ಕಾವ್ಯ ಸಂಗಾತಿ
ದಾಕ್ಷಾಯಣಿ ಶಂಕರ ಹುಣಶ್ಯಾಳ
“ಸಂಕ್ರಮಣ”


ಒಮ್ಮೆ ಎಳ್ಳು ಒಮ್ಮೆ ಬೆಲ್ಲ
ಬದುಕಿದು ನೋವು ನಲಿವುಗಳ ಸಂಕ್ರಮಣ
ಇಲ್ಲಿ ಬೇಲಿ ಅಲ್ಲಿ ಹಾದಿ
ಬದುಕಿದು ಪಥ ಬದಲಿಸುವ ರಥಸಪ್ತಮಿ
ನಿನ್ನೆ ಶಿಶಿರ ಎಂದು ವಸಂತ
ಬದುಕಿದು ಹಲವು ಋತುಗಳಲ್ಲಿ ಪರಿಭ್ರಮಣ
ಮುಳುಗುವ ಸೂರ್ಯ ಹೊತ್ತುವ ದೀಪ
ಬದುಕಿದು ಕತ್ತಲೆ ಬೆಳಕಿನ ನಡುವಿನ ಆವರ್ತನ
ಅಲ್ಪ ಸುಖ ಸಾಕಷ್ಟು ಕಷ್ಟ
ಬದುಕಿದು ಸಮ್ಮಿಶ್ರ ನಗರ ಸಂಕಲನ
ಸಾಸಿವೆಯಷ್ಟು ನಗು ಸಾಗರದಷ್ಟು ಅಳು ಬದುಕಿದು ಪ್ರತಿಪಕ್ಷ ಹೊಂದಾಣಿಕೆಯ ಹೂರಣ
ಆ ಕಣಿವೆ ಈ ಬೆಟ್ಟ
ಬದುಕಿದು ದಿನನಿತ್ಯ ಇಳಿದೇರುವ ಚಾರಣ
ಒಮ್ಮೆ ಜನನ ಒಮ್ಮೆ ಮರಣ
ಬದುಕಿದು ವಿಧಿ ವಿಲಾಸದ ಸಂಕೀರ್ತನ
ದಾಕ್ಷಾಯಣಿ ಶಂಕರ ಹುಣಶ್ಯಾಳ




Very meaningful lines mam