೈ ಪುಳಕಿತಗೊಂಡ ತನುಮನ
ಬೀಸಿದ ತಂಗಾಳಿಗೆ ರೋಮಾಂಚನ
ಮರ ಗಿಡಗಳ ಸ್ವಾಗತದ ನಿತ್ಯ ನರ್ತನ,!
ಮತ್ತೆ ಕತ್ತಲಾಗಿಸಿ…
ಸೂರ್ಯ ಪಶ್ಚಿಮಕ್ಕೆ ಜಾರಿದ,
ಕೆಂಪು ಬಾನಲಿ ಬೆಂಕಿಯ ಚೆಂಡಾದ,
ರಸಿಕರ ಕಣ್ಗಳ ಆನಂದಿಸಿ ಮರೆಯಾದ,!
ಕರಿ ಬಾನಿನುದ್ದಕ್ಕೂ….
ಮಿನುಗು ತಾರೆಗಳ ಆಲಂಕಾರ,
ಬೆಳದಿಂಗಳ ಚಂದ್ರನ ಪೂರ್ಣ ಆಕಾರ
ಪ್ರಕೃತಿ ಮಡಿಲಿಗೆ ಬೆಳಕು ಮತ್ತೆ ಚಮತ್ಕಾರ.!
ಹಮೀದ್ ಹಸನ್ ಮಾಡೂರು.



