ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಹೊರಟು ಬಿಡುತ್ತಾರೆ
ವಿದಾಯಕ್ಕೆ ಅವಕಾಶವೇ ಇಲ್ಲದಂತೆ
ಕಂಬನಿಗೂ ತಾವಿಲ್ಲದಂತೆ
ಪರಮಾಶ್ಚರ್ಯ ಆವರಿಸುತ್ತದೆ
ವಾಸ್ತವವ ಒಪ್ಪಲು ಸಾದ್ಯವಿಲ್ಲದಂತೆ

ಅವರಿವರೆಂಬ ಬೇದವಿಲ್ಲದೆ
ಮಕ್ಕಳು ಮರಿಗಳೆಂಬ ಕರುಣೆ ತೋರದೆ
ಸೆಳೆಯುತಿಹನು ಕಾಲರಾಯ
ಅದೆಂತಹಾ ಅವರಸವೋ ಅವನಿಗೆ
ಬದುಕಿ ಬಾಳುವವರ ಸೆಳೆಯಲು

ಮಾತುಗಳಿನ್ನೂ ಉಳಿದಿರಲು
ಕನಸುಗಳು ಸಾವಿರಾರು ಕಾದಿರಲು
ಜವಾಬ್ದಾರಿಯ ಹೊರೆಯ ಹೊತ್ತಿರಲು
ನಂಬಿ ಬದುಕುವ ಜೀವಗಳಿರಲು
ಅದೇನು ಮುಖ್ಯವಿಹುದೋ ಎಲ್ಲದರ ಹೊರತು

ಪ್ರೀತಿ ಪಾತ್ರರನೊಮ್ಮೆ ಆಲಂಗಿಸಿ
ಅಂತಿಮ ನಮನವ ಸಲ್ಲಿಸದೆ
ಕಂಬನಿಯ ಉರುಳಿಸದೆ
ಕೊನೆಯ ಸಂದೇಶವನ್ನೂ ಕೊಡಲಾಗದೆ
ಕಳೆದು ಹೋದವರು ಅದೆಷ್ಟೋ

ಜೊತೆಗಿರಲು ಸಂಭಾಷಿಸಿ
ಇದೇ ಕೊನೆಯ ಬೇಟಿಯೆಂಬಂತೆ
ಮನ ಬಂದಂತೆ ಬದುಕಿಬಿಡಿ
ಆಸೆ ಕನಸುಗಳ ಆಗಾಗಲೇ ತೀರಿಸಿ
ತಿಳಿದಿದೆ ಯಾರಿಗೆ..
ನಾವೆಷ್ಟನೆಯವರೋ ಈ ನಿಗೂಢ ಸರತಿಯಲಿ


About The Author

1 thought on “ರಶ್ಮಿ ಶಮಂತ್ ಅವರ ಕವಿತೆ “ಅನಿರೀಕ್ಷಿತ””

  1. ಅರ್ಥಗರ್ಭಿತವಾಗಿದೆ. ಸಾವು ಸಹಜವಾದರೂ, ಯಾವಾಗ, ಎಲ್ಲಿ, ಹೇಗೆ ಬರುವುದೋ ಅರಿಯದು. ಕೊನೆಯ ಸಾಲಿನ ಪದಗಳು ಮನಸ್ಸನ್ನು ಕಾಡುತ್ತದೆ ನಾವು ಎಷ್ಟನೆಯವರೋ ಎಂದು.

Leave a Reply

You cannot copy content of this page

Scroll to Top