ಅನುವಾದ ಸಂಗಾತಿ
“ಒಂದು ಆಧುನಿಕ ದೇವಾಲಯದ ಕಥೆ”
ಜಿ.ಉಮಾ ಮಹೇಶ್ವರ್ ಅವರ ತೆಲುಗು ಕಥೆ
ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು



ಅಕ್ಟೋಬರ್ 2, 2009.
ರಾತ್ರಿ ಹನ್ನೊಂದುಗಂಟೆ. ರಿಟೈರ್ಡ್ ಚೀಫ್ ಇಂಜಿನಿಯಾರ್ ಗೋವಿಂದರೆಡ್ಡಿ, ಹೈದರಾಬಾದ್ನಲ್ಲಿರುವ ತಮ್ಮ ಮನೆಯಲ್ಲಿ ಟಿವಿ ಮುಂದೆ ಕುಳಿತು ಪ್ರವಾಹದ ಭೀಕರ ದೃಶ್ಯಗಳನ್ನು ನೋಡುತ್ತಿದ್ದಾರೆ. ಕೃಷ್ಣಾನದಿಗೆ ಬಂದಿರುವ ಪ್ರವಾಹದ ನೀರು ಯಾರ ಮಾತನ್ನೂ ಕೇಳದ ಹಠಮಾರಿ ಮಗುವಿನಂತೆ, ಸಿಟ್ಟಿಗೆದ್ದ ಯುವಕನ ಅಗ್ರಹದಂತೆ ತುಂಬಿ ಉಕ್ಕುತ್ತಾ, ಹೊಮ್ಮಿ ಬರುತ್ತಾ ನೀರಿನ ಮಟ್ಟವನ್ನು ಹೆಚ್ಚಿಸುತ್ತಿದೆ.
ಆಗಲೇ ಟಿವಿಯಲ್ಲಿ ಹೇಳುತ್ತಿದ್ದರು –
“ಶ್ರೀಶೈಲಂ ಡ್ಯಾಮ್ ಎತ್ತರ 884 ಅಡಿ. ಈಗ ನೀರಿನ ಮಟ್ಟ 880 ಅಡಿಗೆ ತಲುಪಿದೆ. ಇಡೀ ಹನ್ನೆರಡು ಗೇಟ್ಗಳನ್ನು ಎತ್ತಿದ ನಂತರವೂ ಪ್ರವಾಹದ ವೇಗ ಕಡಿಮೆಯಾಗಲಿಲ್ಲ. ಇನ್ ಫ್ಲೋ , ಅವುಟ್ ಫ್ಲೋ ಗಿಂತಲೂ ತುಂಬಾ ಜಾಸ್ತಿ ಇದ್ದುದರಿಂದ ಇನ್ನು ಸ್ವಲ್ಪ ಹೊತ್ತಿನಲ್ಲಿಯೇ ಸಂಪೂರ್ಣ ವಾಗಿ ಡ್ಯಾಮ್ ನೀರಿನ ಹರಿವಿನಲ್ಲಿ ಮುಳುಗಿಹೋಗ ಬಹುದೆಂದು, ಒಟ್ಟು ನೀರಿನ ಪ್ರವಾಹ ಡ್ಯಾಮ್ ತುಂಬಿ ಅದರ ಮೆಲಿಂದ ಹರಿಯುವ ಸಾಧ್ಯತೆ ಇರುವುದೆಂದು ನಿಪುಣರ ವರ್ಗ ಹೇಳುತ್ತಿತ್ತು. ಎಲ್ಲಾ ಗೇಟುಗಳನ್ನು ಎತ್ತಿದ ಸರ್ಕಾರಿ ಅಧಿಕಾರಿಗಳೂ ಏನೂ ಮಾಡಲಾಗದೇ ದೇವರಮೇಲೆ ಭಾರಹಾಕಿ, ಅವನೇ ಕಾಪಾಡಬೇಕೆಂದು ಹೇಳಿದರು’’
ಟಿವಿಯಲ್ಲಿ ಚರ್ಚೆನಡೆಯುತ್ತಿದೆ.
“ಮೇಲಿಂದ ಬರುತ್ತಿರುವ ಪ್ರವಾಹವನ್ನು ಅಂದಾಜು ಹಾಕಿ ಮೊದಲೇ ಏಕೆ ಗೇಟ್ಗಳನ್ನು ತೆರೆಯಲಿಲ್ಲ” ಎಂದು ಸರ್ಕಾರವನ್ನು ಪ್ರಶ್ನಿಸುತ್ತಿದ್ದಾರೆ.
“ಇಷ್ಟೊಂದು ಪ್ರವಾಹ ಬರುತ್ತದೆಂದು ಊಹಿಸಲಿಲ್ಲವೆಂದು, ಜಲಾಶಯ ಭರ್ತಿಯಾದರೆ ನಾಲೆಗಳ ಮೂಲಕ ಹೊಲಗಳಿಗೆ ನೀರುಣಿಸ ಬಹುದು ಎಂದುನಿಲ್ಲಿಸಸಿದರೆಂದು” ಸರ್ಕಾರದ ಅನುಕೂಲರು ವಾದಿಸುತ್ತಿದ್ದಾರೆ.
“ಇದು ಉದ್ದೇಶ ಪೂರ್ವಕವಾಗಿ ಮಾಡಿರುವುದೆಂದು, ಮಾನವ ತಪ್ಪಿದವೆಂದು” ಆಕ್ಷೇಪಣಗಳು.
“ಸೀಮೆಗೆ ನೀರು ಕೂಡಿಡುವುದು ಹೇಗೆ ಸ್ವಾರ್ಥವಾಗುತ್ತದೆ ” ಬೇಸಾಯಕ್ಕೆ ಬೇಕಾದ ನೀರಿನ ಸಾಧನಾ ಸಮಿತಿ ಅವರ ಸಮರ್ಥನೆಗಳು , ಒಬ್ಬರಿಮೇಲೆ ಇನ್ನೊಬ್ಬರು, ಆರೋಪ –ಪ್ರತ್ಯಾರೋಪಗಳನ್ನು ಮುಂದುವರಿಯುಸುತ್ತಿದ್ದಾರೆ . ಗೋವಿಂದರೆಡ್ಡಿ ಹಾಗೆ ನೋಡುತ್ತಾ ನೋಡುತ್ತಾ ನಲವತ್ತು ವರ್ಷ ಹಿಂದಕ್ಕೆ ಹೋದ.
