ಕಾವ್ಯ ಸಂಗಾತಿ
ವೈ.ಎಂ.ಯಾಕೊಳ್ಳಿ
“ಹತ್ತು ಶಾಯಿರಿಗಳು”


೧
ನಿನ್ನ ಮ್ಯಾಲ ನಾ ಬರಿಬೇಕಾದ ಸಾಲೆಲ್ಲ
ಯಾರೋ ಕದ್ದಕೊಂಡ ಹೋಗ್ಯಾರ,
ನಿಜ
ಆದರ ನಿನ್ನ ಮ್ಯಾಲ ನಾ ಇಟ್ಟಿರೋ
ಪ್ರೀತಿನ ಯಾರ ಕದ್ದಕೊಂಡ
ಹೋಗ್ತಾರ
೨
ಗಿಡದಾಗ ಅರಳಿದ ತಾಜಾ
ಹೂವ ಹರಿದು
ನಿನ್ನ ಮುಡಿಗೆ ಅರ್ಪಿಸಬೇಕಂತಿದ್ದೆ
ಆದರ ಅದರೊಳಗಿಂದ ದುಂಬಿ
ಹಾರಿ ಹೋದದ್ದ ನೋಡಿ
ಅವು ಮೀಸಲಲ್ಲ ಅಂತ
ಹೃದಯಾನ ಹೂವ ಮಾಡಿ
ಅರ್ಪಿಸಿ ಬಿಟ್ಟೆ.
೩
ನೀ ಪ್ರೀತಿ ಮಾಡಿತಿದಿ ಇಲ್ಲ,
ನನ್ನ ಮುಂದಿರೂ ಪ್ರಶ್ನೆನ ಅಲ್ಲ
ನೀ ಒಮ್ಮೆ ಪ್ರೀತಿ ಮಾಡಿದ್ದಿ ಅನ್ನೊ
ಉತ್ತರನ ಈ ಜನ್ಮ ಮುಗಸಾಕ
ನನಗ ಸಾಕು
೪
ಪ್ರೀತಿ ಪ್ರೇಮ ಸುಳ್ಳು ಅಂತ
ವಾದ ಮಾಡು ಹುಚ್ಚರನ್ನ
ಕಾಂಡ್ರಿಕ್ ನನಗ ನಗಿ ಬರ್ತದೆ
ಮಳಿ ಬೆಳಿ ಸುಳ್ಳಂದರ
ಜೀವನ ಹೆಂಗ ನಡಿತೈತಿ
೫
ದೇವಸ್ಥಾನದಾಗ ದೇವ್ರು
ಅದಾನ ಬಿಟ್ಟಾನ ಅದು
ನನಗ ಮುಖ್ಯ ಅಲ್ಲ
ಎದಿ ಮದೇವಸ್ಥಾನದಾಗ
ಸ್ಥಾಪಿತಾದ ನಿನ್ನ ಮೂರ್ತಿ
ಬಿಟ್ಟರ ನನಗ ಬ್ಯಾರೆ ದೇವರ ಬೇಕಿಲ್ಲ
೬
ಹಾದು ನಾನು ಹುಚ್ಚ
ಬಹಳ ಮಂದಿ ಇವ ಹುಚ್ಚ ಅಂದರ
ಅದು ಖರೇನ ಅಂತಿನಿ
ಆದರ ಅವರು ತಮ್ಮ ಹುಚ್ಚ ಮರತು
ಮಾತಾಡೂದು ಕಂಡ
ನಾ ಒಳಗೊಳಗ ನಗತಿನಿ
೭
ದಿನಾ ಪ್ರವಚನ ಕೇಳಾಕ ಹೋದ
ಆ ಸುಂದರಿ ಮುಖ ನೋಡಿ ನೋಡಿ
ಅವನ ಆ ಪ್ರವಚನದಾಗ
ಆಕಿ ಒಂದ ಪಾತ್ರ ಆದದ್ದು
ಹೆಂಗಂತ್ ನನಗ ತಿಳಿವಲ್ದು
೮
ಜೀವನ ಅಂದರ ಇದ ಇರಬೇಕು
ಪ್ರೀತಿ ಮಾಡಿದವರು ಕೈ ಕೊಟ್ಟರೂ
ಪ್ರೀತಿ ಕೈಕೊಡಂಗೊಇಲ್ಲ
ಹಂಗಂತನ ಈ ಪ್ರೇಮ ಕವಿತಾ
ಹುಟ್ಟಗೋತನ ಇರ್ತಾವಲ್ಲ
೯
ಉದಯ ಆಗೋ ಆ ಸೂರ್ಯಾಗ
ನಂದ ಒಂದ ವಿನಂತಿ
ಬಹಳ ಸುಡು ಸುಡು ಬಿಸಲ ಬೀರಬ್ಯಾಡ
ನನ್ನ ಎದಿಯಾಗ ತಣ್ಣಗ ಇರು
ಆಕಿ ಹಸರ ನೆನಪು
ಆರಿ ಹೋದೀತು ಅಂತ
೧೦
ಹರಕೊಂಡು ಹೋಗೂ ಮಳಿ ನೀರಿನ್ಯಾಗ
ಎಲ್ಲಾ ಹರಕೊಂಡ ಹೋಗ್ತಾವ
ಎಂಥ ವಿಸ್ಮಯ ಅಂತಿ
ಎಂಥ ರ್ರನ ಮಳಿ ಅದರೂ
ಎದಿಯಾಗಿನ ನೆನಪ ಮಾತ್ರ ಶಾಶ್ವತ ಇರ್ತಾವ
ವೈ.ಎಂ.ಯಾಕೊಳ್ಳಿ




