ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಜಯದೇವಿ ತಾಯಿ ಲಿಗಾಡೆಯವರುತಮ್ಮ ಹದಿನಾರನೆ ವಯಸಿನಲ್ಲಿ

೧೯೨೪ರ ಕಾಲ‌…. ಬೆಳಗಾವಿ ಅಧಿವೇಶನದಲ್ಲಿ ಗಾಂಧೀಜಿ ಚಿಂತನೆಗಳಿಂದ ಪ್ರೇರಣೆಗೊಂಡ ತಾಯಿ ಸಂಗವ್ವ ಮತ್ತು ತಂದೆ ಚನ್ನಬಸಪ್ಪನವರು ಖಾದಿ ತೊಡುವ ಹಾಗೂ ಖಾಧಿ ನೂಲುವ ಪ್ರಚಾರದಲ್ಲಿ ತೊಡಗಿಕೊಂಡರು .  ದೇಶವು ಸ್ವಾತಂತ್ರಗೊಳ್ಳ ಬೇಕಾದರೆ ಜನರು ಸ್ವಾವಲಂಬನೆಯ ಜೀವನ ನಡೆಸುವುದು ಬಹಳ ಮುಖ್ಯವಾಗಿತ್ತು. ಬ್ರಿಟಿಷರ ದಾಶ್ಯತ್ವದಿಂದ ದೇಶವು ಮುಕ್ತಗೊಳ್ಳಬೇಕಾದರೆ ಪ್ರತಿಯೊಬ್ಬರು ಸ್ವಾವಲಂಬಿಗಳು ಆಗಲೇ ಬೇಕು ಅನ್ನುವ ಕರೆಯನ್ನು ಗಾಂಧಿಜಿಯವರು ಕೊಟ್ಟಿದ್ದರು.

ಪರಕೀಯರು ನಮ್ಮ ದೇಶವನ್ನು ಆಕ್ರಮಿಸಿ ಕುಳಿತಿರುವ ಸತ್ಯ ಅರೆತಿದ್ದ ಮುಗ್ಧ ಜಯದೇವಿ ತಾಯಿಯವರು ನೂರಾರು ಪ್ರಶ್ನೆಗಳನ್ನು ತಂದೆ ತಾಯಿಗೆ ಕೇಳುತ್ತಿದ್ದರು.
  ಕೆಂಪು ಮೂತಿಯ ಜನ ಎಲ್ಲಿಂದ ಬಂದರು? ಇಲ್ಲಿಗೆ ಯಾಕೆ ಬಂದರು?? ಅವರು ಏಕೆ ಇಷ್ಟು ದರ್ಪದಿಂದ ನಡೆದುಕೊಳ್ಳುವರು?? ಅಂತೆಲ್ಲಾ  ಪ್ರಶ್ನೆಗಳು  ಉದ್ಭವಿಸುತ್ತಿದ್ದವು.ತಾಯಿ ತಂದೆಯೊಂದಿಗೆ ಗಂಭೀರವಾಗಿ ಚರ್ಚಿಸುತ್ತಿದ್ದ ದಿನಗಳನ್ನು ನೆನೆಯುತ್ತಿದ್ದರು ತಾಯಿಯವರು.
ಗಾಂಧೀಜಿಯವರ ಸತ್ಯ ಅಹಿಂಸೆಯ ಕಥೆಗಳನ್ನು ಗಾಂಧಿ ಬೋಧಿಸುತ್ತಿದ್ದ ಬೋಧನೆಯಗಳನ್ನು…..ಸಂಗವ್ವನವರು  ತಮ್ಮ ಸಂಸ್ಥೆಗಳ ಮೂಲಕ ಗಾಂಧೀ ಚಿಂತನೆಯ ಪ್ರಚಾರದ ಕಾರ್ಯವನ್ನು ವಹಿಸಿಕೊಂಡಿದ್ದರು. ಇದನ್ನೆಲ್ಲಾ ನೋಡುತ್ತಾ ಕೇಳುತ್ತಾ ಬೆಳೆದ ಜಯದೇವಿತಾಯಿಯವರ ಮೇಲೆ ಗಾಂಧೀಜಿಯವರ ಗಾಢ ಪ್ರಭಾವ ಬೀರಲಾರಂಭಿಸಿತ್ತು….
ಜಯದೇವಿತಾಯಿಯವರು ಬರಿತಾರೆ …