ಆಗಲೇ ಅನಂತಪೂರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಇಂಜಿನಿಯರಿಂಗ್ ಮುಗಿಸಿಕೊಂಡು ಪಬ್ಲಿಕ್ ಸರ್ವೀಸ್ ಕಮಿಷನ್ ಎಕ್ಸಾಮ್ ಬರೆದಮೇಲೆ ಜೂನಿಯರ್ ಇಂಜನೀರಿಂಗ್ ಯಾಗಿ ಜಾಬ್ ಸಿಕ್ಕಿತು. ಮೊದಲೇನೆಯ ಪೋಸ್ಟಿಂಗ್ ಶ್ರೀಶೈಲಮ್ ಪ್ರಾಜೆಕ್ಟ್. ಶಿವರಾಮಿರೆಡ್ಡಿ ಅವರು ಎಗ್ಜಿಕ್ಯುಟಿವ್ ಇಂಜನೀರ್ ಯಾಗಿ , ಸುಬ್ರಹ್ಮಣ್ಯಂ ಸೂಪೆರಿಂಡೆಂಟ್ ಇಂಜನೀರ್ ಯಾಗಿ ಇದ್ದರು. ಪ್ರಾಜೆಕ್ಟ್ ಕೆಲಸಗಲೆಲ್ಲಾ ಕನ್ಸ್ಟ್ರಕ್ಷನ್ ಕಾರ್ಪೊರೇಷನ್ ಲಿಮಿಟೆಡ್ ಮೂಲಕ ನಡೆಯುತ್ತಿದ್ದವು. ಶಿವರಮಿರೆಡ್ಡಿ ಅವರು ತನಗಿಂತಲೂ ಹದಿನೈದು ವರ್ಷ ದೊಡ್ಡವರು. ಆಗ ತನಗೆ ಇಪ್ಪತ್ತೈದುವರ್ಷ. ಯಾವ ಅನುಭವ ಜ್ಞಾನವೂ ಇಲ್ಲ. ಎಲ್ಲವೂ ಪುಸ್ತಕ ಜ್ಞಾನ. ಶಿವರಾಮಿರೆಡ್ಡಿ ಅವರಿಗೆ ತಾಳ್ಮೆಜಾಸ್ತಿ. ತನ್ನನ್ನು ಚೆನ್ನಾಗಿ ಗೈಡ್ ಮಾಡುತ್ತಿದ್ದರವರು. ಎಲ್ಲರನ್ನೂ ತುಂಬಾ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ಆಗಲೇ ಅಲ್ಲಿರುವ ಎಲ್ಲಾ ಇಂಜಿನಿಯರ್ಗಳಲ್ಲಿ ತಾನೇ ಕಿರಿಯವನು. ಅನೇಕರು ಡಿಪ್ಲೊಮಾ ಮೂಲಕ ಸೇರಿ, ಪ್ರಮೋಷನ್ ಮೇಲೆ ಆ ಮಟ್ಟಕ್ಕೆ ಬಂದರು.
ಶಿವರಾಮಿರೆಡ್ಡಿ ಅವರು ನಾಗಾರ್ಜುನ ಸಾಗರ್ ಪ್ರಾಜೆಕ್ಟ್ ನಲ್ಲಿ ಕೆಲಸಮಾಡಿದ ಅನುಭವದಿಂದ ಇಲ್ಲಿಗೆ ಬಂದಿದ್ದರು. ಪ್ರಾಜೆಕ್ಟ್ ಕೆಲಸಗಳೆಲ್ಲಾ ಎಸ್ಸಿ ಅವರ ಅಧೀನಯಲ್ಲಿ ನಡೆಯುತ್ತಿದ್ದವು. ಸಂದರ್ಭಗಳನ್ನು ತಮಗೆ ಅನುಕೂಲವಾಗಿ ಪರಿವರ್ತಿಸುವಲ್ಲಿ ಎಸ್ ಇ ಅವರು ಬಹಳ ಪ್ರವೀಣರು. ಒಳ್ಳೆಯ ಚಾಕಚಕ್ಯತೆಯ ವ್ಯಕ್ತಿ. ಆಗ ಸಿ ಇ ಹೈದರಾಬಾದ್ನಲ್ಲಿ ಇರುತ್ತಿದ್ದರು. ಹಲವು ಸಂದರ್ಭಗಳಲ್ಲಿ ಸುಬ್ರಹ್ಮಣ್ಯಂ ಅವರಜೊತೆ ಹೋಗಿ ಸಿ.ಇ. ಅವರನ್ನು ಭೇಟಿಯಾದರು.

ಒಮ್ಮೆ ಡ್ಯಾಮ್ ಕೆಲಸಗಳಲ್ಲಿ ಕಲ್ಲುಗಳನ್ನು ಹೊತ್ತುಕೊಂಡು ಹೋಗುವ ಕಾರ್ಮಿಕನು ಕಾಲುಜಾರಿ ಕೆಳಗೆ ಬಿದ್ದಿದ್ದಾನೆ. ಆಗ ಸಪೋರ್ಟ್ ಯಾವುದೂ ಇಲ್ಲದರಿಂದ ಹಾಗೆ ಜಾರುತ್ತಾ ಬಹಳ ಅಳಕ್ಕೆ ಬಿದ್ದು ಬಿಟ್ಟನು. ಪೆಟ್ಟುಗಳು ಬಲವಾಗಿ ತಾಕಿದವು. ರಕ್ತ ಸೋರುತ್ತಿದೆ.. ಮನುಷ್ಯನಿಗೆ ಪ್ರಜ್ಞೆಯೂ ಇಲ್ಲ. ತಕ್ಷಣ ಅಲ್ಲಿಯೇ ಪ್ರಥಮ ಚಿಕಿತ್ಸೆ ಮಾಡಿಸಿ ಪ್ರಾಜೆಕ್ಟ್ ಆಸ್ಪತ್ರೆಗೆ ಕರೆದೊಯ್ದರು. ಚೇತರಿಸಿಕೊಳ್ಳಲು ಹಲವು ದಿನಗಳು ಬೇಕೆಂದು ಹೇಳಿದರು. ಎಲ್ಲಾ ಕೆಲಸಗಾರರು ಜಮಾಯಿಸಿ ಕೆಲಸ ಮಾಡುವುದು ನಿಲ್ಲಿಸಿದರು. ಕೆಲಸ ನಿಂತುಹೋಯಿತು. ದೊಡ್ಡ ಜಗಳವೇ ನಡೆಯಿತು. ಕೆಲಸ ಸ್ಥಗಿತಗೊಂಡಿತು. ಮೇಸ್ತ್ರಿಗಳು ಕೈಬಿಟ್ಟರು. ಯೂನಿಯನ್ ಮುಖಂಡರು ಎಸ್.