ಕಾವ್ಯ ಸಂಗಾತಿ
ತಾತಪ್ಪ.ಕೆ.ಉತ್ತಂಗಿ
“ಬಟ್ಟಕಂಗಳ ನಿರೋಷೆ”


ಅವಳು ಅವನಿಯೊಳಗಿನ
ಅಪರೂಪದ ಅನುರೂಪೆ,
ನುಡಿಗಂಪಿನ ಇಳೆತಂಪಿನ
ಎಳೆಗಣ್ಣಿನ ಕೆಂಬಣ್ಣದ ಆಲಾಪೆ.
ತನ್ನೋಟದಲಿ ನುಂಗುವಳು
ಅನಂತಲೋಕದ ಇಳೆಯನು,
ವಾವ್ ವಾರೇ ನೋಟದ ಹುಡುಗಿ
ನಾಚುವಳು ಕಣ್ಣಂಚಿನಲ್ಲಿ,
ಲಾಸ್ಯಬಿಂಬದ ಬೆಡಗಿ
ಕಣ್ಣು ಚುಮುಕಿಸುವ ಹುಡುಗಿ
ಬಳಕುವಳು ತುಟಿಯಂಚಿನಲಿ.
ಅವಳ ಕಣ್ಣಂಗಳದ ಕಾಂತಿಯ
ಹೊಳಪು,
ಸಾವಿರದ ಸಹಸ್ರ ನೆನಪುಗಳ ಬುತ್ತಿ .
ಗಾಢ ಪ್ರೇಮದ,ಕಡುದುಃಖ
ಯಾನದ ಅನುರುಕ್ತಿ,
ಸುಮಧುರ ಸಮ್ಮೋಹನದ
ಸಾತ್ವಿಕ ಸರಸದ ಕಾಂತಿಯುಕ್ತಿ.
ಕಣ್ಣೋಟದ ಬೆಸುಗೆಯಲಿ
ನಂಬಿಗೆ ಧೈರ್ಯದ ವಿಶ್ವಾಸ,
ಅವಳೆದುರಿನ ಕಪಟತನದ ಮನಕ್ಕೆ
ನಿಂತು ಕುಂತು ಆಯಾಸದಿ
ಭೋರ್ಗರೆಯುವ
ಉಸಿರೋಟದ ಶ್ವಾಸ.
ದ್ವಂದ್ವ ವಿಚಲಿತ ವಿರಹದ
ವಿರಸದ ನಯನನೋಟದಿಂದ
ಮುಷ್ಕರದ ಅವಿಶ್ವಾಸ .
ಚಂದ್ರಮುಖಿ ನೀಲಸಖಿಯ
ಕಂಗಳಲಿ, ಒಮ್ಮೊಮ್ಮೆ
ಸದ್ದಿಲ್ಲದೆ ಸುಡುವ ಅಗ್ನಿಜ್ವಾಲೆ,
ಮತ್ತೊಮ್ಮೆ ಮಗದೊಮ್ಮೆ
ಸಾಮರಸ್ಯದ ಸಂಪ್ರೀತಿಯ
ಶಾಂತತನ್ಮಯದ ಪ್ರೇಮಲೀಲೆ.
ಕಣ್ಣಲ್ಲೇ, ಕ್ರಾಂತಿಯಿಂದ
ಕಣ್ ಬಾಣದಿಂದ ಕೊಲ್ಲುವವಳು
ಕಂಗಳಲ್ಲೇ ಕಳಿತು ಮಿಳಿತು
ಕಾಡದೇ ಕುಂತವಳು
ನಯನಗಳಲ್ಲೇ ನಾಚಿ
ನೀರಾಗಿ ನಿಂತವಳು
ಅಕ್ಷಿಗಳಲ್ಲೇ ಸಾಕ್ಷಿಯಾಗಿ
ಸೋಲು ಗೆಲುವಿನ
ದರ್ಶನಿಯಾದವಳು
ನೇತ್ರದಲ್ಲೇ ತಣಿದು ಮಣಿದು
ಮಧುರಯಾತ್ರೆ ಹೊಂಟವಳು.
ಬಟ್ಟಕಂಗಳ ಚೆಲುವೆಯ
ಪ್ರೇಮಕಂಗಳ ಭಾಷೆ,
ಹುಬ್ಬಕೆಳಗಿನ ಕಪ್ಪಂಗಳದ
ಪಸರಿಕೆಯ ಪಕ್ವ ಪರಿಭಾಷೆ.
ಭಾವಗಳು ಎದೆಯುಕ್ಕಿದಾಗ ಮಾತಿಲ್ಲದ ,ಸದ್ದಿಲ್ಲದ,
ಮೌನದ ಕಣ್ಸನ್ನೆಯ ಪರೀಷೆ.
ಕತ್ತಲಲ್ಲಿಯೂ ಮಿನುಗಿ
ಹೃದಯದಲಿ ಗುನುಗುವ
ಹೊಳೆವ ಅಕ್ಷಿಗಳ ನಿರೋಷೆ.
ತಾತಪ್ಪ.ಕೆ.ಉತ್ತಂಗಿ




Wonderful ❤️
ಕವನ ತುಂಬಾ ತುಂಬಾ ಸೊಗಸಾಗಿ ಮೂಡಿಬಂದಿದೆ ಸರ್ , ಪ್ರತಿ ಪದಗಳ ಜೋಡಣೆಯoತು ಓದುಗರಿಗೆ ಮನಮುಟ್ಟುವಂತಿದೆ ಸರ್
Wonder and beautiful kavana sir
Beautiful poem sir
ಅಂದುಳ್ಳ ಚೆಲುವೆಯರೂ ನಾಚಿ ನೀರಾಗುವ ಕವನ
Beautiful ❤️
ಸೂಪರ್ ಸರ್ ❤️
Beautiful sir
Super sir
Nice sir
Super sir ❤️
Superr ಅಣ್ಣ ❤️
ಪ್ರೀತಿ ಎಂದರೆ ಏನು ಎಂದು ಸೊಗಸಗಿ ತಿಳಿಸುವ ಒಂದು ಸುಂದರವಾದ ಕವಿತೆ ಆಗಿದೆ ಒಂದು ಪ್ರೀತಿಯನ್ನು ತುಂಬಾ ಮಧುರವಾಗಿ ತಿಳಿಸುವ ಮತ್ತು ಸುಂದರವಾದ ಬಾವನೆಗಳನ್ನು ಒಳಗೊಂಡಿದೆ ಹಾಗೂ ಒಬ್ಬ ಪ್ರೇಯಸಿ ಮನ ಮುಟ್ಟುವಂತಹ ಕವಿತೆ ಆಗಿದೆ ❤️
ಅದ್ಬುತ ಸಾಲುಗಳು sir
Super brother
ಪದಗಳ ಪೋಣಿಸಿ, ಕವಿತೆಯ ಜೋಡಿಸಿ, ಪ್ರೇಯಸಿ,ಮನ ಸೆಳೆಯುವ
ಸಾಹಸಿ… ಮಾಯೇಲೋಕದ ಮಾಯಾವಿ… ಕವಿತೆಗೆ.. ಮನ ಸೋಲದೆ ಇರುವಳೆ ಯಾವುದೇ ಸ್ತ್ರೀ…..sir
ಅದ್ಭುತವಾದ ಕವಿತೆ ಸರ್