ಕಾವ್ಯ ಸಂಗಾತಿ
ವೇದಿಕೆಯ ಮೆಟ್ಟಿಲುಗಳು
ಡೋ ನಾ ವೆಂಕಟೇಶ್


ಆಗಿರಲಿ ವೇದಿಕೆಗಳು
ಪ್ರಬುದ್ಧ ಸಂವೇದನೆಗಳಕಿಚ್ಚು
ಆಗದಿರಲಿ ವೇದಿಕೆಗಳು ಅಬದ್ಧ ಕೊರೆತಗಳ ಕಾಳ್ಗಿಚ್ಚು
ವೇದಿಕೆಯಲಿ ವಿಜೃಂಭಿಸಲಿ
ಅಗಣಿತ ತಾರೆಗಳು
ದೇದೀಪ್ಯಮಾನ ಲಹರಿಗಳು
ಅನನ್ಯ ಸಾಂಗತ್ಯದ ಗೀತೆಗಳು
ವೇದಿಕೆಗಳೊಳಗೆ ಇರಲಿ
ವಿಚಾರವಂತನಿಗೆ ವಿನಯ
ಅನಾಚಾರಿಗೆ ದುರ್ದಾನ
ಮಾನವಂತನಿಗೆ ಸನ್ಮಾನ.
ಹೇಳದೆಯೇ ಕೇಳಿಸಿಕೊಳ್ಳುವ ಶ್ರೋತೃಗಳು
ಶೋಕ ಗೀತೆಯಿಲ್ಲದೆಯೇ ಮಿಡಿಯುವ ಕಣ್ಣೀರಧಾರೆಗಳು
ಧ್ವನಿವರ್ಧಕವಿಲ್ಲದೇ ಮಾರ್ದನಿಸುವ ಅಮೃತ ವಚನಗಳು.
ಎಲ್ಲಾ
ಜೀವನದ ಅನುಭಾವ ಮೆಟ್ಟಿಲುಗಳು!
ಡೋ ನಾ ವೆಂಕಟೇಶ





Nice Bhavoji