ಸಿ. ಅವರನ್ನು ಭೇಟಿಮಾಡಿದರು. ಅವರು ಅವರನ್ನು ಸಮಾಧಾನಪಡಿಸಿ ಯಾವುದಾದರೂ ಕಾಂಪೆನ್ ಸೇಷನ್ ಕೊಡುತ್ತೇವಿ ಎಂದು ಒಪ್ಪಿಸಿದರು. ಆದರೆ ಇದು ಈ ಒಂದು ಸಲಕ್ಕೆ ನಿಂತುಹೋಗದು. ಇಷ್ಟು ಪ್ರಾಜೆಕ್ಟ್ ಯಲ್ಲಿ ಈ ರೀತಿಯ ವಿಷಯಗಳು ನಡೆಯುತ್ತಲೇ ಇರುತ್ತವೆ. ನಾಗಾರ್ಜುನ ಸಾಗರದಲ್ಲಿ ಸಾಕಷ್ಟು ಪ್ರಾಣಹಾನಿ ಸಂಭವಿಸಿದೆ. ಹಾಗಾಗಬಾರದೆಂದು ಕೊಂಡರೆ ಅಪಾಯಕಾರಿಯ ಕೆಲಸಗಳು ಯಂತ್ರಗಳ ಸಹಾಯದಿಂದ ಮಾಡಿಸಬೇಕು. ಯಂತ್ರಗಳನ್ನು ಹೆಚ್ಚಾಗಿ ಬಳಸಬೇಕು. ಇದೆ ವಿಷಯವನ್ನು ಕುರಿತು ಸಿ .ಇ. ಅವರೊಂದಿಗೆ ಚರ್ಚಿಸಿದರೆ, ‘‘ನಿಜವೇ ಆದರೂ , ಈ ಪ್ರಾಜೆಕ್ಟ್ ಮೂಲಕ ಜನರಿಗೆ ಒಂದಿಷ್ಟು ಜೀವನೋಪಾಧಿ ಸಿಗುತ್ತದಲ್ಲ. ಯಂತ್ರಗಳ ಬಳಕೆ ಯಾದರೆ ಜನರ ಉಪಾಧಿಗೆ ಧಕ್ಕೆ ಬೀಳುತ್ತದೆಂದು , ಅದಕ್ಕಾಗಿಯೇ ಸರ್ಕಾರು ಈ ಪ್ರತಿಪಾದನೆಗೆ ಅಂಗೀಕರಿಸುವುದಿಲ್ಲ ಎಂದು ಹೇಳುತ್ತಾ ಸಮಯಕ್ಕಾಗಿ ಕಾಯೋಣ” ಎಂದು ಸೂಚಿಸಿದರು.
ಒಂದು ರಿವ್ಯೂ ಮೀಟಿಂಗ್ ನಲ್ಲಿ ಮಂತ್ರಿ ಅವರು ಪ್ರಾಜೆಕ್ಟ್ ಕೆಲಸವನ್ನು ಪರಿಶೀಲಿಸಿ ಕೆಲಸ /ಕಾಮಗಾರಿ ವಿಳಂಬವಾಗುತ್ತಿದೆ ಎಂದು ದೂರಿದರು. ರಾಜ್ಯದಲ್ಲಿ ವಿದ್ಯುತ್ತಿನ ಕೊರತೆ ತೀವ್ರವಾಗಿದೆ ಎಂದು, ನಾವು ಇನ್ನೂ ಡ್ಯಾಮ್ ನಿರ್ಮಿಸುವ ಕೆಲಸದಲ್ಲೇ ಇದ್ದೇವೆಂದು, ವಿದ್ಯುತ್ ಯಾವಾಗಾ ಉತ್ಪಾದನೆ ಮಾಡುತ್ತೇವೆ ಎಂದು ಸಿಟ್ಟಗೆದ್ದರು. ಆಗ ಎಸ್ . ಇ. ಅವರು ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡರು – ಯಂತ್ರಗಳ ಸಂಖ್ಯೆಯನ್ನು ಹೆಚ್ಚಿಸೋಣ ಎಂದು, ಮತ್ತು ಜನರು ಹೊತ್ತುಕೊಂಡು ಹೋಗುವ ಅಗತ್ಯವಿಲ್ಲದೆ ರೋಪ್ ವೇ ಮೂಲಕ ಕೆಲವು ಟನ್ಗಳಷ್ಟು ಮೆಟೀರಿಯಲ್ ಎಲ್ಲಿಗೆ ಬೇಕಾದರೆ ಅಲ್ಲಿಗೆ ತೆಗೆದುಕೊಂಡು ಹೊಗ ಬಹುದೆಂದು ಅದರಿಂದ ಕೆಲಸಗಳನ್ನು ಬೇಗೆ ಬೇಗೆ ಮಾಡಬಹುದೆಂದು ಮಂತ್ರಿ ಅವರನ್ನು ಸಮಾಧಾನ ಮಾಡಿದರು. ಕೂಡಲೇ ಮಂತ್ರಿ ಅವರು ಆದೇಶ ಹೊರಡಿಸಿದರು. ಅವರು ಯೋಚಿಸಿದಂತೆಯೇ, ಸಮಯಾನು ಕೂಲವಾಗಿ ತನ್ನ ಆಲೋಚನೆಯನ್ನು ಸಮಯಕ್ಕೆ ಪೂರೈಸಿದನು. ಅದರಿಂದ ಬಹುತೇಕ ಯಂತ್ರಗಳ ಸಹಾಯದಿಂದ ರೋಪ್ ವೇ ಬಳಸಿದ್ದರಿಂದ ನಿರ್ಮಾಣ ಹಂತದಲ್ಲಿಯೇ ಈ ಯೋಜನೆಯಲ್ಲಿ ಕನಿಷ್ಠ ಪ್ರಾಣಹಾನಿ ಸಂಭವಿಸಿದೆ. ಇಂತಹ ನಿರ್ಧಾರಗಳನ್ನು ಸಮಯಸ್ಪೂರ್ತಿ ಯಿಂದ ತೆಗೆದುಕೊಳ್ಳುವಲ್ಲಿ ಅವರು ದಿಟ್ಟರು.
“ನೀವು ಇನ್ನೂ ಏಕೆ ಮಲಗಲಿಲ್ಲ? ಒಂದು ಗಂಟೆ ಮೀರಿದೆ? ನಾವೇನು ಮಾಡಬಲ್ಲೆವು? ಹೀಗೆ ಬೆಳಗಾವ ವರೆಗೆ ಕೂತಿದ್ದರೂ ಉಪಯೋಗವೇನು? ನಿದ್ದೆ ಕಾದದ್ದುದರಿಂದ ಉಯೋಗವೇನು? ಏನಾದರೂ ಮಾಡಬೇಕಾದರೆ, ನಾವಿಲ್ಲಿ, ಅವರು ಅಲ್ಲಿ ” ಎನ್ನುತ್ತಾ ಮಾಧವಿ ಪಡಶಾಲೆಗೆ ಬಂದಳು.
