ಕಾವ್ಯ ಸಂಗಾತಿ
ಸುಧಾ ಪಾಟೀಲ್
“ನನ್ನೊಳಗಿನ ನಾನು”


ನಾನೇ ನಗೆ, ನಾನೇ ಅಳುವ ನಿಶಬ್ದ ರಾತ್ರಿ
ನಾನೇ ಕತ್ತಲು ನಾನೇ ಬೆಳಕಿನ ಪಾತಿ
ಹೊರಗಿನ ಹಾದಿಯಲಿ ನಾನು ಬೇರೆಯವರಂತೆ
ಆದರೆ ಒಳಗಿನ ನಾನು ಇನ್ನೂ ಹುಡುಕುತ್ತಿರುವೆ
ಮನದ ಕಿಟಕಿಯಲಿ ಮೌನ ನಿಂತಿದೆ
ಅಲ್ಲಿ ಹಳೆಯ ಕನಸು ಒಂದೇ ನಗುತ್ತಿದೆ
ಹೃದಯದ ಕಣ್ಣಿನಲ್ಲಿ ಕಾಣುವ ಪ್ರತಿಬಿಂಬ
ಅದು ಯಾರು ? ನಾನೋ ? ಇಲ್ಲ, ನನ್ನೊಳಗಿನ ನಾನು
ಒಮ್ಮೆ ಭಯ ಒಮ್ಮೆ ಧೈರ್ಯ ಒಮ್ಮೆ ಅಳಲು ಒಮ್ಮೆ ನಗು
ಈ ಎರಡರ ನಡುವಿನ ಸೇತುವೆಯಲಿ
ನಾನೇ ನಿರ್ಮಾಪಕ ನಾನೇ ಸಂಚಾರಿ
ಹೊರಗಿನ ಲೋಕ ಬದಲಾದರೂ ಪರವಾಗಿಲ್ಲ
ಒಳಗಿನ ನಾನು ಅರಳಬೇಕು
ಅದು ನಿಜವಾದ ಸ್ವಾತಂತ್ರ್ಯ
ಅದು ನಿಜವಾದ ಜೀವ ನಾದ
ಸುಧಾ ಪಾಟೀಲ



