ಅಂಕಣ ಸಂಗಾತಿ
ವೃತ್ತಿ-ವೃತ್ತಾಂತ
ವೃತ್ತಿ ಬದುಕಿನ ಹಿನ್ನೋಟ
ನೋಟ ~ ೨೫
ಸುಜಾತಾ ರವೀಶ್
ಪರೀಕ್ಷೆಗಳ ಮುಂದುವರಿಕೆ

೧೯೯೩ ರ ಅಕ್ಟೋಬರ್ ನಲ್ಲಿ ಫೆಲೋಶಿಪ್ ಪರೀಕ್ಷೆಗಳನ್ನು ತೆಗೆದುಕೊಂಡಿದ್ದು ಮೂರು ಪೇಪರ್ ಗಳನ್ನು ತೆಗೆದುಕೊಂಡೆ. ಅದರಲ್ಲಿ ಒಟ್ಟು ಆರು ಪೇಪರ್ ಗಳು.
೧. ಅಡ್ವಾನ್ಸ್ಡ್ ಆಕ್ಚುವಲ್ ಆಸ್ಪೆಕ್ಟ್ಸ್ ವಿಮಾ ಗಣಿತದ ಸುಧಾರಿತ ಹಂತ ಇದರಲ್ಲಿ ವಿಮಾ ಕಂಪನಿಯ ಆಸ್ತಿ ಮತ್ತು ಹೊಣೆಗಾರಿಕೆಗಳ ನಡುವಿನ ವ್ಯತ್ಯಾಸ ಲೆಕ್ಕ ಹಾಕಿ ಲಾಭ ಕಂಡುಹಿಡಿಯುವುದು ಬೋನಸ್ ಯಾವ ರೀತಿ ಹಂಚಬೇಕು ಎಂಬ ಗಣಿತದ ಸೂತ್ರಗಳು ಪ್ರೀಮಿಯಂ ಲೆಕ್ಕಾಚಾರದಲ್ಲಿ ಪರಿಗಣಿಸಬೇಕಾದ ಅಂಶಗಳು ಹೂಡಿಕೆಯ ಲಾಭಗಳ ಲೆಕ್ಕಾಚಾರ ಇವೆಲ್ಲವೂ ಇರುತ್ತಿತ್ತು.
೨. ಜೀವ ವಿಮಾ ಲೆಕ್ಕಾಚಾರ ಇನ್ಶೂರೆನ್ಸ್ ಅಕೌಂಟ್ಸ್ ಇದರಲ್ಲೂ ಸುಧಾರಿತ ಪಠ್ಯಕ್ರಮ ಇರುತ್ತಿತ್ತು.
೩. ಸ್ಟಾಟಿಸ್ಟಿಕ್ಸ್ ಇದರಲ್ಲಿ ಪ್ರಾಬಬಿಲಿಟಿ ಹಾಗೂ ಇನ್ನಿತರ ಪಠ್ಯಗಳು
೪. ಲೀಗಲ್ ಆಸ್ಪೆಕ್ಟ್ಟ್ ಜೀವ ವಿಮೆಯ ಕಾನೂನಾತ್ಮಕ ವಿಷಯಗಳು ಪರಿಚಯ
೫. ಮಾರ್ಕೆಟಿಂಗ್ ಸಾಮಾನ್ಯ ಮಾರಾಟ ಸೂತ್ರಗಳ ವಿಷಯ ಅದರಲ್ಲಿ ವಿಶೇಷವಾಗಿ ಜೀವವಿಮೆ ಮಾರಾಟದ ಬಗ್ಗೆ ವಿವರಗಳು ಇರುತ್ತಿತ್ತು.
೬. ಪರ್ಸೋನೆಲ್ ಮ್ಯಾನೇಜ್ಮೆಂಟ್ ಸಿಬ್ಬಂದಿ ಸೇವೆಗೆ ಸಂಬಂಧಿಸಿದಂತೆ ವಿಚಾರಗಳು ನಂತರ ಜೀವವಿಮ ಉದ್ಯೋಗಿಗಳ ಬಗ್ಗೆ ವಿಶೇಷ ಪಠ್ಯ.