“ಬುದ್ಧ ಬಸವನಾಗಿ | ಬಸವ ಗಾಂಧಿಯಾಗಿ
ತಿದ್ಯಾರ ಆಗಾಗ ಆಚಾರ -ಲೋಕದ
ಶುದ್ಧ ಬೀಜವ ಬಿತ್ಯಾರ  ||

ಸಂಗವ್ವನವರು  ದೇಶ ಪ್ರೇಮದೊಂದಿಗೆ ಜನರನ್ನು  ಸ್ವಾವಲಂಬ ಗೊಳಿಸುವುದು ‌,ವಿದೇಶಿ ವಸ್ತುಗಳಿಗೆ ಬಹಿಷ್ಕರಿಸುವುದು, ಸತ್ಯ-ಅಹಿಂಸೆಯ ಪಾಲನೆ ಮಾಡುವ  ತಾಯಿಯ ಬಗ್ಗೆ ಅಪಾರ ಅಭಿಮಾನ ಇಟ್ಟಿದ್ದರು ಜಯದೇವಿತಾಯಿಯವರು…
ತಾಯಿಯ ಬಗ್ಗೆ ಹೀಗೆ ಬರಿತಾರೆ…

“ಮನೆಗಾಗಿ ಮರಗಲಿಲ್ಲ| ಮಕ್ಕಳಿಗಾಗಿ ಕೊರಗಲಿಲ್ಲ
 ಭಾರತಾಂಬೆಯ ಮಗಳು ಕನ್ನಡ- ನುಡಿಗಾಗಿ  ಸಂಗಮ್ಮ ಸೊನ್ನಲಗೀಲಿ ದುಡಿದೀ  ನನ್ನ ಹೆತ್ತವ್ವ ||”
(ತಾಯಿಯ ಪದಗಳು)

  ತಾಯಿಯವರು ಬಾಲ್ಯದಿಂದಲೂ ಗಾಂಧಿಯ ಸತ್ಯ ಅಹಿಂಸೆಯ ಪಾಠವನ್ನು ಕಲಿಯುತ್ತ ಗಾಂಧೀಜಿಯವರ ಆಚಾರ ವಿಚಾರಗಳಂತೆ ಸರಳ- ಸದಾಚಾರ- ಸದ್ಗುಣಿಗಳಾಗಿ ಬೆಳೆಯ‌ತೊಡಗಿದರು.

ಅವರಿಗೆ ಚಿಕ್ಕ ವಯಸ್ಸಿನಲ್ಲಿನೇ ಖಾಧಿ ತೊಡಬೇಕು ಅನ್ನುವ ಆಸೆ ಬಹಳಷ್ಟು ಹುಟ್ಟಿತ್ತು…… ಸಾಮಾಜಿಕ ಕಳಕಳಿ, ದೇಶದ ಚಿಂತನೆ …ನಿರಂತರ ಬ್ರಿಟಿಷರ ವಿರುದ್ಧದ ಹೋರಾಟಗಳು ಎಳಿಯ ಮನಸ್ಸಿನ ಮೇಲೆ ಪ್ರಭಾವ ಬೀರುತ್ತಿತ್ತು….||

ಅನಿಬೆಸೆಂಟ್ ‘ಹೋಂ ರೂಲ್’ ಚಳುವಳಿಯು ದೇಶದಾದ್ಯಂತ ಹಬ್ಬಿಕೊಂಡಿತ್ತು . ಎಲ್ಲಂದರಲ್ಲಿ ಅಸಹಕಾರ ಚಳುವಳಿ ತಲೆಯೆತ್ತಿತ್ತು. 1926ರ ಚುನಾವಣೆಯಲ್ಲಿ ಸ್ವರಾಜ್ ಪಕ್ಷದ ಶಕ್ತಿ ಕುಗಿದಾಗ ಗಾಂಧೀಜಿ ಪ್ರತ್ಯಕ್ಷ ವಿದಾಯಕ ಕಾರ್ಯಗಳ ಪ್ರಯೋಗವನ್ನು ಸಾಬರಮತಿ ತೀರದಲ್ಲಿ ನಡೆಸಿದರು.

 ಇದೇ ಸಮಯದಲ್ಲಿ ಜಯದೇವಿ ತಾಯಿಯವರು ವಿವಾಹ ಬಂಧನಕ್ಕೆ ಒಳಪಟ್ಟರು.