ಅಲ್ಲಿ ಸೇರಿದ ಎರಡುವರ್ಷಗಳ ನಂತರ ಮಾಧವಿ ತನ್ನ ಬದುಕನ್ನು ಪ್ರವೇಶಿಸಿದಳು. ಕರ್ನೂಲ್ ಟೌನ್ ನಲ್ಲಿ ಹುಟ್ಟಿ ಬೆಳೆದಳು ಅವಳು. ಎಲ್ಲಿಯೋ ನಲ್ಲಮಲ ಗುಡ್ಡಗಳಲ್ಲಿ, ಒಂದು ಚಿಕ್ಕ ಊರಲ್ಲಿ ಇರುವುದಕ್ಕೆ ಅವಳು ಇಷ್ಟಪಡಲಿಲ್ಲ. ಆದರೆ ಅನಿವಾರ್ಯದ ಪರಿಸ್ಥಿತಿಯಲ್ಲಿ ಕಾಲನೀಗೆ ಬಂದ ಅವಳು ಅವಳು ಅಲ್ಲಿನ ವಾತಾವರಣಕ್ಕೆ ಸುಲಭವಾಗಿ ಹೊಂದಿಕೊಂಡಳು. ಆನಂತರ ಮೂವರು ಮಕ್ಕಳು ಅಲ್ಲೇ ಪ್ರಾಜೆಕ್ಟ್ ಹೈಸ್ಕೂಲಿನಲ್ಲಿ ಓದಿದರು. ಇಪ್ಪತ್ತುವರ್ಷಗಳ ಸುದೀರ್ಘ ಅವಧಿಯ ನಂತರ ಅನಂಪೂರ್ ಗೆ ಟ್ರಾನ್ಸಫರ್ ಆಯಿತು.
“ಯಾವುದೂ ಶಾಶ್ವತವಲ್ಲ, ಅಲ್ಲವೇ.. ಯಾಕಿಷ್ಟು ವ್ಯಾಮೋಹ ಆ ಡ್ಯಾಮ್ ಅಂದರೆ? ” ಎಂದು ನಿರ್ಲಿಪ್ತ ಭಾವದಿಂದ ಕೇಳಿದಳು.
ಅವಳನ್ನು ತಡೆಯಲಿಲ್ಲ, ವಾದಿಸಲಿಲ್ಲ. ಏನನ್ನೂ ಮಾತನಾಡದೇ ಕೂತಿದ್ದರಿಂದ ಅವಳಿಗೆ ಬೇಸರವಾಗಿ ಮತ್ತೆ ಬೆಡ್ರೂಮಿಗೆ ಹೋದಳು. ನನಗೆ ಇದ್ದಕ್ಕಿದ್ದಂತೆ ಅಬ್ದುಲ್ ಬಷೀರ್ ಗೆ ಫೋನ್ ಮಾಡಬೇಕೆಂದು ಅನಿಸಿತು. ಅವನು ಸದ್ಯಕ್ಕೆ ಚೀಫ್. ಇಂಜಿನಿಯರ್ ಆಗಿ ಇದ್ದಾನೆ. ಫೋನ್ ಮಾಡಿದ.
“ಪರಿಸ್ಥಿತಿ ತುಂಬಾ ಕ್ರಿಟಿಕಲ್ ಆಗಿ ಇದೆ ಎಂದು, ಬೆಳಗಾದರೇ ಹೊರೆತು ಏನನ್ನೂ ಹೇಳಲು ಸಾಧ್ಯವಿಲ್ಲ ಎಂದು, ಸದ್ಯಕ್ಕೆ ನಮ್ಮ ಕೈಯಲ್ಲಿ ಏನೂಇಲ್ಲವೆಂದು, ತನಗೆ ಹತ್ತುನಿಮಿಷಕ್ಕೊಮ್ಮೆ ಸಿ.ಎಂ. ಕಚೇರಿಯಿಂದ ಕರೆಗಳು ಬರುತ್ತಿವೆ ಎಂದು, ಇವಲ್ಲದೆ ಮಾಧ್ಯಮಗಳು ತನ್ನನ್ನು ಉಸಿರುಗಟ್ಟಿಸುತ್ತಿವೆ ಎಂದು, ನಾಳೆ , ಇಲ್ಲದಿದ್ದರೆ ನಾಡೆದ್ದೋ ಮತ್ತೆ ಬಿಡುವು ಮಾಡಿಕೊಂಡು ಫೋನ್ ಮಾಡುತ್ತೇನೆ” ಎಂದು ಗೌರವ ಪೂರ್ವಕವಾಗಿ ಹೇಳಿ ಫೋನ್ ಕಟ್ ಮಾಡಿದ.
“ಇನ್ನು ಸ್ವಲ್ಪ ಹೊತ್ತಿನಲ್ಲಿ ಡ್ಯಾಮ್ ಪೂರ್ತಿಯಾಗಿ ಮುಳುಗಲಿದೆ. ಮತ್ತು ಈ ಕಾಂಕ್ರೀ ಟ್ ಕಲ್ಲಿನ ಕಟ್ಟಡ, ಈ ಆಧುನಿಕ ದೇವಾಲಯವು ಎಷ್ಟರ ಮಟ್ಟಕ್ಕೆ ಪ್ರಕೃತಿಯ ದಾಳಿಯನ್ನು ತಡೆದುಕೊಳ್ಳುತ್ತದೆ ಎಂಬುದನ್ನು ನೋಡಬೇಕು. ಪ್ರಕೃತಿಯ ನಿಯಮಗಳಿಗೆ ವಿರುದ್ಧವಾಗಿ ನೀರನ್ನು ಸಂಗ್ರಹಿಸಿ, ನೀರಿನ ದಾರಿಯನ್ನು ಬದಿಲಿಸಿ ಮನುಷ್ಯ ಮಾಡಿತ್ತಿರುವ ಈ ಅಪುರೂಪದ ಪ್ರಯೋಗಗಳು ಪ್ರಕೃತಿಯ ನಿಯಮಗಳನ್ನು ಉಲ್ಲಂಘಿಸಿದಂತೆ ಅಥವಾ ಪ್ರಕೃತಿಯನ್ನು ಮನುಷ್ಯನು ಆಕ್ರಮಿಸಿದಂತೆಯೇ? … ಈ ಪ್ರಶ್ನೆಗಳಿಗೆ ಉತ್ತರಗಳು ಸಿಗುತ್ತವೆ.