ಛಾಯಾ ಸಹ ಆಕ್ಚೂರಿಯಲ್ ಮತ್ತು ಸ್ಟ್ಯಾಟಿಸ್ಟಿಕ್ಸ್ ಪರೀಕ್ಷೆ ತೆಗೆದುಕೊಂಡಿದ್ದರಿಂದ ಒಟ್ಟಿಗೆ ಓದಬಹುದು ಎಂದು ನಾನು ಅವೆರಡು ಪತ್ರಿಕೆ ಪೇಪರ್ಸ್ ತೆಗೆದುಕೊಂಡು ಮತ್ತೊಂದು ಮಾರ್ಕೆಟಿಂಗ್ ಪೇಪರ್ ತೆಗೆದುಕೊಂಡಿದ್ದೆ, ಅದೇನು ದುರಾದೃಷ್ಟವ ಗೊತ್ತಿಲ್ಲ ಮಾರ್ಕೆಟಿಂಗ್ ಮಾತ್ರ ಪಾಸಾಗಿ ಮತ್ತೆ ಎರಡು ಪೇಪರುಗಳು 49 ಅಂಕಗಳು ಬಂದಿದ್ದವು ತುಂಬಾ ಬೇಸರ ಆಯಿತು. ಆಧಾರಿ ಛಾಯಳದು ಫೆಲೋಶಿಪ್ ಮುಗಿಯಿತು. ಅದರ ಮುಂದಿನ ವರುಷ ನನ್ನ ಅಕೌಂಟೆನ್ಸಿ ಮತ್ತು ಉಳಿದ ಥಿಯರಿ ಪರೀಕ್ಷೆಗಳು ಮುಗಿದೆವು ಆಕ್ಚುರಿಯಲ್ಸ್ ಹಾಗೂ ಸ್ಟ್ಯಾಟಿಸ್ಟಿಕ್ಸ್ ಪೇಪರ್ ಗಳನ್ನು ಮತ್ತೆ ಓದಲು ಬೇಸರವಾಗಿ ತೆಗೆದುಕೊಳ್ಳಲೇ ಇಲ್ಲ ಅಲ್ಲಿಗೆ ನನ್ನ ಇಲಾಖೆ ಪರೀಕ್ಷೆಗಳ ಕಥೆ ಮುಗಿದ ಹಾಗೆ ಆಯಿತು.
ತೊಂಬತ್ತರ ದಶಕದಲ್ಲಿ (1990s) ಭಾರತೀಯ ಜೀವ ವಿಮಾ ಕ್ಷೇತ್ರವು ಇಂದಿಗಿಂತ ಸಂಪೂರ್ಣವಾಗಿ ಭಿನ್ನವಾಗಿತ್ತು. ಆಗ ವಿಮಾ ಶಿಕ್ಷಣ ಮತ್ತು ಅಭ್ಯಾಸ ವಿಷಯಗಳು ಮುಖ್ಯವಾಗಿ ಭಾರತೀಯ ಜೀವ ವಿಮಾ ನಿಗಮದ (LIC) ಕಾರ್ಯವೈಖರಿಯ ಸುತ್ತವೇ ಕೇಂದ್ರೀಕೃತವಾಗಿದ್ದವು.
ತೊಂಬತ್ತರ ದಶಕದಲ್ಲಿ ಜೀವ ವಿಮೆಗೆ ಸಂಬಂಧಿಸಿದ ಅಭ್ಯಾಸ ವಿಷಯಗಳು (Curriculum) ಹೇಗಿದ್ದವು ಎಂಬುದರ ಪ್ರಮುಖ ಮುಖ್ಯಾಂಶಗಳು ಇಲ್ಲಿವೆ:
1. ಏಕಸ್ವಾಮ್ಯದ ಪಠ್ಯಕ್ರಮ (Monopoly Context)
1999ರಲ್ಲಿ ವಿಮಾ ವಲಯವು ಖಾಸಗೀಕರಣಗೊಳ್ಳುವ ಮೊದಲು, LIC ಮಾತ್ರ ಏಕೈಕ ಜೀವ ವಿಮಾ ಸಂಸ್ಥೆಯಾಗಿತ್ತು. ಆದ್ದರಿಂದ, ಅಂದಿನ ಪಠ್ಯಪುಸ್ತಕಗಳು ಮತ್ತು ಅಭ್ಯಾಸ ವಿಷಯಗಳು ಸಂಪೂರ್ಣವಾಗಿ LIC ಕಾಯ್ದೆ (1956) ಮತ್ತು ಅದರ ನಿಯಮಾವಳಿಗಳ ಮೇಲೆ ಆಧಾರಿತವಾಗಿದ್ದವು. ಸ್ಪರ್ಧೆಯಿಲ್ಲದ ಕಾರಣ, ‘ಮಾರ್ಕೆಟಿಂಗ್’ ಗಿಂತ ‘ಸರ್ಕಾರಿ ನಿಯಮಗಳ’ ಪಾಲನೆಗೆ ಹೆಚ್ಚು ಒತ್ತು ನೀಡಲಾಗುತ್ತಿತ್ತು.
2. ಸೀಮಿತ ಉತ್ಪನ್ನಗಳ ಜ್ಞಾನ (Limited Product Range)
ಇಂದು ನಾವು ನೋಡುವ ಯುಲಿಪ್ (ULIP) ಅಥವಾ ಸಂಕೀರ್ಣವಾದ ಹೂಡಿಕೆ ಯೋಜನೆಗಳು ಆಗ ಅಷ್ಟಾಗಿ ಇರಲಿಲ್ಲ. ಅಂದಿನ ಅಭ್ಯಾಸ ವಿಷಯಗಳು ಮುಖ್ಯವಾಗಿ ಇವುಗಳ ಮೇಲೆ ಕೇಂದ್ರೀಕೃತವಾಗಿದ್ದವು:
ಎಂಡೋಮೆಂಟ್ ಪ್ಲಾನ್ (Endowment Plans): ಉಳಿತಾಯ ಮತ್ತು ರಕ್ಷಣೆ ಎರಡನ್ನೂ ಒಳಗೊಂಡ ಯೋಜನೆಗಳು.
