ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com


ಏನೇ ಏನಿವತ್ತು ಊಟಕ್ಕೆ  
ಊಟಕ್ಕೇನಮ್ಮ
ಎಲ್ಲರ ಮನೆಯ  ಸಹಜ ಪ್ರಶ್ನೆ
ಅದಕ್ಕವಳದು ಹರ ಸಾಹಸ
ನಿನ್ನೆಯದು ಇಂದಾಗೋಲ್ಲ
ಪ್ರತಿದಿನವೂ ಹೊಸದಿರಬೇಕಲ್ಲ
ಉಪ್ಪು ಖಾರ ಹದವಾಗಿರಲು
ಅವಳ ಪರಿವೆಯಿಲ್ಲ
ಅದು  ತಪ್ಪಿದರೆ ಅವಳಿಗೇನೆ  ಎಲ್ಲ
ಆ ಸಿಟ್ಟಿನಲ್ಲಿ  ಮಾಡೋಲ್ಲ
ಅವಳು ರೊಟ್ಟಿ
ಬಡೀತಾಳೆ ಸಿಟ್ಟಿನಲ್ಲಿ ತಟ್ಟಿ ತಟ್ಟಿ
ಸೇರಿಸೋಲ್ಲ ಪಲ್ಯಕ್ಕೆ ಉಪ್ಪು ಖಾರ
ಸುರೀತಾಳೆ ಭರ ಭರ ಕೋಪದಬ್ಬರ  
ಎಲ್ಲರೂ ಹೋಟಲ ಮೊರೆ
ರುಚಿಯಿರದ  ತಿಂಡಿಗೆ  ಟಿಪ್ಸ ಬೇರೆ  
ನೀ ಮಾಡಿದ  ಚಹಾ ನಿನ್ನಷ್ಟೇ ಸಿಹಿ
ಚಪಾತಿ ನಿನ್ನತರಹ ಮೃದು
ನಿನ್ನ ಕೈ ರುಚಿ ಜೇನಿನಂತೆ
ಅಂತ   ನೀವೂಮ್ಮೆ ಪಿಸುಗುಟ್ಟಿದರದೆ ಅವಳಿಗೆ ಹೆಮ್ಮೆ  
ಹೊಸ ಹುಮ್ಮಸ್ಸಿನೊಂದಿಗೆ ಪ್ರವೇಶಿಸುವಳವಳು
ಅಡುಗೆ ಮನೆಯ ಮತ್ತೊಮ್ಮೆ
ಹೊತ್ತು ನೋಡಿ  ಈ ಎಲ್ಲವನು
ಒಂದು ದಿನವಾದರೂ
ಮರುದಿನವೇ ತೇನಾಲಿ ರಾಮಕೃಷ್ಣನ ಬೆಕ್ಕಿನಂತೆ  
ನೀವು ಪರಾರಿ                
ನಿಟ್ಟುಸಿರಿನೊಂದಿಗೆ
ಕೊನೆಗಂದೆ
ಅಬ್ಬಾ!!  ನೀನೆ ಸರಿಸಾಟಿ ಇದಕೆಲ್ಲ.


About The Author

Leave a Reply

You cannot copy content of this page

Scroll to Top