ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಪ್ರೇಮದಲ್ಲಿ
ನಾನು ತಪ್ಪು ಮಾಡಿದ್ದು ನಿಜ
ಆದರೆ
ನೀನು ನನ್ನನ್ನು ತಿದ್ದಬಹುದಿತ್ತು..!
ಹಾಗೂ
ಆ ಎಲ್ಲಾ ಅಧಿಕಾರವೂ
ನಿನ್ನ ಬಳಿಯೇ ಇದ್ದವು..!

ನೀನೋ ತಿದ್ದುವ ಭರದಲ್ಲಿ
ಸ್ವತಃ ತಪ್ಪು ಮಾಡಿಬಿಟ್ಟೆ
ಈಗ ನೀನು ಕೂಡ ನನ್ನಷ್ಟೇ
ತಪ್ಪಿತಸ್ಥಳು..!

ಪ್ರೇಮದ ಕೋರ್ಟಿನಲ್ಲಿ
ಆತ್ಮಸಾಕ್ಷಿಯನ್ನು ಮುಂದಿರಿಸಿಕೊಂಡು
ಖಾಲಿ ಮಾತುಗಳ ವಕೀಲಿಕೆಯನ್ನು
ನಿನ್ನ ವಿರುದ್ಧ ನಡೆಸಲಾರೆ
ಆಗಾಗಿ
ನನ್ನ ತಪ್ಪುಗಳನ್ನು ಒಪ್ಪಿಕೊಂಡು
ಪ್ರಾಯಶ್ಚಿತ್ತವೆಂಬಂತೆ
ಪ್ರೇಮದ ಸೆರಮನೆಯೊಳಗೆ
ನಗುತ್ತಲೇ
ಜೀವಾವಧಿ ಶಿಕ್ಷೆಗೆ ಒಳಗಾಗಿದ್ದೇನೆ..!

ನೀನೋ
ಮತ್ತೊಬ್ಬರ ಜಾಮೀನಿನಡಿಯಲ್ಲಿ
ಹಳೆಯ ಪ್ರೇಮ ಪ್ರಕರಣವೊಂದರ
ಆರೋಪಗಳೆಲ್ಲಾವನ್ನು
ತಳ್ಳಿ ಹಾಕುತ್ತಾ
ನಿರಪರಾಧಿಯ ಸೋಗಿನಲ್ಲಿ
ಬಿಡುಗಡೆಗೊಂಡ
ಶಹರವೊಂದರ ಹಳೆಯ ಖೈದಿಯಂತೆ
ಎಲ್ಲೆಲ್ಲೋ ಓಡಾಡುತ್ತಿರುವೆ..!

ವಾಸ್ತವವೇನೆಂದರೆ
ಪ್ರೇಮದ ಅಸಲಿಯತ್ತಿನಲ್ಲಿ
ದಾವೆ ಹೂಡಲು
ಮೇಲ್ಮನವಿಯನ್ನು ಸಲ್ಲಿಸಲು
ಯಾವ ಕೋರ್ಟುಗಳೂ ಇಲ್ಲ
ಒಮ್ಮೆ ತಪ್ಪು ಮಾಡಿದರೆ ಮುಗಿಯಿತು
ಸಾಯಬೇಕು ಅಥವಾ
ಸಾಯುವ ತನಕ ಅದೇ ನೆನಪುಗಳನ್ನು
ಎದೆಯಲ್ಲಿಟ್ಟುಕೊಂಡು ನರಳಬೇಕು..!

ಏಕೆಂದರೆ
ಈ ಹಾಳು ಪ್ರೇಮ ಗ್ರಂಥಗಳಲ್ಲಿ
ಯಾವ ಪ್ರಕರಣಗಳಿಗೂ
ಆತ್ಮಸಾಕ್ಷಿಗಳ ಹೊರತಾಗಿ
ಯಾವ ಕಾಯ್ದೆಗಳಾಗಲೀ
ಕಲಮ್ಮುಗಳನ್ನಾಗಲೀ
ಯಾರೊಬ್ಬರೂ ಕೂಡ ಇಲ್ಲಿಯವರೆಗೆ ಬರೆಯಲಾಗಿಲ್ಲವೆಂಬುದೆ
ಇಲ್ಲಿನ ಒಂದು ಸೋಜಿಗ..!


About The Author

Leave a Reply

You cannot copy content of this page

Scroll to Top