ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

 ಯಳಂದೂರು ಶ್ರೀ  ಬಸವಲಿಂಗ ಶಿವಯೋಗಿಗಳು ಚಾಮರಾಜನಗರ ಜಿಲ್ಲೆಯ ಕಾರಾಪುರದ ಗ್ರಾಮದ.

ಮಧ್ಯಮ ವ್ಯಾಪಾರ ಕಾಯಕದ ಲಿಂಗಾಯತ ಬಣಜಿಗ ಕುಟುಂಬದಲ್ಲಿ ಜನಿಸಿದರು. 

ಬಾಲ್ಯದಲ್ಲಿ ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು ಶ್ರೀ ಸಿದ್ಧಾರೂಢರ ಕೃಪೆ ಕಟಾಕ್ಷಕ್ಕೆ ಒಳಗಾದರು. ಮುಂದೆ ಗದುಗಿನ ತೋಂಟದಾರ್ಯ ಮಠದ ಅಧಿಪತಿಯಾದರು.

 ಒಬ್ಬ ಪ್ರಮುಖ ಲಿಂಗಾಯತ  ಆಧ್ಯಾತ್ಮಿಕ ನಾಯಕರು ಮತ್ತು ವ್ಯಕ್ತಿ, ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಗುರುಗಳು  ಮತ್ತು ಪೂಜ್ಯರು, ತಮ್ಮ ಆಧ್ಯಾತ್ಮಿಕ ಕೊಡುಗೆಗಳಿಂದ ಶ್ರೀ ಹಾನಗಲ್ ಕುಮಾರ ಸ್ವಾಮೀಜಿಗೆ ಚೈತನ್ಯ ದೀಕ್ಷೆ ನೀಡಿ ತಮ್ಮ ಬಳಿಗೆ 12 ವರುಷ ವಿದ್ಯಾರ್ಜನೆಗೆ ಇಟ್ಟು ಕೊಂಡಿದ್ದರು.

 ಶ್ರೀ ಶಿವಯೋಗ ಮಂದಿರ ಮತ್ತು ಲಿಂಗಾಯತ  ಧರ್ಮದ ಬೆಳವಣಿಗೆಗೆ ಕಾರಣರಾದರು, ಇವರನ್ನು “ಗುರುವಿನ ಗುರು” ಎಂದು ಗೌರವಿಸಲಾಗುತ್ತದೆ. 

 *ಬದುಕು ಮತ್ತು  ಕೊಡುಗೆಗಳು:*

_____________________

ಆಧ್ಯಾತ್ಮಿಕ ನಾಯಕತ್ವ: ಯಳಂದೂರು ತಾಲ್ಲೂಕಿನ ಕಾರಾಪುರ ವಿರಕ್ತಮಠದ ಪ್ರಮುಖ ಗುರುಗಳಾಗಿದ್ದರು. ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಗುರುಗಳಾಗಿ, ಅವರ ಆಧ್ಯಾತ್ಮಿಕ ಪರಂಪರೆಯನ್ನು ಮುಂದುವರಿಸಿದರು.

ಮಹಾಸಭೆಯಲ್ಲಿ ಪಾತ್ರ: ಅಖಿಲ ಭಾರತ ವೀರಶೈವ ಮಹಾಸಭೆಯ ಅಧ್ಯಕ್ಷರಾಗಿ ಮಹಾಸಭೆಯ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದರು.

ಶ್ರೀ ಶಿವಯೋಗ ಮಂದಿರ: 

ಶ್ರೀ ಶಿವಯೋಗ ಮಂದಿರದ ರಕ್ಷಣೆ ಮತ್ತು ಅಭಿವೃದ್ಧಿಯಲ್ಲಿ ಅವರ ಕೊಡುಗೆ ಮಹತ್ವದ್ದು. ಮಂದಿರದ ತಾಳೆ ಗ್ರಂಥಗಳ ರಕ್ಷಣೆ ಮತ್ತು ಗ್ರಂಥಾಲಯ ಸ್ಥಾಪನೆಯಲ್ಲಿ ಅವರ ಪ್ರಭಾವವಿತ್ತು.