ಮನಿ ಬ್ಯಾಕ್ ಪ್ಲಾನ್ (Money Back Plans): ನಿಯತಕಾಲಿಕವಾಗಿ ಹಣ ಮರುಪಾವತಿ ಮಾಡುವ ಯೋಜನೆಗಳು.
ಹೋಲ್ ಲೈಫ್ ಇನ್ಶೂರೆನ್ಸ್ (Whole Life Insurance): ಆಜೀವ ವಿಮಾ ರಕ್ಷಣೆ.
3. ಹಸ್ತಚಾಲಿತ ಲೆಕ್ಕಾಚಾರಗಳು (Manual Calculations)
ಇಂದು ಕಂಪ್ಯೂಟರ್ ಸಾಫ್ಟ್‌ವೇರ್‌ಗಳು ಪ್ರೀಮಿಯಂ ಮೊತ್ತವನ್ನು ಸೆಕೆಂಡುಗಳಲ್ಲಿ ಲೆಕ್ಕಹಾಕುತ್ತವೆ. ಆದರೆ 90ರ ದಶಕದಲ್ಲಿ ಅಭ್ಯರ್ಥಿಗಳು:
ಪ್ರೀಮಿಯಂ ಟೇಬಲ್‌ಗಳನ್ನು (Rate Tables) ನೋಡಿ ಪ್ರೀಮಿಯಂ ಲೆಕ್ಕ ಹಾಕುವುದನ್ನು ಕಲಿಯಬೇಕಿತ್ತು.
ಬೋನಸ್ ಲೆಕ್ಕಾಚಾರ ಮತ್ತು ಮೆಚ್ಯೂರಿಟಿ ಮೊತ್ತವನ್ನು ಹಸ್ತಚಾಲಿತವಾಗಿ (Manually) ಲೆಕ್ಕ ಹಾಕುವ ತರಬೇತಿ ಕಲಿಸಲಾಗುತ್ತಿತ್ತು. ವಿಮೆಯು ಕೇವಲ ಮಾರಾಟವಲ್ಲ, ಅದೊಂದು ಗಣಿತದ ಲೆಕ್ಕಾಚಾರ ಎಂಬ ಶಿಸ್ತು ಅಂದು ಹೆಚ್ಚಾಗಿತ್ತು.
5. ಕಾನೂನು ಮತ್ತು ನೈತಿಕತೆ
ಕ್ಲೈಮ್‌ಗಳ ಇತ್ಯರ್ಥ: ಮರಣದ ನಂತರದ ಹಕ್ಕು ಪಡೆಯುವ ಪ್ರಕ್ರಿಯೆ ಮತ್ತು ಅದಕ್ಕೆ ಬೇಕಾದ ಕಟ್ಟುನಿಟ್ಟಾದ ದಾಖಲೆಗಳ ಬಗ್ಗೆ ಅಧ್ಯಯನ ಮಾಡಲಾಗುತ್ತಿತ್ತು.
ನೈತಿಕತೆ (Ethics): ಗ್ರಾಹಕರಿಗೆ ವಿಮೆಯ ಮಹತ್ವವನ್ನು ಹೇಗೆ ಮನವರಿಕೆ ಮಾಡಿಕೊಡಬೇಕು ಮತ್ತು ವಿಮೆಯು ಹೇಗೆ ಒಂದು ಸಾಮಾಜಿಕ ಭದ್ರತೆಯ ಸಾಧನ ಎಂಬ ಬಗ್ಗೆ ಬೋಧಿಸಲಾಗುತ್ತಿತ್ತು.
6. ಪ್ರಚಾರದ ವಿಧಾನ
ಅಂದಿನ ಅಭ್ಯಾಸಗಳಲ್ಲಿ “Personal Selling” ಅಥವಾ ವ್ಯಕ್ತಿಗತ ಭೇಟಿಗೆ ಹೆಚ್ಚಿನ ಮಹತ್ವವಿತ್ತು. ಇಂದಿನಂತೆ ಡಿಜಿಟಲ್ ಮಾರ್ಕೆಟಿಂಗ್ ಇಲ್ಲದ ಕಾರಣ, ಗ್ರಾಹಕರ ನಂಬಿಕೆ ಗಳಿಸುವುದು ಹೇಗೆ ಎಂಬುದು ಪಠ್ಯದ ಪ್ರಮುಖ ಭಾಗವಾಗಿತ್ತು.
