ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅವಳು ಅವನಿಯೊಳಗಿನ
ಅಪರೂಪದ ಅನುರೂಪೆ,
ನುಡಿಗಂಪಿನ ಇಳೆತಂಪಿನ
ಎಳೆಗಣ್ಣಿನ ಕೆಂಬಣ್ಣದ ಆಲಾಪೆ.

ತನ್ನೋಟದಲಿ ನುಂಗುವಳು
ಅನಂತಲೋಕದ ಇಳೆಯನು,
ವಾವ್ ವಾರೇ ನೋಟದ ಹುಡುಗಿ
ನಾಚುವಳು ಕಣ್ಣಂಚಿನಲ್ಲಿ,
ಲಾಸ್ಯಬಿಂಬದ ಬೆಡಗಿ
ಕಣ್ಣು ಚುಮುಕಿಸುವ ಹುಡುಗಿ
ಬಳಕುವಳು ತುಟಿಯಂಚಿನಲಿ.

ಅವಳ ಕಣ್ಣಂಗಳದ  ಕಾಂತಿಯ
ಹೊಳಪು,
ಸಾವಿರದ ಸಹಸ್ರ ನೆನಪುಗಳ ಬುತ್ತಿ .
ಗಾಢ ಪ್ರೇಮದ,ಕಡುದುಃಖ
ಯಾನದ ಅನುರುಕ್ತಿ,
ಸುಮಧುರ ಸಮ್ಮೋಹನದ
ಸಾತ್ವಿಕ ಸರಸದ ಕಾಂತಿಯುಕ್ತಿ.

ಕಣ್ಣೋಟದ ಬೆಸುಗೆಯಲಿ
ನಂಬಿಗೆ ಧೈರ್ಯದ ವಿಶ್ವಾಸ,
ಅವಳೆದುರಿನ  ಕಪಟತನದ  ಮನಕ್ಕೆ
ನಿಂತು ಕುಂತು ಆಯಾಸದಿ
 ಭೋರ್ಗರೆಯುವ
ಉಸಿರೋಟದ ಶ್ವಾಸ.
ದ್ವಂದ್ವ ವಿಚಲಿತ ವಿರಹದ
ವಿರಸದ  ನಯನನೋಟದಿಂದ
ಮುಷ್ಕರದ ಅವಿಶ್ವಾಸ .

ಚಂದ್ರಮುಖಿ ನೀಲಸಖಿಯ
ಕಂಗಳಲಿ, ಒಮ್ಮೊಮ್ಮೆ
ಸದ್ದಿಲ್ಲದೆ ಸುಡುವ ಅಗ್ನಿಜ್ವಾಲೆ,
ಮತ್ತೊಮ್ಮೆ ಮಗದೊಮ್ಮೆ
ಸಾಮರಸ್ಯದ ಸಂಪ್ರೀತಿಯ
ಶಾಂತತನ್ಮಯದ ಪ್ರೇಮಲೀಲೆ.

ಕಣ್ಣಲ್ಲೇ, ಕ್ರಾಂತಿಯಿಂದ  
ಕಣ್ ಬಾಣದಿಂದ ಕೊಲ್ಲುವವಳು
ಕಂಗಳಲ್ಲೇ ಕಳಿತು ಮಿಳಿತು  
ಕಾಡದೇ ಕುಂತವಳು
ನಯನಗಳಲ್ಲೇ ನಾಚಿ
ನೀರಾಗಿ ನಿಂತವಳು
ಅಕ್ಷಿಗಳಲ್ಲೇ ಸಾಕ್ಷಿಯಾಗಿ
ಸೋಲು ಗೆಲುವಿನ
ದರ್ಶನಿಯಾದವಳು
ನೇತ್ರದಲ್ಲೇ ತಣಿದು ಮಣಿದು
 ಮಧುರಯಾತ್ರೆ ಹೊಂಟವಳು.

ಬಟ್ಟಕಂಗಳ ಚೆಲುವೆಯ
ಪ್ರೇಮಕಂಗಳ ಭಾಷೆ,
ಹುಬ್ಬಕೆಳಗಿನ ಕಪ್ಪಂಗಳದ
ಪಸರಿಕೆಯ ಪಕ್ವ ಪರಿಭಾಷೆ.
ಭಾವಗಳು ಎದೆಯುಕ್ಕಿದಾಗ ಮಾತಿಲ್ಲದ ,ಸದ್ದಿಲ್ಲದ,
ಮೌನದ  ಕಣ್ಸನ್ನೆಯ ಪರೀಷೆ.
ಕತ್ತಲಲ್ಲಿಯೂ ಮಿನುಗಿ
ಹೃದಯದಲಿ ಗುನುಗುವ
ಹೊಳೆವ ಅಕ್ಷಿಗಳ ನಿರೋಷೆ.


About The Author

1 thought on “ತಾತಪ್ಪ.ಕೆ.ಉತ್ತಂಗಿ ಕವಿತೆ “ಬಟ್ಟಕಂಗಳ ನಿರೋಷೆ””

Leave a Reply

You cannot copy content of this page

Scroll to Top