೧೯೨೬ ದರ ಸಮಯ…… ಹೆಣ್ಣುಮಗಳು ಹುಟ್ಟಿದರೆ ಅವಳ ಮದುವೆ ಒಂದೇ ಮುಖ್ಯ ವಿಷಯವಾಗಿರುತ್ತಿತ್ತು. ಮನೆತನ ಹುಡುಕುವ ಕೆಲಸ..ಮದುವೆ ಮಾಡುವ ಜವಾಬ್ದಾರಿ ದೊಡ್ಡದಾಗಿತ್ತು ಆಗಿನ ಕಾಲದಲ್ಲಿ….

14 ವರ್ಷದ ಬಾಲಕಿ ಜಯದೇವಿಯ ಮದುವೆಯ ವಿಚಾರವನ್ನು ಹಿರಿಯರು ಮಾಡಲಾರಂಬಿಸಿದರು.

 ಜಯದೇವಿತಾಯಿಯವರು ತೆಳ್ಳನೆಯ ದೇಹ, ಬೆಳ್ಳನೆಯ ಮೈಕಾಂತಿ , ಹೊಳೆ ಹೊಳೆವ ಕೇಶರಾಶಿಯು,ಹಸಿರು ಮಿಶ್ರಿತ ಹೊಳೆಯುವ ಕಣ್ಣುಗಳಲ್ಲಿ ಪಾವಿತ್ರ್ಯತೆ, ನಿರಾಳತೆ, ಸಾದ್ವಿತನ ಮೈಗೂಡಿಸಿಕೊಂಡಿತ್ತು.
ಹದಿನಾಲ್ಕರ ಎಳೆ ಬಾಲಕಿಯಾದರೂ ವಯಸ್ಸಿಗಿಂತಲೂ  ಪಕ್ವತೆಯ ದೀಪ ಹೊತ್ತ ಸಾಧ್ವಿಮಣಿ.ಮುಖದಲ್ಲಿ ಮಗುವಿನಂಥ ನಿಷ್ಕಳಂಕತೆ  ಮಾಸದೆ ಉಳಿದಿತ್ತು; ಕಣ್ಣುಗಳಲ್ಲಿ ಮೌನವಾಗಿ ಮಾತನಾಡುವ ಜ್ಞಾನ, ನೋಡಿದವರ ಹೃದಯವನ್ನೇ ಮೃದುಗೊಳಿಸುವಷ್ಟು ಪ್ರಫುಲ್ಲವಾದ ಕಳೆ, ಗರ್ವಿಲ್ಲ ತಲೆಯ ಮೇಲೆ ಸರಳವಾಗಿ ಕಟ್ಟಿದ ಕೂದಲು, ಮನೆಯಲ್ಲಿ ಸಾಕಷ್ಟು ಆಭರಣಗಳ ಭಂಡಾರವೇ ಇದ್ದರೂ ಅವರು ಬಂಗಾರ ತೊಡಲು ಇಷ್ಟಪಡುತ್ತಿರಲಿಲ್ಲ….. ಆಭರಣಗಳಿಲ್ಲದ ದೇಹ, ನಡೆ-ನಿಲುವಿನಲ್ಲಿ ಒಂದು ದಿವ್ಯ ಶಿಸ್ತಿನ ಛಾಯೆ.
ಸೌಂದರ್ಯದ ಖಣಿ ….ನೋಡಿದವರು ಮನಸೋಲುವಂಥ ಸೌಂದರ್ಯ.

ಜಯದೇವಿ ತಾಯಿಯವರು ಹೇಳಿದಂತೆ….
 ಆಡುವ ವಯಸ್ಸಿನಲ್ಲಿ ಅವರ ಮದುವೆ ಮಾಡಲಾಗಿತ್ತು  .
ಆಡುವ ಕೂಸಿನ ಕೈಯಲ್ಲಿ
 ಕಾಡುವ ಕೂಸನ ಕೊಟ್ಟರು
” ಅಂತ ಹೇಳಿದರು.