*ಧಾರ್ಮಿಕ ಮತ್ತು ಸಾಮಾಜಿಕ ಕೊಡುಗೆ:* 

ತಮ್ಮ ಆಧ್ಯಾತ್ಮಿಕ ಶಕ್ತಿಯಿಂದ ಧಾರ್ಮಿಕ ಚಟುವಟಿಕೆಗಳನ್ನು ನಡೆಸುತ್ತಾ, ಸಾಮಾಜಿಕ ಮತ್ತು ಧಾರ್ಮಿಕ ಕ್ಷೇತ್ರದಲ್ಲಿ ಮಹತ್ತರ ಕೊಡುಗೆ ನೀಡಿದರು. 

, ಯಳಂದೂರು ಬಸವಲಿಂಗ ಶಿವಯೋಗಿಗಳು ಲಿಂಗಾಯತ  ಧರ್ಮದ ಜಾಗೃತಿ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಒಬ್ಬ ಮಹಾನ್ ಶಿವಯೋಗಿಗಳು. 

ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು.

* *ಅಖಿಲ ಭಾರತ ವೀರಶೈವ ಮಹಾಸಭೆ ಸ್ಥಾಪನೆ

ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪನೆ  ಹಾನಗಲ್ಲ ಶ್ರೀ ಕುಮಾರಸ್ವಾಮಿಗಳು ಶ್ರೀ ಬಿದರಿ  ಸದಾಶಿವ ಮಹಾಸ್ವಾಮಿಗಳು  ಪರಮ ಪೂಜ್ಯ ಯಳಂದೂರು ಬಸವಲಿಂಗ ಶಿವಯೋಗಿಗಳು. ವೈರಾಗ್ಯದ ಮಲ್ಲಣ್ಣಾರ್ಯರ ನಿರಂತರ ಪ್ರಯತ್ನ ಮತ್ತು ವಾರದ ಮಲ್ಲಪ್ಪನವರ ಆರ್ಥಿಕ ಸಹಾಯ ಅರಟಾಳ ರುದ್ರಗೌಡರ ನಿರಂತರ ಯೋಜನೆ ಮುಖ್ಯ ಕಾರಣ.

  *ಗುರುವಿನ ಗುರು ಶ್ರೀ ಯಳಂದೂರು ಬಸವಲಿಂಗ ಶಿವಯೋಗಿಗಳು*

ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು 

ಕಾರಾಪುರ ವಿರಕ್ತಮಠ ಚಾಮರಾಜನಗರ ಜಿಲ್ಲೆ ಅಂದು ಶ್ರೀ 

ಹಾನಗಲ್ ಕುಮಾರ ಸ್ವಾಮೀಜಿ ಅವರು  ಯಳಂದೂರು ಶ್ರೀ ಬಸವಲಿಂಗ  ಶಿವಯೋಗಿಗಳ ಲಿಂಗ ಹಸ್ತದಿಂದ ಗುರು ಕಾರುಣ್ಯ ಚೈತನ್ಯ ದೀಕ್ಷೆ ಪಡೆದರು. ಮುಂದೆ ಹಾನಗಲ್ ಶ್ರೀ  ಕುಮಾರ ಶಿವಯೋಗಿಗಳು ಶಿವಯೋಗ ಮಂದಿರ ನಿರ್ಮಾಣಕ್ಕೆ ಮುಂದಾಗಿ ತಮ್ಮ ದೀಕ್ಷಾ ಗುರುಗಳಾದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಆಶ್ರಯಕ್ಕೆ ನಿಂತರು. ಶಿವಯೋಗ ಮಂದಿರದ ವಟುಗಳಿಗೆ ಶ್ರೀ ಹಾನಗಲ್ ಶ್ರೀ ಕುಮಾರ ಶಿವಯೋಗಿಗಳ ಸಾಕ್ಷಾತ್ ದೇವರು ಅರುವಿನ ಗುರು.ಹೀಗಾಗಿ  ಇಂತಹ ದೊಡ್ಡ ಕುಮಾರ ಶಿವಯೋಗಿಗಳ ಗುರುಗಳು ಭಕ್ತ ವರ್ಗದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು 