ಸಂಕ್ಷಿಪ್ತವಾಗಿ ಹೇಳುವುದಾದರೆ: 90ರ ದಶಕದ ವಿಮಾ ಶಿಕ್ಷಣವು ಇಂದಿನಂತೆ ತಾಂತ್ರಿಕವಾಗಿ ಸುಧಾರಿತವಾಗಿರಲಿಲ್ಲ, ಆದರೆ ಅದು ಸಿದ್ಧಾಂತ (Theory) ಮತ್ತು ನಿಯಮಗಳ ಮೇಲೆ ಬಹಳ ಬಲವಾದ ಹಿಡಿತವನ್ನು ಹೊಂದಿತ್ತು.

ಅಲ್ಲದೆ ಎಲ್ಲವೂ ಪ್ರಬಂಧ ಮಾದರಿ ಉತ್ತರಗಳು ಫೆಲೋಶಿಪ್ ಪರೀಕ್ಷೆಯಲ್ಲಿ ಒಂದೊಂದು ಪ್ರಶ್ನೆಗೆ ನಾಲ್ಕು ಐದು ಪುಟಗಳ ಉತ್ತರ ಬರೆಯಬೇಕಿತ್ತು ಕೇವಲ ಮಾಹಿತಿ ನೀಡಿದರೆ ಸಾಲುತ್ತಿರಲಿಲ್ಲ ನಮ್ಮ ಸ್ವಂತ ವಿಶ್ಲೇಷಣೆ ಮತ್ತು ತಾರ್ಕಿಕ ಚಿಂತನೆ ಇರಬೇಕಿತ್ತು. ಫೆಲೋಷಿಪ್ ಮುಗಿಸುವುದು ಆಗ ಬಹಳ ಗೌರವದ ವಿಷಯವಾಗಿತ್ತು .ಪರೀಕ್ಷೆಗಳು ಕಠಿಣವಾದ್ದರಿಂದ ತುಂಬಾ ಕಡಿಮೆ ಜನ ಈ ಹಂತ ತಲುಪುತ್ತಿದ್ದರು ಆಗ ಫೆಲೋಶಿಪ್ ಮುಗಿಸಿದವರಿಗೆ ಲಂಡನ್ ನ ಚಾರ್ಟೆಡ್ ಇನ್ಸೂರೆನ್ಸ್ ಇನ್ಸ್ಟಿಟ್ಯೂಟ್ ನೇರ ಮಾನ್ಯತೆ ನೀಡುತ್ತಿತ್ತು.
ಇನ್ನು ನಮ್ಮ ಎಂಕಾಂ ಪರೀಕ್ಷೆಗಳ ವಿಷಯಕ್ಕೆ ಬರುತ್ತೇನೆ. ೧೯೯೦ರ ದಶಕದಲ್ಲಿ ಮೈಸೂರು ವಿಶ್ವವಿದ್ಯಾನಿಲಯದ ಅಂಚೆ ತೆರಪಿನ ಶಿಕ್ಷಣ ಮತ್ತು ಸುಧಾರಣಾ ಕೇಂದ್ರ (Institute of Correspondence Course and Continuing Education – ICC&CE) ದೇಶದ ಪ್ರಮುಖ ದೂರಶಿಕ್ಷಣ ಸಂಸ್ಥೆಗಳಲ್ಲಿ ಒಂದಾಗಿತ್ತುಮೈಸೂರು ವಿಶ್ವವಿದ್ಯಾನಿಲಯವು ೧೯೬೯ರಲ್ಲಿ ಈ ವಿಭಾಗವನ್ನು ಪ್ರಾರಂಭಿಸಿತ್ತು. ನಂತರದ ದಿನಗಳಲ್ಲಿ (೨೦೦೨ರಲ್ಲಿ) ಇದನ್ನು ದೂರಶಿಕ್ಷಣ ಮಂಡಳಿ (KSOU) ಎಂದು ಪ್ರತ್ಯೇಕ ವಿಶ್ವವಿದ್ಯಾನಿಲಯವಾಗಿ ಪರಿವರ್ತಿಸಲಾಯಿತು.ಅಂದಿನ ಕಾಲದಲ್ಲಿ ಕೆಲಸ ಮಾಡುತ್ತಲೇ ಪದವಿ ಪಡೆಯಬಯಸುವ ಶಿಕ್ಷಕರಿಗೆ ಮತ್ತು ಸರ್ಕಾರಿ ನೌಕರರಿಗೆ ಇದು ಅತ್ಯಂತ ನೆಚ್ಚಿನ ಸಂಸ್ಥೆಯಾಗಿತ್ತು. ಮೈಸೂರು ವಿಶ್ವವಿದ್ಯಾನಿಲಯದ ಪದವಿಗೆ ದೇಶಾದ್ಯಂತ ಹೆಚ್ಚಿನ ಗೌರವ ಮತ್ತು ಮಾನ್ಯತೆ ಇತ್ತು.
