ಕಾವ್ಯ ಸಂಗಾತಿ
ಡಾ ವಿಜಯಲಕ್ಷ್ಮಿ ಪುಟ್ಟಿ
“ಬಚ್ಚಿಟ್ಟುಕೋ”


ಎದೆಯೊಳಗೆ ನನ್ನ ಬಚ್ಚಿಟ್ಟುಕೊ,
ಉಸಿರ ಪಿಸುಮಾತ ಹಾಗೆ,
ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ
ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,
ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ
ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರು
ಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ
ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲ
ಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ
ಬರೆಯುವೆ ನಿನ್ನ ಪ್ರೀತಿಯ ಹೆಸರ ಪುಟ ಪುಟದ ಸಾಲಿನಲಿ
ಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ …
ಡಾ ವಿಜಯಲಕ್ಷ್ಮಿ ಪುಟ್ಟಿ




ಉತ್ತಮ ಕವನ ವಿಜಯಲಕ್ಷ್ಮಿ ನಿಮ್ಮ ಕನಸು ನನಸಾಗುತ್ತದೆ
ನಿಮ್ಮ ಆಸೆ ಈಡೇರಲಿ