ಟಿವಿಯಲ್ಲಿ ಯಾಂಕರ್ ಸುಮ್ಮನೆ ಬಡಬಡಾಯಿಸುತ್ತಿದ್ದಾನೆ .ಅವನಿಗೆ ಡ್ಯಾಮ್ ನಿಲ್ಲಬೇಕೆಂದು ಇದೆಯೋ ಅಥವಾ ಕೊಚ್ಚಿಕೊಂಡು ಹೋಗಬೇಕೆಂದಿದಿಯೋ, ಇಲ್ಲವೋ ಅರ್ಥವಾಗುತ್ತಿಲ್ಲ. ಕರೆಕ್ಟ್. ರಿಪೋರ್ಟರ್ಸ್ ಗೆ ಆ ಡ್ಯಾಮ್ ಕೊಚ್ಚಿಕೊಂಡು ಹೋದರೂ ಸುದ್ದಿ, ನಿಂತರೂ ದೊಡ್ಡ ಸುದ್ದಿಯೇ . ಆದರೆ ಅವನಿಗೆ ತಿಳಿಯದ ವಿಷಯ ಆ ಡ್ಯಾಮ್ ಬಾಲಾರಿಷ್ಟದಿಂದ ಆಲ್ರೆಡೀ ಕೆಲವು ಸಲ ಕೊಚ್ಚಿಕೊಂಡು ಹೋಗಿದೆ ಎಂದು, ಈ ವಿಷಯವನ್ನು ಶಿವರಾಮಿರೆಡ್ಡಿ ಯವರೇ ಹೇಳಿದ್ದಾರೆ “.
“ಅರವತ್ತಾರೋ, ಅರವತ್ತೇಳೋ, ನೆನಪಿಲ್ಲ, ನವೆಂಬಾರ್ ನಲ್ಲಿ ಕೆಲಸ ಶುರುಮಾಡಿ ಏಪ್ರಿಯಲ್ ವರೆಗೂ ಮುಂದುವರೆಸೋಣ ಅಂದುಕೊಂಡೆವು. ನಾವು ದೊಡ್ಡ ಸಂಖ್ಯಯಲ್ಲಿ ಕೂಲೀಗಳನ್ನು, ಕಂಟ್ರಾಕ್ಟರ್ ಗಳನ್ನು ನಿಯೋಜಿಸಿದ್ದೇವೆ. ಈಗಾಗಲೇ ಕಾಫ ರ್ ಡ್ಯಾಮ್ ನಿರ್ಮಾಣ ಪೂರ್ಣಗೊಂಡಿದ್ದು, ನೀರನ್ನು ಹರಿಸುವ ಬಲಕಾಲುವೆ ನಿರ್ಮಾಣವೂ ಮುಗಿಸಿದ್ದರಿಂದ ಮಳೆ ಕಾಲವೆಲ್ಲಾ ಸುರಿಯುವ ಮಳೆಯ ನೀರನ್ನೆಲ್ಲ ಬೇರೆಡೆಗೆ ತಿರುಗಿಸಿ ಬೇಸಿನ್ ಖಾಳೀ ಮಾಡಿದೆವು. ಅಗೆಯುವ ಕೆಲಸ ನಡೆಯುತ್ತದೆ. ಮರಳಿನ ಅಭಾವದಿಂದ ಸ್ವಲ್ಪ ತಡವಾದರೂ ಬುನಾದಿ ಅಗೆದ ಮೇಲೆ ಸುಮಾರು ನೂರು ಅಡಿಗಳ ವರೆಗೆ ಕಲ್ಲುಗಳನ್ನುಹಾಕಿ ಕಟ್ಟೆಯನ್ನು ನಿರ್ಮಿಸಿದರು. ಅದೇ ಉತ್ಸಾಹದಿಂದ , ಮತ್ತೆ ಮಳೆ ಬೀಳುವ ಮೊದಲೇ ನಾಲ್ಕು ನೂರು ಅಡಿಗಳು ನಿರ್ಮಾಣ ಮಾಡಬಹುದು. ಸರಿಯಾಗಿ ಆಗಲೇ ಮಹಾ ಮುನಿಗಳ ಯಜ್ಞ-ಯಾಗಗಳನ್ನು ವಿನಾಶ ಮಾಡಲು ರಾಕ್ಷಸರು ಮಡಿಕೆಗಳಿಂದ ನೀರನ್ನು ಹಾಕಿದಂತೆ…ದೊಡ್ಡ ಪ್ರಮಾಣದಲ್ಲಿ ..ರಭಸವಾಗಿ ಹರಿಯುವ ಪ್ರವಾಹ..ಎಲ್ಲೋ ಬೇರೆ ಎಲ್ಲೋ ಸುರಿಯುವ ಮಳೆಯಿಂದ ಮುರಿದಿದ್ದ ಕೆರೆಗಳು, ಹರಿಯುವ ಹಳ್ಳಗಳು, ಆಶಿಸದ, ಊಹಿಸದ ಎಡೆಬಿಡದಮಳೆ….ಆಗಾಗ ಅನ್ನಿಸುತ್ತದೆ – ಮಳೆ ಎಂದೂ ಹರ್ಷವನ್ನು ಕೊಡುತ್ತದೆಂದು ಹೇಳಲಾಗುವುದಿಲ್ಲ ಎಂದು. ಏನಾಗಿದೆ, ಎರಡೇ ಎರಡು ದಿನಗಳಲ್ಲಿ ನೂರು ಅಡಿಗಳ ಕಟ್ಟೆ ಬೇಸ್ ಮಟ್ಟಕ್ಕೆ ಕುಸಿದುಕೊಂಡಿದೆ. ಈಗಾಗಲೇ ಒಂದು ಸಲ ಎಲಿಮೆಂಟರಿ ದಶಯಲ್ಲಿ ಹೀಗಾಯಿತು. ಅಶಗಳು ನಿರಾಶೆ ಯಾಗಿವೆ. ಅಂತ್ಯವಿಲ್ಲದ ಶ್ರಮ ವ್ಯರ್ಥವಾಯಿತು. ಆಗ ತಿಳಿಯಿತು – ಅಲ್ಲಿದ್ದ ಕಲ್ಲಿನ ಸ್ವರೂಪ. ಅದು ಮೇಲೆಕ್ಕೆ ಗಟ್ಟಿಯಾಗಿ ಕಾಣುತ್ತದೆ ಆದರೆ, ಒಳ ಭಾಗ ದಲ್ಲಿ ಸ್ವಲ್ಪ ಟೊಳ್ಳಾಗಿದೆ. ಸೀಮೆಸುಣ್ಣದ ಶೇಕಡಾ ಹೆಚ್ಚು ಇರುತ್ತದೆ. ಇದನ್ನು ತಿಳಿದುಕೊಂಡನಂತರ, ಸಂಪೂರ್ಣ ಕಲ್ಲಿನ ನಿರ್ಮಾಣವು ಒಳ್ಳೆಯದಲ್ಲ ಎಂದು, ಎಂದಾದರೂ ಅಪಾಯಾಕಾರಿಯೇ ಎಂದು ಗ್ರಹಿಸಿ, ತಕ್ಷಣವೇ ಕಾಂಕ್ರೀಟ್ ನಿರ್ಮಾಣನಕ್ಕೆ ಬದಲಿಸಿದರು.