ಛಾಯ ಕಡೆಯ ಬಿಎಸ್ಸಿ ಯಲ್ಲಿದ್ದಾಗಲೇ ಕೆಲಸಕ್ಕೆ ಸೇರಿಕೊಂಡಿದ್ದರಿಂದ ಪದವಿ ಮುಗಿಸಲು ಆಗಿರಲಿಲ್ಲ ಹಾಗಾಗಿ ತಕ್ಷಣವೇ ಅವಳು ಮುಕ್ತ ವಿಶ್ವವಿದ್ಯಾನಿಲಯದಲ್ಲಿ ಬಿಕಾಂ ಮೊದಲ ವರ್ಷ ಪರೀಕ್ಷೆ ತೆಗೆದುಕೊಂಡಿದ್ದಳು. ನನ್ನ ಕಡೆಯ ತಂಗಿ ವೈಶಾಲಿ ಸೆಕ್ರೆಟೇರಿಯೇಟ್ ಕೋರ್ಸ್ ಡಿಪ್ಲೋಮೋ ಮುಗಿಸಿಕೊಂಡಿದ್ದರಿಂದ ಅವಳಿಗೆ ಎರಡನೇ ವರ್ಷದ ಬಿ ಕಾಂಗೆ ನೇರ ಅನುಮತಿ ಇತ್ತು .ಹಾಗಾಗಿ ಎರಡು ವರ್ಷದ ಪರೀಕ್ಷೆಗಳನ್ನು ಅವರಿಬ್ಬರು ಒಟ್ಟಿಗೆ ಮುಗಿಸಿ ಬಿಕಾಂ ಪದವೀಧರರಾಗಿದ್ದರು.೧೯೯೩ ರಲ್ಲಿ ಅವರ ಪದವಿ ಮುಗಿದಿತ್ತು. ೧೯೯೪ ರಲ್ಲಿ ಮುಕ್ತ ವಿಶ್ವವಿದ್ಯಾನಿಲಯದ ನಾಟಕೋತರ ಎಂಕಾಂ ಮಾಡಲು ನಿರ್ಧರಿಸಿದರು ನಾನು ಸಹ ಅವರೊಂದಿಗೆ ಪರೀಕ್ಷೆ ತೆಗೆದುಕೊಳ್ಳಲು ನಿರ್ಧರಿಸಿದೆ ಅದಕ್ಕೆ ಮುಂಚೆ ನಮ್ಮ ಇಲಾಖೆಯಿಂದ ಅನುಮತಿ ಪತ್ರ ಪಡೆಯಬೇಕಿತ್ತು ಅದು ತೆಗೆದುಕೊಂಡು ಆಯಿತು. ಆಗ ಮುಕ್ತ ವಿಶ್ವವಿದ್ಯಾನಿಲಯದ ಪರೀಕ್ಷೆಗಳನ್ನು ಅಂಚೆ ತೆರಪಿನ ಶಿಕ್ಷಣ ಎಂದು ಕರೆಯುತ್ತಿದ್ದರು. ಈಗಿನ ಹೊಸ ಕಟ್ಟಡ ಇರಲಿಲ್ಲ ವಿಶ್ವವಿದ್ಯಾನಿಲಯದ ಆವರಣದಲ್ಲೇ ಒಂದು ಕಚೇರಿ ಇತ್ತು. ಡಿಡಿ ತೆಗೆದುಕೊಂಡು ಹೋಗಿ ಕಟ್ಟಿ ಬಂದರೆ ಪೋಸ್ಟ್ ನಲ್ಲಿ ಪಠ್ಯ ಪರೀಕ್ಷೆಗಳು ಬರುತ್ತಿದ್ದವು. ಕಡೆಯಲ್ಲಿ ಒಂದು ವಾರದ ತರಬೇತಿ ಕಾರ್ಯಕ್ರಮ ಇರುತ್ತಿತ್ತು. ಆದರೆ ಅದೇನು ಕಡ್ಡಾಯ ಇರದಿದ್ದರಿಂದ ನಾವು ಅದನ್ನು ಅಟೆಂಡ್ ಮಾಡಲಿಲ್ಲ. ಆ ವೇಳೆಗೆ ನಮ್ಮ ತಂದೆಗೆ ತಿರುಚಿನಪಲ್ಲಿಯಿಂದ ಮತ್ತೆ ಮೈಸೂರಿಗೆ ವರ್ಗವಾಗಿದ್ದರಿಂದ ಅಮ್ಮ ಅಣ್ಣ ಮನೆಗೆ ವಾಪಸ್ ಬಂದಿದ್ದರು. .ಅಲ್ಲಿಯವರೆಗೆ ಅಮ್ಮನ ಮನೆಯಲ್ಲಿ ಉಳಿದಿದ್ದ ನಾವು ಈಗ ಬೇರೆ ಮನೆ ಮಾಡಿದ್ದೆವು. ಮನೆ ಕೆಲಸ ಪೂರ್ತಿ ಈಗ ನನ್ನ ಮೇಲೆ ಬಿದ್ದಿದ್ದರಿಂದ ಓದಲು ಸಮಯ ಕಡಿಮೆ ಸಿಗುತ್ತಿತ್ತು. ಪರೀಕ್ಷೆಯ ವೇಳೆಗಳಲ್ಲಿ ಅಮ್ಮನ ಮನೆಗೆ ಹೋಗಿ ಇದ್ದುಬಿಡುತ್ತಿದ್ದೆ.