 ಯಳಂದೂರು ತಾಲ್ಲೂಕಿನ ಶ್ರೀ ಕಾರಾಪುರ ವಿರಕ್ತಮಠವು ಕರ್ನಾಟಕ ಧಾರ್ಮಿಕ ಇತಿಹಾಸಕ್ಕೆ ಮಹತ್ತರ ಕೊಡುಗೆ ನೀಡಿದೆ 

*ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಲಿಂಗ ಸಮಾಧಿ*

ಮೂವತ್ತಾರು  ವರ್ಷಗಳ ಹಿಂದೆ ನಾನು  ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಚರಿತ್ರೆ ಹುಟ್ಟು ಬಾಲ್ಯ ಮತ್ತು ಅವರ ಶಿಷ್ಯ ಪರಂಪರೆಯನ್ನು ಹುಡುಕುತ್ತಾ ಮೊದಲು ಹುಬ್ಬಳ್ಳಿಯ ಶ್ರೀ ಸಿದ್ಧಾರೂಢ ಮಠಕ್ಕೆ ಹೋಗಿದ್ದೆ. ಅಲ್ಲಿನ ಅನೇಕ ಹಿರಿಯರ ಮೌಖಿಕ ಚರ್ಚೆಗಳನ್ನು ಆಧರಿಸಿ ಗದಗ ತೋಂಟದಾರ್ಯ ಮಠದಲ್ಲಿ ಅವರ ಚರಿತ್ರೆಗೆ ಶೋಧ ನಡೆಸಿದೆ. ಆಶ್ಚರ್ಯ ಎಂದರೆ 

ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು ಗದಗ ತೋಂಟದಾರ್ಯ ಮಠದ ಜಗದ್ಗುರುಗಳಾಗಿದ್ದರು.  ಇವರ ಲಿಂಗೈಕ್ಯವಾದ ಸಮಾಧಿಯ ಕುರುಹು ನನಗೆ ಸಿಗಲಿಲ್ಲ ಆಗ ಒಬ್ಬ ವಯೋವೃದ್ಧರು ನನಗೆ ಸರ್ ಅಣ್ಣಿಗೇರಿಯಲ್ಲಿ ಒಬ್ಬ ಒಂದು ಲಿಂಗಾಯತ ಧರ್ಮದ ಗದ್ದುಗೆ ಇದೆಯೆಂದು ಹೇಳಿದರು. ಅವರ ಮಾತಿನ ಜಾಡು ಹಿಡಿದುಕೊಂಡು ಅಣ್ಣಿಗೇರಿಗೆ ಹೋಗುವ ಪ್ರಯತ್ನ ಮಾಡಿದೆ. 

ನನ್ನ ತಾಯಿಯ ತವರು ಮನೆ ಮುಳುಗುಂದ ವಾಲಿ ಮನೆತನ. ಅಲ್ಲಿಂದ ನಾನು ಶ್ರೀ ಬಸವರಾಜ ವಾಲಿ ಎಂಬ ನನ್ನ ಮಾವನವರೊಂದಿಗೆ ಅಣ್ಣಿಗೇರಿಗೆ ಬಂದೆನು. ಆಗ ತೋಂಟದಾರ್ಯ ಮಠದ ಒಂದು ಗದ್ದುಗೆ ಕಣ್ಣಿಗೆ ಬಿತ್ತು. ಆ ಗದ್ದುಗೆಯ ಗುಡಿಯ ಸುತ್ತಲೂ ಕುರುಳು ಬೆರಣಿ ಉರುವಲು ತಟ್ಟುತ್ತಿದ್ದರು. ಅಣ್ಣಿಗೇರಿ ಗ್ರಾಮಸ್ಥರು ಇದು ನಮ್ಮ ಹಿಂದಿನ ಅಜ್ಜಾರ ಗದ್ದುಗೆ ಎಂದು ಹೇಳಿದರು. ಗ್ರಾಮೀಣ ಭಾಗದ ಜನರಿಗೆ ಅಷ್ಟೊಂದು ಹೆಸರುಗಳು ನೆನಪಿಗೆ ಇರಲಿಲ್ಲ.