ಆಗಿನ ಅಧಿಕಾರಿಗಳಿಗೆ ಎಷ್ಟು ಮೇಲ್ವಿಚಾರ ಇರುತ್ತದೋ ಅಷ್ಟು ಜವಾಬ್ದಾರಿಯೂ ಇರುತ್ತಿತ್ತು. ಎಪ್ಪತ್ತರ ದಶಕಗಳ ಕೊನೆಗೆ ಬರುವ ಸಮಯಕ್ಕೆ, ಕೆಲಸಗಳನ್ನು ವೇಗಗೊಳಿಸಬೇಕಾಗಿತ್ತು. ಬೆಳಗ್ಗೆ ಆರು ಅಥವಾ ಏಳು ಗಂಟಕ್ಕೆ ಶುರುವಾದ ಕೆಲಸಗಳು ಸಂಜೆಯ ಹೊತ್ತಿಗೆ ಮುಗಿಯುತ್ತಿದ್ದವು. ಆಗಾಗಲೇ ಅವು ತುಂಬಾ ಜಾಸ್ತಿ ಕೆಲಸದ ಗಂಟೆಗಳು. ಅಲ್ಲಿ ಕೆಲಸ ಮಾಡುತ್ತಿರುವ ಯೂನಿಯನ್ ಮುಖಂಡರು ಕೆಲಸದ ಸಮಯನ್ನು ಕಡಿಮೆಗೊಳಿಸುವಂತೆ ಒತ್ತಾಯಿಸಿದರು. ವಾಸ್ತವವಾಗಿ ಎಂಟುಗಂಟೆಗಳ ಕೆಲಸದ ಅವಧಿಯನ್ನು ಜಾರೀ ಗೊಳಿಸಬೇಕೆಂದು ಹಲವು ದಿನಗಳಿಂದ ಕೇಳುತ್ತಿದ್ದಾರೆ. ಆಗಲೇ ಶಿಫ್ಟ್ ಗಳು ಶುರುಮಾಡಿದರು. ಹಾಗಿದ್ದಲ್ಲಿ, ದಿನಕ್ಕೆ 16 ಗಂಟೆಗಳ ಕೆಲಸ ನಡೆಯುತ್ತಿದೆ. ಅದರಿಂದ ಕೆಲಸಗಾರರಿಗೆ ಇದು ಸ್ವಲ್ಪ ಸುಲಭವಾಗುತ್ತದೆ. ಈಗಾಗಲೇ ಜಾರಿಯಲ್ಲಿರುವ ಕೆಲಸದ ಸಮಯದ ಕಾನೂನುಗಳನ್ನು ಜಾರಿ ಮಾಡಿದಂತೆ ಆಗುತ್ತದೆ. ಯೂನಿಯನ್ ಗಳನ್ನು ತೃಪ್ತಿಪಡಿಸುವಂತೆ ತೋರುತ್ತಿದೆ. ಬೆಳಿಗ್ಗೆ ಆರರಿಂದ ಮಧ್ಯಾಹ್ನ ಎರಡು ವರೆಗೂ ಮತ್ತು ಮಧ್ಯಾಹ್ನ ಹನ್ನೆರಡರಿಂದ ರಾತ್ರಿ ಎಂಟರ ವರೆಗೇ ಎಲ್ಲಾ ಶಿಫ್ಟ್ ಗಳ ಕೆಲಸದ ಸಮಯವನ್ನು ನಿರ್ದಾರಿಸಿದರು.
ಆಗ ಕ್ಯಾಂಟೀನ್ ಗಳು ಇಲ್ಲ. ಹೋಟೆಲ್ ಗಳ ಕಲ್ಚರ್ ಇಲ್ಲ. ಬೆಳಗ್ಗೆ ಆರುಗಂಟೆಗೆ ಡ್ಯೂಟಿಗೆ ಬಂದಿರುವವರಿಗೆ ನಡುವೆ ಊಟೆ ಹೇಗೆ? ಮಿಂಚಿನಂಥ ಆಲೋಚನೆಗಳೊಂದಿಗೆ ಮುಂದೆ ಬಂದರು ಯೂನಿಯನ್ ಅವರು. ಕಾಂಟ್ರಾಕ್ಟರ್ ಅವರನ್ನು ಸಂಪರ್ಕಿಸಿ ಹೊಸ ಕೆಲಸಗಳು ಸೃಸ್ಟಿಸಿದರು. ಆ ನೌಕರರು ಪ್ರತಿದಿನ ಕಾರ್ಮಿಕರ ಮನೆಗಳಿಗೆ ಹೋಗಿ ಈಗಾಗಲೇ ಮನೆಯಲ್ಲಿ ಸಿದ್ಧ ಪಡಿಸಿದ ಆಹಾರದ ಕ್ಯಾರಿಯರ್ ಬಾಕ್ಸ್ ಗಳನ್ನು ತಂದು ಕೆಲವು ಗುರುತಿಸಲಾದ ಕೆಲಸದ ಪ್ರದೇಶಗಳಲ್ಲಿ ಆ ಕ್ಯಾರಿಯರ್ಗಳನ್ನು ಸೇರಿಸಲು ವ್ಯವಸ್ಥೆಮಾಡಿದರು. ಮುಂಬೈನಲ್ಲಿ ಡಬ್ಬಾವಾಲಾಗಳು ಅದೇ ಕೆಲಸಮಾಡುತ್ತಾರೆ ಎಂದು ತಿಳಿಯಿತು. ಆದರೆ ಈ ಈಗಾಗಲೇ ಅಂತಹ ವ್ಯವಸ್ಥೆಯನ್ನು ಈ ಪ್ರಾಜೆಕ್ಟ್ ಯಲ್ಲಿ ಮಾಡಲಾಗಿದೆ. ಕಾಮಗಾರಿ ವೇಗವಾಗಿ ನಡೆಯುತ್ತಿದೆ. ಇನ್ನೂ ಹೆಚ್ಚಿನ ಉದ್ಯೋಗಿಗಳ ಅಗತ್ಯವಿದೆ. ವಿಭಾಗಗಳನ್ನು ಬೆಳೆಸಲಾಯಿತು. ಕ್ವಾರ್ಟರ್ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.