1926 ಒಂದು ಒಳ್ಳೆಯ ದಿನವ ನೋಡಿ ಮನೆಯ ಸಮೀಪದಲ್ಲಿ ವಾಸವಾಗಿದ್ದ ಲಿಗಾಡೆ ಮನೆತನದ ೧೬ ವಯಸ್ಸಿನ ‘ಚೆನ್ನಮಲ್ಲಪ್ಪ ಲಿಗಾಡೆ ‘ಅವರೊಂದಿಗೆ ನೆರವೇರಿಸಲಾಯಿತು. ಅತ್ಯಂತ ಆಗರ್ಭ ಶ್ರೀಮಂತರು ಸೊಲ್ಲಾಪುರದ ಪ್ರತಿಷ್ಠಿತ ಮನೆತನಗಳಲ್ಲಿ ಒಂದಾದ “ಲಿಗಾಡೆ” ಮನೆತನ.ದೊಡ್ಡ  ಜಮೀನದಾರು ಮೂರು ಸಾವಿರ ಎಕ್ರೆ ಜಮೀನು, ಮನೆಮಾರು,ಅಂಗಡಿಗಳು ಹೊಲಗದ್ದೆ ದನ ಕರಗಳ ಒಡೆಯರು. ಶ್ರೀಮಂತಿಕೆ ಹೆಚ್ಚಿದಂತೆಲ್ಲಾ ಬಡ್ಡಿಯ ವ್ಯವಹಾರವು ಭರಾಟೆಯಲ್ಲಿ ನಡೆದಿತ್ತು.

 ಮೈನಾಬಾಯಿ ಮತ್ತು ಚೆನ್ನಮಲ್ಲಪ್ಪ ಲಿಗಾಡೆ ಈ ದಂಪತಿಗಳಿಗೆ ಮಲ್ಲಿಕಾರ್ಜುನ, ನಾಗಪ್ಪ ಅಡಿವೆಪ್ಪ,ಮೂರು ಜನ ಗಂಡು ಮಕ್ಕಳು ಒಬ್ಬಳು ಹೆಣ್ಣು ಮಗಳು ಇದ್ದಳು.  ಇವರಲ್ಲಿ ಮಲ್ಲಿಕಾರ್ಜುನಪ್ಪನಿಗೆ ಆರು ಜನ ಹೆಂಡತಿ ಮೊದಲ ಹೆಂಡತಿಯಿಂದ ಗುರುಶಾಂತವ್ವ ,ಸರಸ್ವತಿ ಎನ್ನುವ ಹೆಣ್ಣು ಮಕ್ಕಳು ನಂತರ 5ನೇ ಹೆಂಡತಿ’ ಸಿದ್ದವ’ನಿಂದ ಚನ್ಮಮಲ್ಲಪ್ಪ -ಜಗದೇವಪ್ಪ ಎಂಬ ಇಬ್ಬರು ಗಂಡು ಮಕ್ಕಳು ಜನಸ್ತಾರೆ .
ಇಲ್ಲಿ ನಾಗಪ್ಪ ಮತ್ತು ‘ಪ್ರಯಾಗಬಾಯಿ’ ದಂಪತಿಗಳಿಗೆ ಮಕ್ಕಳು ಆಗಲಿಲ್ಲ ಅತ್ಯಂತ ದೊಡ್ಡ ಜಮೀನುವನ್ನು ಪಡೆದುಕೊಂಡ ಈ ಮನೆತನದಲ್ಲಿ ಕೇವಲ ಇಬ್ಬರು ಗಂಡು ಮಕ್ಕಳು ಹುಟ್ಟಿದರು ಮಲ್ಲಿಕಾರ್ಜುನಪ್ಪ ನಾಗಪ್ಪ ಸೋದರರು ಬೇಗನೆ ತೀರಿಕೊಂಡರು .ನಂತರ ಇಡೀ ಜವಾಬ್ದಾರಿ ಪ್ರಯೋಗ ಬಾಯಿಯ ಹೆಗಲ ಮೇಲೆ ಬಿತ್ತು. ಹೀಗಾಗಿ ಇವರು ಚನ್ನಮಲ್ಲಪ್ಪನವರನ್ನು ಅಂದರೆ ಜಯದೇವಿ ತಾಯಿಯವರ ಗಂಡನಿಗೆ ಎಲ್ಲ ಆಸ್ತಿಯನ್ನು ಕೊಡಮಾಡಿದರು. ಚೆನ್ನಮಲ್ಲಪ್ಪನವರ ಆಸ್ತಿಯು ಬೇಜಾನ್ ಇತ್ತು ಎರಡು ಸೇರಿ ಸಂಪತ್ತಿನ ಉಪ್ಪರಿಗೆಏರಿತ್ತು.

ಚನ್ನಮಲ್ಲಪ್ಪನವರು ಇನ್ನೂ ಅಲ್ಪವಯಸ್ಕಾರರಾಗಿದ್ದರಿಂದ ಬ್ರಿಟಿಷರು ಆಸ್ತಿಯನ್ನೆಲ್ಲ  ಇವರು ವಯಸ್ಕರ ಆಗುವವರೆಗೂ ತಮ್ಮ ಅಧೀನದಲ್ಲಿ ತೆಗೆದುಕೊಂಡರು .

