ಕಾವ್ಯ ಸಂಗಾತಿ
ಪ್ರೊ .ರಾಜೇಶ್ವರಿ ಶೀಲವಂತ ಪುಣೆ
ʻಅಡುಗೆʼ


ಏನೇ ಏನಿವತ್ತು ಊಟಕ್ಕೆ
ಊಟಕ್ಕೇನಮ್ಮ
ಎಲ್ಲರ ಮನೆಯ ಸಹಜ ಪ್ರಶ್ನೆ
ಅದಕ್ಕವಳದು ಹರ ಸಾಹಸ
ನಿನ್ನೆಯದು ಇಂದಾಗೋಲ್ಲ
ಪ್ರತಿದಿನವೂ ಹೊಸದಿರಬೇಕಲ್ಲ
ಉಪ್ಪು ಖಾರ ಹದವಾಗಿರಲು
ಅವಳ ಪರಿವೆಯಿಲ್ಲ
ಅದು ತಪ್ಪಿದರೆ ಅವಳಿಗೇನೆ ಎಲ್ಲ
ಆ ಸಿಟ್ಟಿನಲ್ಲಿ ಮಾಡೋಲ್ಲ
ಅವಳು ರೊಟ್ಟಿ
ಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿ
ಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರ
ಸುರೀತಾಳೆ ಭರ ಭರ ಕೋಪದಬ್ಬರ
ಎಲ್ಲರೂ ಹೋಟಲ ಮೊರೆ
ರುಚಿಯಿರದ ತಿಂಡಿಗೆ ಟಿಪ್ಸ ಬೇರೆ
ನೀ ಮಾಡಿದ ಚಹಾ ನಿನ್ನಷ್ಟೇ ಸಿಹಿ
ಚಪಾತಿ ನಿನ್ನತರಹ ಮೃದು
ನಿನ್ನ ಕೈ ರುಚಿ ಜೇನಿನಂತೆ
ಅಂತ ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ
ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳು
ಅಡುಗೆ ಮನೆಯ ಮತ್ತೊಮ್ಮೆ
ಹೊತ್ತು ನೋಡಿ ಈ ಎಲ್ಲವನು
ಒಂದು ದಿನವಾದರೂ
ಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ
ನೀವು ಪರಾರಿ
ನಿಟ್ಟುಸಿರಿನೊಂದಿಗೆ
ಕೊನೆಗಂದೆ
ಅಬ್ಬಾ!! ನೀನೆ ಸರಿಸಾಟಿ ಇದಕೆಲ್ಲ.
ಪ್ರೊ .ರಾಜೇಶ್ವರಿ ಶೀಲವಂತ ಪುಣೆ




