ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಅಧಿಕಾರವೆಂದರೆ
ಕೈಯಲ್ಲಿರುವ ಕಿರೀಟವಲ್ಲ,
ಜವಾಬ್ದಾರಿಯುತ ಹೊಣೆಗಾರಿಕೆ
ಅದು ಗದ್ದುಗೆ ಮೇಲಿನ ಮೋಹ ಅಲ್ಲ,
ನೆಲದ ಮೇಲಿನ ಬೆಳಕ ದೀವಿಗೆ.
ಹೆಜ್ಜೆ ಹಾಕುವ ಪ್ರತಿ ಹಾದಿಯನ್ನೂ
ಜವಾಬ್ದಾರಿಯಿಂದ ತೋರುವ ದೀಪ.
ಕಠಿಣ ಧ್ವನಿಯಲ್ಲಿ ಕೂಗುವುದಲ್ಲ
 ಕೀಲುರಿಮೆಯಿಂದ  ಕಾಣುವುದಿಲ್ಲ
 ಕಿರಿ ಮಾಡಿ ಮೊದಲಿಸುದಲ್ಲ ಅಧಿಕಾರ,!
ಮೃದು  ಭಾವದಲ್ಲಿ ನಂಬಿಕೆ  
ಹುಟ್ಟಿಸುವಂಥದ್ದು. ಅಧಿಕಾರ!
ಭಯ ಹುಟ್ಟಿಸುವ ಕೈಯಲ್ಲಲ್ಲ,
ಆಶ್ರಯ ಕೊಡುವ ಹೃದಯದ ಆದರ್ಶ ಅರ್ಥಪೂರ್ಣ ವ್ಯವಸ್ಥೆ ಅಧಿಕಾರ!
ಒಮ್ಮೆ ಅಹಂಕಾರವಾದರೆ
ಅದು ವಿಷವಾಗುತ್ತ  ಮನಸ್ಸು
ಹದಗೆಡಿಸಿ ಮನಗಳ ಕೊಲೆಯಂತ
ಪಾಪಕೃತ್ಯ ಇಳಿಸಿಬಿಡುವ ನಶೆ.
ಸ್ವಂತ ಬೇರುಗಳನ್ನೇ
ಸುಟ್ಟುಹಾಕುವ ಅಗ್ನಿ. ಅಧಿಕಾರ,,!
ಸೇವೆಯಾಗಿ ಪರಿವರ್ತಿತವಾದರೆ
ಅದು ಅಮೃತವಾಗುವ ಸಂಜೀವಿನಿ
ಬಾಯಾರಿದ ಬದುಕುಗಳಿಗೆ  
ಜೀವ  ನದಿ. ಅಧಿಕಾರ.!
ಆಜ್ಞೆ ನೀಡುವುದು ಸುಲಭ,
ಆದರ್ಶವಾಗಿಸುವುದು ಕಠಿಣ.
ತೀರ್ಪು ಹೇಳುವುದು ಸುಲಭ,
ನ್ಯಾಯ ಒದಗಿಸುವದು ಧೈರ್ಯ.
ನಿಜವಾದ ಅಧಿಕಾರ
ಎತ್ತರದಲ್ಲಿ ನಿಂತು ನೋಡುವುದಲ್ಲ,
ಕೆಳಗಿಳಿದು ಕೈ ಹಿಡಿದು ನಡೆಯುವುದು.
ತಾನೊಬ್ಬನೆ ಹೊಳೆಯುವುದಲ್ಲ,
 ಬಿದ್ದವರನ್ನು ಕೈ ಹಿಡಿದು ಎತ್ತಿ
 ಬದುಕ ಬೆಳಗಿಸಿ  ಮೌನವಾಗುವುದು.
ಅಧಿಕಾರ
ಗೆಲುವಿನ ಘೋಷಣೆ ಅಲ್ಲ,
ಸೋಲಿನ   ಸಮಯದಲ್ಲಿ
ಜೊತೆಯಾಗಿರುವ  ಆಪ್ತತೆ.
ಗತಕಾಲದಲ್ಲಿ ಆಳಿದ
ಗದ್ದುಗೆಗಳು ಕರಗಿ
ಮಣ್ಣಲ್ಲಿ ಮಣ್ಣಾಗಿವೆ.
ಹುದ್ದೆಗಳು ರದ್ದಾಗುತ್ತವೆ.
ಉಳಿಯುವುದು ಮಾತ್ರ
 ನಿನ್ನ ನಡತೆ  ಘೋರತೆಯ ನೆನಪು.
ಹಾಗಾಗಿ
ಅಧಿಕಾರವನ್ನು ಧರಿಸು
ಭಾರವಾಗಿ ಅಲ್ಲ, ಭಕ್ತಿಯಂತೆ.
ಅದನ್ನು ಬಳಸು.
ಯುಕ್ತಿ, ಸ್ವಾರ್ಥಕ್ಕಾಗಿ ಅಲ್ಲ,
ಸಾರ್ಥಕತೆಗಳಿಗಾಗಿ.
ಏಕೆಂದರೆ
ಅಧಿಕಾರಕ್ಕೆ ಅಂತ್ಯವಿದೆ,
ಉತ್ತಮಾಧಿಕಾರದ ಮೌಲ್ಯಕ್ಕೆ
ಅಂತ್ಯವಿಲ್ಲ. ಅದು ಶಾಶ್ವತ


About The Author

Leave a Reply

You cannot copy content of this page

Scroll to Top