ಇಂಥ ಆಗರ್ಭ ಶ್ರೀಮಂತರ ಮನೆಗೆ ಜಯದೇವಿ ತಾಯಿಯವರು ಮದುಮಗಳಾಗಿ ಹಿರಿಯ ಸೊಸೆಯಾಗಿ ಮನೆಯಲ್ಲಿ ಕಾಲಿಟ್ಟರು.

ಮಡಕಿ ಮತ್ತು  ಲಿಗಾಡೆ ಮನೆತನಕ್ಕೆ ಸೇರಿದ ಮದುವೆ ಅಂದರೆ ಕೇಳಬೇಕೆ….!!ಸಿರಿವಂತರ ಮದುವೆಯು ಒಂದು ತಿಂಗಳ ಕಾಲ  ವಿವಿಧವಾದ ಕಾರ್ಯಕ್ರಮಗಳು ನಡೆದರ  ವರ್ಣನೆ ಮಾಡುತ್ತಿದ್ದರು ತಾಯಿಯವರು.

ಆಗಿನ ಕಾಲದಲ್ಲಿ ಸುರುಗೆ ಕಟ್ಟುವ ಪದ್ಧತಿ ಅಂದರೆ ಅಲ್ಲಿ ತಿನಿಸುಗಳ ಸಾಮಗ್ರಿಗಳಿಂದ ಹಿಡಿದು ವೈವಿಧ್ಯಮಯವಾದ ಪದಾರ್ಥಗಳ ಅಲಂಕಾರ  ಬೆಳ್ಳಿ ಬಂಗಾರ ವೈಢೂರ್ಯಗಳ ಆಭರಣಗಳ ಪ್ರದರ್ಶನ ಕೂಡ ಮಾಡಲಾಗುತ್ತಿತ್ತು….. ಅಂದರೆ ಹೆಣ್ಣಿನ ಕಡೆಯುವರು ಗಂಡಿನ ಕಡೆಯವರಿಗೆ ಕೊಡುವ ಉಡುಗೊರೆ ಇಡಲಾಗುತ್ತಿತ್ತು .ಅದನ್ನು ಜನರಿಗೆ ತೋರಿಸುವಂತೆ ಹೊಂದಿಸಿ ಸುಂದರವಾಗಿಸಿ ನೋಡಲು ಇಡುತ್ತಿದ್ದರು.
 ಒಂದು ಸುರಗಿಯ ಮಂಟಪವನ್ನು ಕಟ್ಟಬೇಕಾದರೆ ಅದು ಸುಲಭದ ಕಲಿಸವೇನು ಆಗಿರಲಿಲ್ಲ ಆದರೆ ಮಡಿಕೆ ಮನೆತನದವರು ಐದು ಸುರಗಿಯನ್ನು ಕೊಟ್ಟರು.ಮಡಕಿ ಮನೆತನದ ಹಿರಿಯ ಮಗಳ ಮದುವೆ ಅಲ್ಲವೇ ಅವರು ಐದು ಸುರಿಗೆಯ ಪ್ರದರ್ಶನವನ್ನು ಕಟ್ಟಿದ್ದರಂತೆ ಇದನ್ನೆಲ್ಲ ನೋಡಿದ ಅತ್ತೆ ಮನೆಯವರು ಹಿರಿಹಿರಿ ಹೀಗಿದ್ದರೂ ಅಂತ ತಾಯಿಯವರು ಹೇಳುತ್ತಿದ್ದರು.

ಮದುವೆಯು ಬಹಳ ವಿಜೃಂಭಣೆಯಿಂದ ನಡೆಯಿತು. ಬಾಲ್ಯವಿವಾಹವು ಸಮಾಜದಲ್ಲಿ ಒಳ್ಳೆಯ ಪದ್ಧತಿ ಅಲ್ಲ ಎಂಬ ಅರಿವಿನ ಸ್ವರವು ತಿಳಿಯದಾದ ಕಾಲ ಅದಕ್ಕೆ ಇತ್ತು…….!!
ಹೂವು ಇನ್ನೂ ಸಂಪೂರ್ಣವಾಗಿ ಅರಳದೇ ಇರುವ ಹೊತ್ತಿನಲ್ಲಿ ಅದರ ಸುವಾಸನೆಯನ್ನು ಕಿತ್ತುಕೊಂಡಂತೆಯೇ……ಕೇವಲ ಹದಿನಾಲ್ಕು ವಯಸ್ಸಿನ ಮುಗ್ಧ ಬಾಲಕಿಯ ಮದುವೆ ಹದಿನಾರು ವರ್ಷದ ಯುವಕನೊಂದಿಗೆ ಭರ್ಜರಿಯಾಗಿ ನೆರವೇರಿತು.

