ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಒಂದು ಮಾತು :
ಕೆಲ ದಿನಗಳ ಹಿಂದೆ ದೇವರನಾಡು ಕೇರಳ ರಾಜ್ಯದಲ್ಲಿ,
ಸಾಮಾಜಿಕ ಜಾಲತಾಣದ ಹುಚ್ಚು ಮೋಹದಿಂದ ಯುವತಿಯೊಬ್ಬಳ ಹುಚ್ಚಾಟಕ್ಕೆ, ಒಂದು ಮನೆಯ ‘ಬೆಳಕು’ವಾಗಿದ್ದ ‘ದೀಪಕ್’ ಎನ್ನುವ ಯುವಕ ‘ಆತ್ಮಹತ್ಯೆ’ ಮಾಡಿಕೊಂಡಿರುವ ವಿಚಾರ ನಿಮಗೂ ಗೊತ್ತಿರಬೇಕು.
    ಈ ಯುವತಿಯ ಸುಳ್ಳು ಆರೋಪದಿಂದ ಒಂದು ಗಂಡು ಜೀವ ಹೋಗಿದೆ…. ಪ್ರಜ್ಞಾವಂತ ಜನತೆ ಈ ಯುವತಿಗೆ ಕಠಿಣ ಶಿಕ್ಷೆ ನೀಡಬೇಕೆಂದು ಒತ್ತಾಯ ಮಾಡುತ್ತಿದ್ದಾರೆ.
   ಇಂದು ಈ ಆತ್ಮಹತ್ಯೆ ಪ್ರಕರಣದಲ್ಲಿ ಯುವತಿಯ ‘ಬಂಧನ’ವಾಗಿದೆ.ಆದರೆ ದೇಶದ ಕಾನೂನು ವ್ಯವಸ್ಥೆ ಈ ತಪ್ಪಿಗೆ ಏನು ‘ಶಿಕ್ಷೆ’ ನೀಡುತ್ತದೆ ಎಂಬುವುದು ಗೊತ್ತಿಲ್ಲ…!
ಯಾವುದೇ ತಪ್ಪು ಮಾಡದೇ ಸಮಾಜದಲ್ಲಿ ತಲೆ ತಗ್ಗಿಸಿ ನಿಲ್ಲುವಂತಹ ದಿನಗಳು ಬಂದರೇ, ಉತ್ತಮ ಗುಣ-ನಡತೆಯನ್ನು ಹೊಂದಿರುವ ದೀಪಕ ನಂತಹ ಒಳ್ಳೆಯ ಗುಣವಂತ ಮಂದಿ  ನಾಚಿಕೆಯಿಂದ ‘ಆತ್ಮಹತ್ಯೆ’ಯಂತಹ ಕೆಟ್ಟ
ನಿಧಾ೯ರವನ್ನು ತೆಗೆದುಕೊಳ್ಳುತ್ತಾರೆ… ಜೊತೆಗೆ ಈಗ ಸಾಮಾಜಿಕ ಜಾಲತಾಣ ಗಳು  ಉರಿಯುವ ಬೆಂಕಿಗೆ ತುಪ್ಪ ಸುರಿದ ರೀತಿಯಾಗಿದೆ…!
   ಒಂದು ಹೆಣ್ಣು’ ಜನಪ್ರಿಯತೆ’ ಹೊಂದಲು ಮಾಡಿದ ತಪ್ಪಿಯಿಂದ, ಒಂದು ಕುಟುಂಬವೇ ಕಣ್ಣೀರು ಸುರಿಸುತ್ತಿದೆ… ಎಲ್ಲಾಡೆ ಈ ಪಾಳು ಜನ್ಮದ ಹೆಣ್ಣಿನ ಮೇಲೆ ‘ಶಾಪ’ ದ ಮಳೆ ಸುರಿಸುತ್ತಿದೆ…!ಆದರಿಂದ ಈ ಪ್ರಕರಣವನ್ನು ಧೀಘ೯ವಾಗಿ ಎಳೆಯುವುದು ಇಲ್ಲ..! ಬದಲಾಗಿ ಈ ಪ್ರಕರಣದ ಸರ್ವ ದುರಂತಕತೆಯನ್ನು ಎರಡು ಗೆರೆಯ ಕವಿತೆಯೊಂದಿಗೆ ಮುಗಿಸುವೆ..!
ಇದು ಮಲಯಾಳಂ ಕವಿಯೊಬ್ಬರು ಬರೆದ ಕವಿತೆಯ ‘ಅನುವಾದ ‘ವಾಗಿದೆ…!
 ದುರಂತ..!
  ‘ಸ್ತನ’  ತಾಗಿ
ಒರ್ವನ ಸಾವು…!!?.


About The Author

Leave a Reply

You cannot copy content of this page

Scroll to Top