ಮೊದಲ ವರ್ಷ ೫ ಪೇಪರಗಳು. ಪರ್ಸೊನಲ್ ಮಾನೇಜ್ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್ ನಮ್ಮ ಆಯ್ಕೆಯ ವಿಷಯವಾದ್ದರಿಂದ ಅದರ ಬಗ್ಗೆ ಎರಡು ಪೇಪರ್ಗಳು ಇಂಡಸ್ಟ್ರಿಯಲ್ ಮತ್ತು ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಮ್ಯಾನೇಜಿರಿಯಲ್ ಎಕನಾಮಿಕ್ಸ್ ಮತ್ತು ಫೈನಾನ್ಸಿಯಲ್ ಅಂಡ್ ಮ್ಯಾನೇಜರ್ ಅಕೌಂಟಿಂಗ್ ಹೀಗೆ ೫ ಪೇಪರ್ ಗಳು. ಅವರು ಕೊಡುತ್ತಿದ್ದ ನೋಟ್ಸ್ ಗಳು ಬರೀ ಏನು ವಿಷಯ ಎಂದು ತಿಳಿಯಲು ಸಾಕಾಗುತ್ತಿತ್ತು. ಬೇರೆ ಪಠ್ಯಪುಸ್ತಕಗಳನ್ನು ರೆಫರ್ ಮಾಡಿ ಓದಬೇಕಾಗಿತ್ತು. ಅಷ್ಟೊಂದು ಪರಿಶ್ರಮ ಪಟ್ಟು ಓದುವ ಮನಸ್ಥಿತಿ ಹೊರಟುಹೋಗಿತ್ತು ಸುಮಾರಾಗಿ ಓದಿದೆ ಮೊದಲ ವರ್ಷ ೫೦೦ ಕ್ಕೆ ೩೦೬ ಅಂಕಗಳು ಬಂದವು. ಯಾವಾಗಲೂ ಮೊದಲ ದರ್ಜೆ ಅದರಲ್ಲೂ ಹೆಚ್ಚಿನ ಪರ್ಸೆಂಟೇಜ್ ತೆಗೆಯುತ್ತಿದ್ದ ನನಗೆ ಇದೇ ಮೊದಲ ಬಾರಿ ಸೆಕೆಂಡ್ ಕ್ಲಾಸ್ ಬಂದಿದ್ದು. ಮುಂದಿನ ಬಾರಿ ಚೆನ್ನಾಗಿ ತೆಗೆಯೋಣ ಅಂದುಕೊಂಡು ಸುಮ್ಮನಾದೆ. ಛಾಯಾ ವೈಶಾಲಿ ಇಬ್ಬರೂ ಫಸ್ಟ್ಕ್ಲಾಸ್ ಬಂದಿದ್ದರು. “ವಿವಾಹಂ ವಿದ್ಯಾ ನಾಶನಂ” ಎಂಬ ಮಾತು ನನ್ನ ವಿಷಯದಲ್ಲಿ ಸತ್ಯವಾಗಿತ್ತು.