ತರಿಳು ತೋರಣಗಳ ಮಂಟಪಗಳು,ಬಣ್ಣ ಬಣ್ಣದ ಹೂಮಾಲೆಗಳ ಅಲಂಕಾರದಲ್ಲಿ ಮಿಂಚುತ್ತಿತ್ತು; ನಾದಸ್ವರದ ಮಧುರ ಧ್ವನಿಯ ಗಾಯಕರ ಗೀತೆಗಳು ಗಾಳಿಯಲ್ಲಿ ಹರಡಿಕೊಂಡಿದ್ದವು. ಆತಿಥ್ಯದಲ್ಲಿ, ಊಟ ತಿಂಡಿ ತಿನಿಸುಗಳಲ್ಲಿ, ಉಡುಗೊರೆಗಳಲ್ಲಿ ಯಾವುದೇ ಕೊರತೆಯಿರಲಿಲ್ಲ. ಎಲ್ಲರ ಮುಖದಲ್ಲೂ ಹರ್ಷದ ಹೊಳಪು ಕಾಣಿಸುತ್ತಿತ್ತು.

ಆದರೆ ಮಂಟಪದ ಮಧ್ಯದಲ್ಲಿ ಕುಳಿತಿದ್ದ ಜಯದೇವಿ  ಬಾಲಕಿಯ ಕಣ್ಣಲ್ಲಿ ಇನ್ನೂ ಆಟದ ಮೈದಾನದ ಕನಸುಗಳು ಮಿಂಚುತ್ತಿದವು. ಮದುವೆಯ ರಂಗಿನ ಮಧ್ಯೆ ಆಕೆಯ ಮನಸ್ಸು ಇನ್ನೂ ಗೊಂಬೆಗಳ ಲೋಕದಲ್ಲೇ ತೇಲುತ್ತಿದ್ದಂತಿತ್ತು. 9 ವಾರಿ ಸೀರೆಯೊಳಗೆ ಮುಚ್ಚಿದ ಅವರ ಬಾಲ್ಯ, ಮುಜುಗರದ ನಗು, ಮತ್ತು ಅರ್ಥವಾಗದ ಸಂಭ್ರಮ.

ಮದುವೆಯ ವೈಭವವು ಕಣ್ಣು ತುಂಬಿಸಿದರೂ, ಬಾಲ್ಯದ ಮೃದುವಾದ ಹಕ್ಕುಗಳು ನಿಧಾನವಾಗಿ ದೂರವಾಗುತ್ತಿರುವ ಅನುಭವವು ಆ ವಾತಾವರಣದಲ್ಲಿ  ನಿಶ್ಶಬ್ದವಾಗುತ್ತಿರುವದ ಭಾಸವು ಜಯದೇವಿ ತಾಯಿಗೆ ಆಗತೊಡಗಿತ್ತು.