ಬಾಯಾರಿಕೆ ಯಾಗಿ ಅಡುಗೆಮನೆಗೆ ಹೋಗಿ ನೀರು ಕುಡಿದು ಬಂದರು. ಬರುವ ಸಮಯಕ್ಕೆ ಫೋನ್ ರಿಂಗಾಯಿತು. ಈ ನಡು ರಾತ್ರಿಯಲ್ಲಿ ಕರೆ ಮಾಡಿದದವರು ಯಾರೆಂದು ನೋಡಿದರೆ ದಕ್ಷಿಣಾಮೂರ್ತಿ. ತನ್ನೊಂದಿಗೆ ಕೆಲಸಮಾಡಿದ ಅಕೌಂಟ್ಸ್ ಅಧಿಕಾರಿ. ಎಲ್ಲೆಲ್ಲೋ ಕೆಲಸಮಾಡಿ ನಿವೃತ್ತರಾದ ಮೇಲೆ ಮೊಬೈಲ್ ನ ಪುಣ್ಯವೆಂಬಂತೆ ಮತ್ತೆ ಆಗಾಗ ಮಾತಾಡುವುದು. ಅವರು ಪುಸ್ತಕಗಳನ್ನು ಚೆನ್ನಾಗಿ ಓದುವವರು. ಅವನು ಇದ್ದಷ್ಟು ದಿನಗಳೂ ಸಾಹಿತ್ಯ ಭಾರತಿ ಕಾರ್ಯಕ್ರಮಗಳಲ್ಲಿ ಪ್ರತಿತಿಂಗಳು ಸಕ್ರಿಯವಾಗಿ ಭಾಗವಹಿಸುತ್ತಿದ್ದನು.
ಸಮಯ ನೋಡಿದೆ- ಮೂರೂವರೆ ಆಗಿತ್ತು.
“ಏನು, ನೀವೂ ಮಲಗಲಿಲ್ಲವೇ?” ಗೋವಿಂದರೆಡ್ಡಿ ಮಾತಾಡಿಸಿದರು.
“ನಿದ್ದೆ ಬರುತ್ತಿದ್ದೆನು ಸರ್?” ಪ್ರಶ್ನೆಗೆ ಪ್ರಶ್ನೆ ಉತ್ತರವಾಗಿ ಬಂತು .
ಹೌದು, ಆಗಲೂ ಹೀಗೇ, ಎಷ್ಟು ವಾರಗಳು ನೈಟ್ ಔಟ್ ಗಳು, ಎಷ್ಟುತಿಂಗಳು ನಿದ್ದೆಯಿಲ್ಲದ ರಾತ್ರಿಗಳು ಕಳೆದವೋ? ಎಲ್ಲಾ ಸರ್ಪೃಜ್ ಗಳೇ, ಎಲ್ಲಾ ಕ್ರೈಸಿಸ್ ಗಳೇ, ಒಂದು ಬಿಕ್ಕಟ್ಟುಬಿಡಿಸುವ ಒಳಗೆ, ಇನ್ನೊಂದುಸಿದ್ಧವಾಗಿದೆ”
“ಟಿವಿಯಲ್ಲಿ ನೋಡುತ್ತಿದ್ದರೆ ಅದೇನೋ ದೊಡ್ಡ ಯುದ್ಧ ಜರುಗುತ್ತಿರುವಂತೆ ಅನ್ನಿಸುತ್ತಿದೆ ಸಾರ್. ನೂರಾರು ಮೆಗಾ ಯೂನಿಟ್ಗಳಷ್ಟು ವಿದ್ಯುತ್ ಉತ್ಪಾದಿಸಬಲ್ಲ ಆಂತರಿಕ ಶಕ್ತಿಯಿಂದ ಪ್ರವಾಹದ ಹರಿವು ಒಂದೆಡೆ, ಸಾವಿರಾರು ಕಾರ್ಮಿಕರ ರಕ್ತ ಮತ್ತು ಮಾಂಸದಿಂದ,ನೂರಾರು ಎಂಜಿನಿಯರ್ಗಳ ಬೌದ್ಧಿಕ ಶ್ರಮದಿಂದ ವರ್ಷದ ಗಟ್ಟಲೆ ನಿರ್ಮಿಸಲಾದ ಡ್ಯಾಮ್ ಇನ್ನೊಂದೆಡೆ ನಿಂತು ಯುದ್ಧ ಮಾಡುತ್ತಿದ್ದಂತೆ ಕಾಣುತ್ತಿದ್ದವು..
“ನಿಮ್ಮ ಹೋಲಿಕೆ ಚೆನ್ನಾಗಿದೆ, ಆದರೆ ಈಯುದ್ಧದಲ್ಲಿ ಯಾರು ಗೆಲ್ಲುತ್ತಾರೆ ಎಂದು ನೀವು ಭಾವಿಸುತ್ತೀರಿ?” ಗೋವಿಂದರೆಡ್ಡಿ ಕೆರಳಿಸುತ್ತಾ ಕೇಳಿದರು.
“ನಿಸ್ಸಂದೇಹವಾಗಿ ಡ್ಯಾಮ್ ಗೆಲ್ಲುತ್ತದೆ. ನೋಡ್ರಿ ಸಾರ್”
“ಹೇಗೆ?”
“ನಾವೆಲ್ಲರೂ ಪ್ರಕೃತಿಯ ಮಕ್ಕಳು ಅಲ್ಲವೇ ಸಾರ್, ಯಾವುದೇ ತಾಯಿಯೂ ಮಕ್ಕಳನ್ನು ಸಾಯಲೂ ಬಿಡುತ್ತದೆಯೋ? ಯಾವುದೇ ಯುದ್ಧದಲ್ಲಿ ಮಗನ ಕೈಯಲ್ಲಿ ಸೋಲಿದರೆ ತಂದೆ ಹೆಮ್ಮೆಯಿಂದ ಬೀಗುವುದಿಲ್ಲವೇ? ಈಗ ಡ್ಯಾಮ್ ನಿಂತರೆ ಪ್ರಕೃತಿ ತನ್ನ ಮಕ್ಕಳ ಉಪಯುಕ್ತತೆಯನ್ನು ನೋಡಿ ಸಂತೋಷಪಡುತ್ತದೆ. ಮಕ್ಕಳು ಗೆಲ್ಲುವುದಕ್ಕಾಗಿ ಪೋಷಕರನ್ನು ಸೋಲಿಸುವುದು ಈ ನೆಲದ ಅಭ್ಯಾಸವೇ! ಅದಕ್ಕಾಗಿಯೇ ನಮ್ಮ ಡ್ಯಾಮ್ ಎಂದಿಗೂ ಸ್ಥಿರವಾಗಿ ಇರುತ್ತದೆಂದು ಎಂದು ನಾನು ದೃಢವಾಗಿನಂಬುತ್ತೇನೆ.
ಇನ್ನೂ ಸ್ವಲ್ಪಹೊತ್ತು ಮಾತಾಡಿದ ದಕ್ಷಿಣಾಮೂರ್ತಿ ಮಾತು ಮುಗಿಸಿದರು.
ಅವನೊಂದಿಗೆ ಮಾತನಾಡಿದ ನಂತರ, ಯಾವುದೋ ಸಾಂತ್ವನೆ ಸಿಕ್ಕಿದಂತೆ ಅನಿಸಿತು. ಅವನ ಮಾತುಗಳು ನದಿಯಲ್ಲಿ ಮುಳುಗಿ ಹೋಗುವವನಿಗೆ ಹುಲ್ಲಿನ ಕಡ್ಡಿ ಸಿಕ್ಕಿದ ಧೈರ್ಯವನ್ನು ನೀಡಿತು. ಶಾಂತವಾದ ಆಲೋಚನೆಗಳೊಂದಿಗೆ,ತಿಳಿಯಾದ ಮನಸ್ಸಿನಿಂದ ಟಿವಿ ನೋಡುತ್ತಾ, ನೋಡುತ್ತಾ ಹಾಗೆ ಸೋಫಾದಲ್ಲಿ ಜಾರಿ ಮಲಗಿದನು ಗೋವಿಂದರೆಡ್ಡಿ.
“ಎಂಟಾಗುತ್ತಾಯಿದೆ, ನೀವು ಏಳುತ್ತೀರಾ?” ಎಂದು ಹೆಂಡತಿಯ ಮಾತು ಕೇಳಿ ದಿಢೀರನೆ ಎದ್ದು ಕುಳಿತುಕೊಂಡ.
ಎದುರಿನ ಟೀವಿಯಲ್ಲಿ ಯಾಂಕರ್ ರ್ಉತ್ಸಾಹದಿಂದ ಏನೋ ಹೇಳುತ್ತಿದ್ದಾನೆ. ಕೆಳಗೆ ಸ್ಕ್ರೋಲಿಂಗ್ ಆಗುತ್ತಿರುವ ಅಕ್ಷರಗಳಲ್ಲಿ-
“ಶ್ರೀಶೈಲಂ ಡ್ಯಾಮ್ ಗೆ ತಪ್ಪಿದ ಅಪಾಯ, ಪ್ರವಾಹ ಇಳಿಮುಖವಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ” ಎಂದು ಸ್ಕ್ರೋಲಿಂಗ್ ನಡೆಯುತ್ತಿದೆ. ಬಗಲಿಗೆ ಒಂದು ಕಡೆ ಡ್ಯಾಮ್ ಬಳಿಯ ದೃಶ್ಯಗಳ ವಿಡಿಯೋ ತೋರಿಸುತ್ತಿದ್ದಾರೆ. ಸದ್ಯಕ್ಕೆ ನೀರಿನ ಡ್ಯಾಮ್ ಗೇಟ್ಗಳ ಮೂಲಕ ನೀರು ರಭಸದಿಂದ ಹೊರಕ್ಕೆ ಧುಮುಕುತ್ತಿದೆ. ಇನ್ ಫ್ಲೋ ಕಡಿಮೆಯಾದಂತೆ ತೋರುತ್ತಿದೆ.
ತುಂಬಾ ಸಮಾಧಾನವಾಯಿತು ಗೋವಿಂದರೆಡ್ಡಿಗೆ. ಭಾರವಾಗಿ ನಿಟ್ಟುಸಿರುಬಿಟ್ಟು ಮೇಲಕ್ಕೆ ಎದ್ದರು.
“ಒಟ್ಟಿನಲ್ಲಿ ಡ್ಯಾಮ್ ಗಟ್ಟಿಯಾಗಿದ್ದುದರಿಂದ, ಚೆನ್ನಾಗಿ ತಡೆದುಕೊಂಡು ನಿಂತಿದೆ” ಎಂದು ಮೆಚ್ಚುಗೆಯಿಂದ ಹೇಳಿದಳು ಮಾಧವಿ.
ಹೌದು, ಇಲ್ಲದಿದ್ದರೆ ಇಪ್ಪತ್ತು ವರ್ಷಗಳ ಶ್ರಮೆ ಮತ್ತುನೂರಾರು ಕೋಟಿ ಹಣ ವ್ಯರ್ಥವಾಗುತ್ತಿತ್ತು. ಅದಕ್ಕಾಗಿ ದುಡಿದ ಕಾರ್ಮಿಕರು ಮತ್ತು ನೌಕರರು ತಮ್ಮಜೀವಮಾನವಿಡೀ ಆ ಪಾಪಪ್ರಜ್ಞೆಯಲ್ಲೇ ಬತುಕ ಬೇಕಾಗಿತ್ತು. ಅಲ್ಲಿ ನಿಂತಿರುವುದು ಡ್ಯಾಮ್ ಗೋಡೆಗಳಷ್ಟೇಅಲ್ಲ ಮಾಧವೀ, ನಮ್ಮ ಗೌರವ ಮತ್ತು ಮರ್ಯಾದೆಯೂ ಇದೆ. ಒಂದು ಸಮಯದಲ್ಲಿ ಅದೇ ನಾದರೂ ಕೊಚ್ಚಿಕೊಂಡು ಹೋಗಿದ್ದರೆ ಈ ಬದುಕಿನ ಅಂತ್ಯದಲ್ಲಿ ಆ ದುರಂತವನ್ನು ಹೊತ್ತುಕೊಂಡು ಬದುಕುವುದೇ ನರಕವಾಗುತ್ತಿತ್ತು. ಅದಕ್ಕೇ ಅದು ಉಳಿಸಲಾಗಿ , ನಮ್ಮಂಥ ಎಷ್ಟೋ ಜನರನ್ನು ಕಾಪಾಡಿದೆ. ಡ್ಯಾಮ್ ತಾನು ನಿಂತು ನಮ್ಮ ಗೌರವ್ವನ್ನು ಕಾಪಾಡಿದೆ” ಎಂದು ಗದ್ಗದಿತ ಕಂಠದಲ್ಲಿ ಮಾತನಾಡುತ್ತಿದ್ದ ಗಂಡನ ಕಣ್ಣಲ್ಲಿ ನೀರಿನ ಛಾಯೆಗಳು ಹೊಳೆಯುತ್ತಾ ಕಾಣಿಸಿದವು ಮಾಧವಿಗೆ.
ಜಿ.ಉಮಾ ಮಹೇಶ್ವರ್ ಅವರ ತೆಲುಗು ಕಥೆ “ಒಂದು ಆಧುನಿಕ ದೇವಾಲಯದ ಕಥೆ”ಕನ್ನಡಾನುವಾದ ರಂಗನಾಥ ರಾಮಚಂದ್ರ ರಾವು