೧೯೯೫ರ ಮೇ ನಲ್ಲಿ ಎರಡನೆಯ ವರ್ಷದ ಎಂ ಕಾಂ.ಕಛೇರಿಯಿಂದ ಅನುಮತಿ ಪಡೆದು ಆಯಿತು. ಐಚ್ಛಿಕ ವಿಷಯಗಳಾದ ಪರ್ಸೋನಲ್ ಮ್ಯಾನೇಜ್ಮೆಂಟ್ ಮತ್ತು ಇಂಡಸ್ಟ್ರಿಯಲ್ ರಿಲೇಶನ್ಸ್ ನ ಮೂರು ಮತ್ತು ನಾಲ್ಕನೆಯ ಭಾಗದ ಪೇಪರ್ ಗಳು ಮಾರ್ಕೆಟಿಂಗ್ ಮ್ಯಾನೇಜ್ಮೆಂಟ್ ಮ್ಯಾನೇಜ್ಮೆಂಟ್ ಆಫ್ ಪಬ್ಲಿಕ್ ಎಂಟರ್ಪ್ರೈಸಸ್ ಇನ್ ಇಂಡಿಯಾ ಮತ್ತು ಫೈನಾನ್ಸಿಯಲ್ ಮ್ಯಾನೇಜ್ಮೆಂಟ್ ಹೀಗೆ ಐದು ಪೇಪರ್ಗಳು. ನನ್ನದು ಯಾವಾಗಲೂ ಯುದ್ಧಕಾಲೇ ಶಸ್ತ್ರಾಭ್ಯಾಸ ಎನ್ನುವಂತೆ ಕಡೆ ಗಳಿಗೆಯಲ್ಲಿ ಓದು. ಈ ವರ್ಷ ಏನಾಯಿತು ಎಂದರೆ ನಾವು ಮನೆ ತೆಗೆದುಕೊಳ್ಳಲು ಓಡಾಟ ನಡೆಸಿ ಆ ಪ್ರಯತ್ನದಲ್ಲಿ ಇದ್ದವು ಸಾಲಕ್ಕಾಗಿ ಬೇಕಾದ ಪತ್ರಗಳನ್ನು ತಯಾರು ಮಾಡಿಕೊಳ್ಳಲು ಮತ್ತು ಮುಖ್ಯವಾಗಿ ಹಣ ಹೊಂದಿಸಲು ಪರದಾಟ ನಡೆಯುತ್ತಿತ್ತು. ಈ ಟೆನ್ಶನ್ ನಲ್ಲಿ ಓದಲು ಸಮಯವೂ ಇರಲಿಲ್ಲ ಮನಸ್ಸು ತೊಡಗಿಸಲು ಆಗುತ್ತಿರಲಿಲ್ಲ .ಪರೀಕ್ಷೆ ತೆಗೆದುಕೊಳ್ಳುವುದೇ ಬೇಡ ಮುಂದಿನ ವರ್ಷ ತೆಗೆದುಕೊಳ್ಳೋಣ ಎಂದುಕೊಂಡು ಆಗಿತ್ತು ಆದರೆ ನನ್ನ ತಂಗಿಯರ ಬಲವಂತದಿಂದ ಅವರು ಓದುವಾಗ ಒಂದಿಷ್ಟು ಕಾಲ ಕೂತು ಅವರ ನೋಟ್ಸ್ ಗಳನ್ನು ಓದಿಕೊಂಡಿದ್ದೆ .ನಮ್ಮ ಮನೆಯ ರಿಜಿಸ್ಟ್ರೇಷನ್ ಹಿಂದಿನ ದಿನ ಹಾಗೂ ಮಾರನೆಯ ದಿನ ಒಂದೊಂದು ಪೇಪರ್ಗಳು ಹೇಗೆ ಓದಿದೇನೋ ಹೇಗೆ ಬರೆದೆನೋ ಗೊತ್ತಿಲ್ಲ. ಅಂತೂ ಮುಗಿಯಿತಲ್ಲಾ ಅಂತ ಗೃಹಪ್ರವೇಶಕ್ಕೆ ಸಿದ್ಧ ಮಾಡಿಕೊಳ್ಳಲು ಅನುವಾದೆ. ಫಲಿತಾಂಶ ಬಂದಿತು.೫೦೦ಕ್ಕೆ ೨೪೧ ಜಸ್ಟ್ ಪಾಸ್. ಎಂ ಕಾಂ ನಲ್ಲಿ ಒಟ್ಟಾರೆ ಸೆಕೆಂಡ್ ಕ್ಲಾಸ್. ಅವರಿಬ್ಬರು ಎಂದಿನಂತೆ ಫಸ್ಟ್ ಕ್ಲಾಸ್. ಛಾಯನಿಗೆ ತುಂಬಾ ಒಳ್ಳೆಯ ಅಂಕಗಳು ಬಂದಿದ್ದವು. ಆಗ ಮುಕ್ತ ವಿಶ್ವ ವಿದ್ಯಾನಿಲಯದ ಪರೀಕ್ಷೆಗಳಿಗೆ ರಾಂಕ್ ಗಳನ್ನು ಕೊಡುತ್ತಿರಲಿಲ್ಲ ಈಗ ಕೊಡುತ್ತಿದ್ದಾರಂತೆ .ಆಗ ಕೊಟ್ಟಿದ್ದಿದ್ದರೆ ಅವಳಿಗೂ ಒಂದು ರಾಂಕ್ ಅಥವಾ ಚಿನ್ನದ ಪದಕ ಬಂದಿರುತ್ತಿತ್ತು.
ಹೀಗೆ ಎಂಕಾಂ ಮುಗಿದ ಪರೀಕ್ಷೆ ಮುಗಿದ ನಂತರ ಮತ್ಯಾವ ಪರೀಕ್ಷೆಯ ಗೋಜಿಗೂ ಹೋಗಲಿಲ್ಲ ಪರೀಕ್ಷೆ ತೆಗೆದುಕೊಳ್ಳುತ್ತಿದ್ದೆ ಆದರೆ ಕಡೆಗಳಿಗೆ ಓದಲು ಆಗದೆ ಸುಮ್ಮನಾಗುತ್ತಿದ್ದೆ.