ಬೆಳಕುಗಳ ನಡುವೆ ಒಂದು ಮೃದು ನೆರಳು ಇದ್ದಂತೆ — ಸಂಭ್ರಮದೊಳಗೆ ಚಿಕ್ಕದಾದ ಅಜ್ಞಾತ ವಿಷಾದವೂ ಮೇಳೈಸಿದ ಕ್ಷಣವಾಗಿತ್ತು…….!!!
 ಆತಂಕ ಮುಜುಗರದೊಂದಿಗೆ ಗಂಡನ ಮನೆಯ ಪ್ರವೇಶಿಸಿದರು .ಅಂಗಿ ಲಂಗವನ್ನು ತೊಟ್ಟು ಓಡಾಡುವ ಬಾಲಕಿ ಈಗ ಒಂಬತ್ತು ವಾರಿಯ ಸೀರೆಯ ತೊಟ್ಟು ಮೈತುಂಬ ಒಡವೆಗಳನ್ನು ಧರಿಸುವುದು ಬಲು ಭಾರವಾಗಿತ್ತು ಜಯದೇವಿ ತಾಯಿಯವರಿಗೆ.
ಒಂದು ವಿಚಿತ್ರವಾದ ಬಂಧನಕ್ಕೆ ಒಳಗಾದಂತೆ ಅನಿಸುತ್ತಿತ್ತು….. ಅನ್ನುತ್ತಿದ್ದರು ಜಯದೇವಿ ತಾಯಿಯವರು .
ಅವುಗಳನ್ನೆಲ್ಲ ಕಳಿಚಿ ತನ್ನ ಮನೆಗೆ ಓಡಿ ಹೋಗಬೇಕೆನ್ನುವಷ್ಟು ಹಿಂಸೆ ಯಾಗುತ್ತಿತ್ತು…. ಏಕೆಂದರೆ ತಾಯಿಯ ಮನೆಯಲ್ಲಿ ಅತ್ಯಂತ  ಮುಕ್ತವಾದ ವಾತಾವರಣದಲ್ಲಿ ಬೆಳೆದವರು  ಹೊಲಗಳಲ್ಲಿ ಗಿಡಮರಗಳಲ್ಲಿ ಆಟ ಆಡಿದವರು,ಮನೆಯ ಅಂಗಳದಲ್ಲಿ ಓಡಾಡಿದವರು ,ತಾಯಿಯೊಂದಿಗೆ ಸಭೆ ಸಮಾರಂಭಗಳಂತೆ  ತಿರುಗಾಡಿದವರು.ಆದರೆ ಈಗ ಕೇವಲ ಒಂದು ಪ್ರದರ್ಶನದ ವಸ್ತು ಮೈತುಂಬ ಆಭರಣವನ್ನು ಹಾಕಿಕೊಂಡು ರೇಶಿಮೆಯ ಸೀರೆಯ ತೊಟ್ಟು ಕೆಳಮುಖವಾಗಿ ಅತ್ತಿಯಂದಿರ ಮಾತು ಕೇಳುವುದು ಬಲು ಕಠಿಣದ ಕೆಲಸ ಅನ್ನಿಸಿತು.

ಹೀಗಾಗಿ ತಾಯಿಯವರು ಬಾಲ್ಯ ವಿವಾಹವನ್ನು ಕಠೋರವಾಗಿ ವಿರೋಧಿಸುತ್ತಿದ್ದರು. ಅದೆಷ್ಟೋ ಬಾಲ್ಯ ವಿವಾಹಗಳನ್ನು ಅವರು ತಡೆಗಟ್ಟಿದರು ಕೂಡ||

ಜಯದೇವಿ ತಾಯಿ ಅವರ ಅತ್ತೆ ‘ಸಿದ್ದವ್ವರು ಏನೋ ಒಳ್ಳೆಯ ಮನುಷ್ಯಳೆ ‌…ಶಾಂತವಾದ ಸ್ವಭಾವ. ಆದರೆ ತನ್ನ ಆಸ್ತಿಯನ್ನು ಎಲ್ಲಾ ಕೊಟ್ಟ ಪ್ರಯಾಗಬಾಯಿಯು ಸಿಹಿಣಿಯಂತೆ ಗರ್ಜಿಸುವಳು ಆಗಿದ್ದರು…
” ಪ್ರಯಾಗಬಾಯಿ”( ಜಯದೇವಿ ತಾಯಿಯವರ ಎರಡನೆ ಅತ್ತೆ)  ಇವರು ಲಿಂಗ ಪೂಜಾ ನಿಷ್ಠರಾಗಿದ್ದರು. ಮಠಾಧಿಪತಿಗಳಿಂದ ದೀಕ್ಷೆಯನ್ನು ಪಡೆದುಕೊಂಡು ದೀರ್ಘ ಲಿಂಗ ಪೂಜೆಯ ವ್ಯವಸ್ಥೆ ಮಾಡಿಕೊಂಡಿದ್ದರು.ಲಿಂಗಯ್ಯನಿಗೆ ಛತ್ರಿ ಚಾಮರದಿಂದ ಹಿಡಿದು ಎಲ್ಲ ಪೂಜೆಯ ಸಾಮಾನುಗಳು ಬೆಳ್ಳಿಯ ಸಾಮಗ್ರಿಗಳಿದ್ದವು. ಲಿಂಗಯ್ಯನ ಪೂಜೆಯು ಶೋಡಶೋಪಚಾರದ ಪೂಜೆ ಅವರದಾಗಿರುತಿತ್ತು. ಪೂಜಾ ನಿಷ್ಠರು ಪ್ರಸಾದಿಕರು ಆಗಿದ್ದರು.

