ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಎದೆಯೊಳಗೆ ನನ್ನ ಬಚ್ಚಿಟ್ಟುಕೊ,
ಉಸಿರ ಪಿಸುಮಾತ ಹಾಗೆ,
ಕಣ್ಣಿನಲಿ ನನ್ನ ಕಾಯ್ದಿರಿಸಿಕೊ, ರೆಪ್ಪೆಗಳ ಕಾವಲ ಹಾಗೆ

​ನನ್ನೆಲ್ಲ ನೋವುಗಳ ಮರೆಸಿಬಿಡು, ನಿನ್ನೊಂದು ಕಿರುನಗೆಯಲಿ,
ಮತ್ತೆ ಹುಟ್ಟಿ ಬರುವೆ ನಾನು, ಮುಂಜಾವಿನ ಹೊಸ ಕಿರಣದ ಹಾಗೆ

​ಹೃದಯದ ಈ ಬಡಿತದಲಿ ಕೇಳಿಸಲಿ ಬರೀ ನಿನ್ನದೇ ಹೆಸರು
ಜೊತೆಯಾಗಿ ನಡೆದು ಬರುವೆ ನಾನು, ನಿನ್ನ ನೆರಳಿನ ಹಾಗೆ

​ಜಗದ ಈ ಜಂಜಾಟದಲಿ ನಾ ಕಳೆದು ಹೋದರೂ ಚಿಂತೆಯಿಲ್ಲ
ಮರಳಿ ಸೇರುವೆ ನಿನ್ನ ಮಡಿಲನು, ಸಂಜೆಯ ಹಕ್ಕಿಯ ಹಾಗೆ

​ ಬರೆಯುವೆ ನಿನ್ನ  ಪ್ರೀತಿಯ ಹೆಸರ  ಪುಟ ಪುಟದ ಸಾಲಿನಲಿ
ಅಳಿಯದಂತೆ ಉಳಿದುