ಕಾವ್ಯ ಸಂಗಾತಿ
ವಿಜಯಲಕ್ಷ್ಮಿ ಹಂಗರಗಿ
“ಮತ್ತೆ ಹುಟ್ಟಿ ಬಾ”


ಹೋಮ ಹವನ ಮಾಡುವರು
ಅಂದ ಶ್ರದ್ದೆ ಆಚಾರ ಅನಾಚಾರ
ಪ್ರಾಣಿ ಮಕ್ಕಳ ಬಲಿ ಕೊಡುವರು
ಅರಿವಿದ್ದು ಮೌಢ್ಯ ನೆಚ್ಚಿಹರು
ಇಂಥ ಕಂದಾಚಾರ ತೊಡೆದು
ಹಾಕಲು ಜಗಜ್ಯೋತಿ ಬಸವಣ್ಣ
ಮತ್ತೆ ಹುಟ್ಟಿ ಬಾ…
ಮನ ಶುದ್ಧ ವಿಲ್ಲ
ಚಿತ್ತ ಶುದ್ದ ವಿಲ್ಲ
ವೇಷ ಭಾಷೆಯಲ್ಲ ವಿಷ ಪಾಶ ಹರಿಯುವುದು ನಿತ್ಯ
ಪರಿಶುದ್ಧ ಸ್ವತಂತ್ರರು ಆದ
ಬಸವಣ್ಣ ಮತ್ತೆ ಹುಟ್ಟಿ ಬಾ…
ಸತ್ಯ ಶುದ್ಧವಿಲ್ಲದ ಕಾಯಕದ ಮಧ್ಯೆ ಆಸೆ ಎಂಬ ಭವದ ಬೀಜ ಬಿತ್ತಿ
ಹಲಬೂತಿಹರು ಧನ ಕನಕಕ್ಕಾಗಿ
ಬಕಾಸುರ ರಂತೆ ಬಾಚುವರು
ಕಾಯಕ ಯೋಗಿ ಬಸವಣ್ಣ
ಮತ್ತೆ ಹುಟ್ಟಿ ಬಾ…
ಕೊಲೆ ಸುಲಿಗೆ ಮಾಡುವರು
ಕ್ರೂರಿಗಳು ಜಾತಿ ಮತ ಲಿಂಗಗಳ ಎಣಿಸುವರು ನಿತ್ಯ ನಿರಂತರ
ಭೇದ ಭಾವ ಅಳಿಸಿ ಹಾಕಲು
ಕ್ರಾಂತಿಯೋಗಿ ಬಸವಣ್ಣ
ಮತ್ತೆ ಹುಟ್ಟಿ ಬಾ…
ಕಾಯಕ ನಿಷ್ಠೆ ತೋರಿ
ಧರ್ಮದ ಬುನಾದಿಯಾಗಿ
ವಚನ ತತ್ವ ಸಂಸ್ಕೃತಿ ಪರಂಪರೆ
ಜಗಕೆ ಅರುಹಲು
ಮಹಾ ಮಾನವತಾವಾದಿ
ಬಸವಣ್ಣ ಮತ್ತೆ ಹುಟ್ಟಿ ಬಾ…
ವಿಜಯಲಕ್ಷ್ಮಿ ಹಂಗರಗಿ




Nicee madum