ಕಾವ್ಯ ಸಂಗಾತಿ
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ
“ನನ್ನವರು ಸಾಯುವುದು“


ನನ್ನವರು ಸಾಯುವುದು
ಗುಂಡಿನಿಂದಲ್ಲ
ಎದೆ ಹಣೆ ಸೀಳಿದ್ದು
ಪಿಸ್ತೂಲು ಬಂದೂಕಿನಿಂದಲ್ಲ.
ರುಂಡ ಮುಂಡ ಕತ್ತರಿಸಿದ್ದು
ಚಾಕು ಲಾಂಗುಗಳಲ್ಲ.
ಸತ್ಯವಂತ ಸಾಯುವುದು
ದುಷ್ಟ ಹಂತಕರಿಂದಲ್ಲ.
ಸಜ್ಜನ ಹೇಡಿಗಳಿಂದ
ಅವರು ಇದ್ದಾಗ ಬೆಂಬಲಿಸಲಿಲ್ಲ.
ಬೆನ್ನು ತಟ್ಟಿ ಕೈಜೋಡಿಸಲಿಲ್ಲ.
ಸತ್ತಾಗ ಬಿಕ್ಕಿ ಬಿಕ್ಕಿ ಅಳುತ್ತೇವೆ.
ಮಾನವ ಸರಪಳಿ ಪ್ರತಿಭಟನೆ.
ಟಿವಿ ಪತ್ರಿಕೆಯಲ್ಲಿ ಭಾರಿ ಸುದ್ಧಿ
ಆಕ್ರೋಶ ಅಬ್ಬರ
ಹಂತಕರ ಹಿಡಿಯಲು ಸಮಿತಿ
ಸರಕಾರ ಮಲಗುತ್ತದೆ.
ಕೊಳಕು ವ್ಯವಸ್ಥೆ ನಾವೂ ಮಲಗುತ್ತೇವೆ .
ಸತ್ಯವಂತ ಸಾಯುತ್ತಾನೆ.
ಬದುಕಿನಿದ್ದಕ್ಕೂ ಹೋರಾಡುತ್ತಾನೆ
ಸತ್ಯ ಶಾಂತಿ ಹಕ್ಕಿಗಾಗಿ.
ಇದ್ದಾಗಲೂ ಒಬ್ಬಂಟಿಗ
ಸತ್ತಾಗಲೂ ಒಬ್ಬನೇ
ಸಾವು ಬೆನ್ನು ಬಿಡಲಿಲ್ಲ.
ಸತ್ತವರಿಗೆ ಸಂತನ ಪಟ್ಟ ಕಟ್ಟಿ.
ಕೊರಳಲ್ಲಿ ಬೋರ್ಡ್ ಹಾಕುತ್ತೇವೆ.
ಅವರು ಸಾಯುವುದು ಗುಂಡಿನಿಂದಲ್ಲ.
ನಮ್ಮ ಉದಾಸೀನ ಮೌನದಿಂದ.
ಡಾ.ಶಶಿಕಾಂತ.ಪಟ್ಟಣ ರಾಮದುರ್ಗ




ಅತ್ಯುತ್ತಮ ಕವನ ಸರ್
ಅತ್ಯಂತ ಮನ ಕಲಕುವ ಕವನ
ಹೌದು… ನಿಜ
ವಾಸ್ತವದ ಕನ್ನಡಿಯನ್ನು ತೋರಿಸಿ ದ್ದೀರಿ
ಎಷ್ಟು ಅದ್ಭುತ ಅನುಭವದ ಕವನ ಕಾವ್ಯ
ಸುಂದರ ಪ್ರಜ್ಞೆ ಸರ್
ಸತ್ಯ ಹೇಳುವುದೇ ಪಾಪವೆನಿಸಿದೆ ನಿಮ್ಮ ಕವನ ಓದಿ
Excellent poem
ಸಾಯುವುದು ಗುಂಡಿನಿಂದಲ್ಲ ಉದಾಸೀನದಿಂದ ಎಂಬುದು ನಿಜಕ್ಕೂ ಸತ್ಯವಾದ ಮಾತು .
Very Excellent poem sir.regards
ನಿಜಕ್ಕೂ ಸತ್ಯವಾದ ಸಂಗತಿ ನೇರ, ದಿಟ್ಟ ನುಡಿ
ಅತ್ಯುತ್ತಮ ಕವನ ಸರ್
ಪ್ರಕಟ ಮಾಡಿದ ಮಧು ಸರ್ ಗೆ ನಮಸ್ಕಾರ
Very beautiful poem Sir
ಕ್ರಾಂತಿಕಾರಿ ಚಳವಳಿಯ ಅಸಹಾಯಕ ಕವನ ಸರ್ ಲಾಲ್ ಸಲಾಂ