ಆಗ ನನಗೆ ಇವರು ಗದುಗಿನ ತೋಂಟದಾರ್ಯ ಮಠದ ಪರಂಪರೆ ಜಗದ್ಗುರು ಆಗಿದ್ದರು ಎಂಬ ಸಾಕ್ಷಿ ಸಿಕ್ಕಿತ್ತು. ಇದನ್ನು ಅವಲಂಬಿತವಾಗಿ ಇಟ್ಟು ಕೊಂಡು ಇದು ತೋಂಟದಾರ್ಯ ಮಠದ ಪರಂಪರೆ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಎಂದು ತೀರ್ಮಾನ ಮಾಡಲು ಅನುಕೂಲವಾಯಿತು. ಇದನ್ನು ಗದುಗಿನ ಅಂದಿನ ಜಗದ್ಗುರುಗಳು ಅಪ್ಪಟ ಬಸವ ಪ್ರೇಮಿ  ಶ್ರೀ ಡಾ ಸಿದ್ಧಲಿಂಗ ಸ್ವಾಮೀಜಿ ಅವರಿಗೆ 

ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ವಿಷಯ ಪ್ರಸ್ತಾಪ ಮಾಡಿದೆ. ಆಗ ಶ್ರೀ ಡಾ ಸಿದ್ಧಲಿಂಗ ಸ್ವಾಮೀಜಿ ಅವರು ಅಣ್ಣಿಗೇರಿಯ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಸ್ವಚ್ಛ ಮಾಡಲು ಹೇಳಿ ಮುಂದೆ ಬೋರ್ಡ್ ಹಚ್ಚಿಸುವ ವ್ಯವಸ್ಥೆ ಮಾಡಿ ಐತಿಹಾಸಿಕ ಪ್ರಜ್ಞೆಯನ್ನು ಮೆರೆದರು. ಇದನ್ನು ಮುಂದೆ ತೋಂಟದಾರ್ಯ ಮಠದ ಶ್ರೀ ಎಸ್ ಎಸ್ ಪಟ್ಟಣಶೆಟ್ಟಿ ಆಡಳಿತಾಧಿಕಾರಿಗಳು ಅವರಿಗೆ ಹೇಳಿದ್ದು ನೆನಪಿದೆ. ಇದನ್ನು ಸ್ವತಃ  ಎಸ್ ಎಸ್ ಪಟ್ಟಣಶೆಟ್ಟಿ ಆಡಳಿತಾಧಿಕಾರಿಗಳು ನನಗೆ ಹೇಳಿದರು.

 ಅಸ್ಪಷ್ಟವಾಗಿದ್ದ ಸಂಗತಿ ಮತ್ತು ಕೆಲವರಿಗೆ ಮಾತ್ರ ಗೊತ್ತಿದ್ದ ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳ ಗದ್ದುಗೆ ಅಧಿಕೃತವಾಗಿ ದಾಖಲಾಗುವಲ್ಲಿ ಲಿಂಗೈಕ್ಯ ಡಾ ಸಿದ್ಧಲಿಂಗ ಸ್ವಾಮಿಗಳು ಮತ್ತು ಅದನ್ನು ಮುಕ್ತ ಮನಸ್ಸಿನಿಂದ ಹೇಳಿಕೊಳ್ಳುತ್ತಿದ್ದರು.


About The Author

2 thoughts on ““ಸಾವಿರದ ಶರಣರು ಮಾಲಿಕೆ” ಗುರುವಿನ ಗುರು ಯಳಂದೂರು ಶ್ರೀ ಬಸವಲಿಂಗ ಶಿವಯೋಗಿಗಳು”

Leave a Reply

You cannot copy content of this page

Scroll to Top