 ಇವರ ಇನ್ನೊಂದು ವಿಶೇಷವೆಂದರೆ ಇವರು ಧೈರ್ಯವಂತರು ,ಸ್ವಾಭಿಮಾನಿಗಳು ,ನಿಷ್ಟೂರ ಸ್ವಭಾವದವರು ,ಅನ್ಯಾಯ ಕಂಡರೆ ಮುಲಾಜು ಇಲ್ಲದೆ ಅದನ್ನು ವಿರೋಧಿಸುವರು ಇವರು ಯಾರಿಗೂ ಹೆದರಿರಲಿಲ್ಲ ತಮ್ಮ ಆಸ್ತಿಯನ್ನು ನೋಡಿಕೊಳ್ಳಲು ‘ರಾಹು ಸಾಹೇಬ್ ರಾಜವಾಡೆ’ಎನ್ನುವ ಧೀರ- ಧೀಮಂತ ದೇಶಭಕ್ತ ಸ್ವಾತಂತ್ರದ ಹೋರಾಟದಲ್ಲಿ ಮುಂಚೂಣಿಯಲ್ಲಿ ಇದ್ದವರು. ಯಾವ ಬ್ರಿಟಿಷರಿಗೂ ಹೆದರದೆ ರಾಜವಾಡಿಯವರನ್ನೇ ತಮ್ಮ ವಕೀಲರನ್ನಾಗಿ ಮಾಡಿಕೊಂಡಿದ್ದರು.

ಹುತಾತ್ಮ ಮಲ್ಲಪ್ಪ ಧನಶೆಟ್ಟಿ , ಕುರಬ್ರಾನ್ ಹುಸೇನ್ ಸಾಬ್ ,ಜಗನ್ನಾಥ್ ಸಿಂಧೆ ಮತ್ತು ನಾರಡಾ ಇವರುಗಳ ಜೊತೆಯಲ್ಲಿ ಬ್ರಿಟಿಷರ ವಿರುದ್ಧ ಹೋರಾಡಿದವರು .
ರಾಜವಾಡೆಯವರನ್ನು ಬ್ರಿಟಿಷರು ಬಂಧನಕ್ಕೆ ಒಳಪಡಿಸಿದ್ದರು. ಆ ಸಮಯದಲ್ಲಿ ರಾಜವಾಡೆಯ ಕುಟುಂಬದವರ ದೇಖರೇಖಿ ಪ್ರಯಾಗಬಾಯಿಯವರು ಸ್ವಂತ ವಹಿಸಿಕೊಂಡು ದೇಶ ಪ್ರೇಮವನ್ನು ಮೆರೆದಿದ್ದರು.

ರಾಜವಾಡೆಯವರು “ಗಾಂಧಿ- ಐರ್ವೀನ್” ಒಪ್ಪಂದದಂತೆ ಎಲ್ಲ ರಾಜಕೀಯ ವ್ಯಕ್ತಿಗಳನ್ನು ಬಿಡುಗಡೆ ಮಾಡಿದರು .ಆದರೆ ರಾಜವಾಡೆಯವರನ್ನು ಬಿಡುಗಡೆ ಮಾಡಲಿಲ್ಲ ,ಆಗ ಗಾಂಧೀಜಿಯವರು ರಾಜವಾಡೆಯವರನ್ನು ಬಿಡುಗಡೆ ಮಾಡದಿದ್ದರೆ ಒಪ್ಪಂದವೇ ರದ್ದು ಮಾಡಲಾಗುವುದೆಂದು ಗವರ್ನರ್ ಗೆ ಸ್ವಂತ ತಿಳಿಸಿದಾಗ ಬ್ರಿಟಿಷರು ಅನಿವಾರ್ಯವಾಗಿ ರಾಜವಾಡಿಯವರನ್ನು ಮುಕ್ತ ಪಡಿಸಿದರು .
ಭಾಷಿಕರ, ಗೋಗಟೆ ,ಸುಖದೇವ್ ಮತ್ತು ಸಾವರ್ಕರ್ ರ ಗುಂಪಿಗೆ ಸೇರಿದವರಾಗಿದ್ದರು ರಾಜವಾಡೆಯವರು.  ಇಂಗ್ಲೀಷರ ವಿರೋಧವಿದ್ದರೂ ಬ್ರಿಟಿಷರಿಗೆ ಅಂಜದೇ- ಅಳುಕದೇ….. ಮತ್ತೆ ರಾಜವಾಡೆ ಅವರನ್ನೇ ತಮ್ಮ ವಕೀಲರನ್ನಾಗಿ ಮುಂದುವರೆಸಿದರು….. ಪ್ರಯಾಗ ಬಾಯಿಯವರು.


About The Author

Leave a Reply

You cannot copy content of this page

Scroll to Top