ಇತ್ತೀಚಿಗೆ ಎರಡು ವರ್ಷದಿಂದ ದಾಸಸೌರಭ ದವರು ನಡೆಸುವ ದಾಸಸಾಹಿತ್ಯ ಪರೀಕ್ಷೆಗಳನ್ನು ನಾವು ಮೂರು ಜನರು ತೆಗೆದುಕೊಳ್ಳುತ್ತಿದ್ದೇನೆ ಆದರೆ ಇದು ಓದಲು ಖುಷಿಯಾಗುತ್ತದೆ. ಪರೀಕ್ಷೆ ಎಂದರೆ ಆತಂಕವಿಲ್ಲ.
ಫೆಲೋ ಶಿಪ್ ಪರೀಕ್ಷೆ ಮುಗಿಸಿದರೆ ನಮ್ಮಲ್ಲಿ ಸಹಾಯಕ ಆಡಳಿತ ಅಧಿಕಾರಿಗಳಾಗಿ ನೇರ ಬಡ್ತಿ ಹೊಂದುವ ವಿಶೇಷ ಸೌಲಭ್ಯ ಇರುತ್ತದೆ. ಅದಕ್ಕೆ ೧ಬಿ ಎಂದು ಹೇಳುತ್ತಾರೆ. ಸಹಾಯಕರಿಂದ ಉನ್ನತ ಶ್ರೇಣಿ ಸಹಾಯಕರಾಗದೆ ನೇರ ಸಹಾಯಕ ಆಡಳಿತ ಅಧಿಕಾರಿಗಳಾಗಬಹುದು. ಒಂದು ರೀತಿ ಡಬಲ್ ಪ್ರಮೋಷನ್. ಅದಕ್ಕೂ ಒಂದು ಲಿಖಿತ ಪರೀಕ್ಷೆ ಇರುತ್ತದೆ. ಐದು ವರ್ಷ ಕಾಲ ಸೇವೆ ಸಲ್ಲಿಸಿರಬೇಕು. ಆ ವೇಳೆಗೆ ಛಾಯ ಕೆಲಸಕ್ಕೆ ಸೇರಿ 5 ವರ್ಷ ಆದುದರಿಂದ ಈ ಪರೀಕ್ಷೆಗೆ ಅರ್ಹತೆ ಪಡೆದಿದ್ದಳು. ಲಿಖಿತ ಪರೀಕ್ಷೆಯು ಪಾಸ್ ಆಗಿತ್ತು, ಆದರೆ ಸಂದರ್ಶನದ ವೇಳೆಯಲ್ಲಿ ೧ ಬಿ ಗೆ ನಿಗದಿಯಾಗಿದ್ದ ಸಂಖ್ಯೆಗಿಂತ ೩ ಜನ ಮಾತ್ರ ಹೆಚ್ಚಾಗಿದ್ದರು. ಇದುವರೆಗೂ ನಿಗದಿತ ಸಂಖ್ಯೆಗಿಂತ ಅರ್ಹ ಅಭ್ಯರ್ಥಿಗಳು ಕಡಿಮೆ ಇರುತ್ತಿದ್ದರು. ಈ ಬಾರಿ ಮಾತ್ರ ಹಾಗಾಗಿತ್ತು. ಆ ಆಯ್ಕೆಗೆ ಗರಿಷ್ಠ ವಯೋಮಿತಿ 35 ವರ್ಷ ಮಾತ್ರ. ಆದ್ದರಿಂದ ಅಭ್ಯರ್ಥಿಗಳಲ್ಲಿ ಕನಿಷ್ಠ ವಯಸ್ಸಿನ ಮೂರು ಜನರನ್ನು ಬಿಟ್ಟು ಮಿಕ್ಕವರನ್ನು ಆಯ್ಕೆ ಮಾಡಿದ್ದರು. ಆ ಮೂವರಲ್ಲಿ ಛಾಯಾ ಒಬ್ಭಳು. ನಂತರ ಉನ್ನತ ಶ್ರೇಣಿ ಸಹಾಯಕರಿಗೆ ನಡೆದ ಸಂದರ್ಶನದಲ್ಲಿ ಆಯ್ಕೆಯಾಗಿ ಅವಳಿಗೆ ಕೆಆರ್ ಪೇಟೆಗೆ ಬಡ್ತಿಯಾಗಿ ವರ್ಗಾವಣೆ ಆಯಿತು. ಮುಂದಿನ ವರ್ಷ ಸಹಾಯಕ ಆಡಳಿತಾಧಿಕಾರಿಯಾಗಿ ನೇಮಕಾತಿಯಾಗುವ ತನಕ ಅವಳು ಕೆ ಆರ್ ಪೇಟೆಯಲ್ಲಿ ಕಾರ್ಯ ನಿರ್ವಹಿಸಿದಳು. .
(ಮುಂದಿನ ವಾರ ಮುಂದುವರೆಯುವುದು)
ಸುಜಾತಾ ರವೀಶ್




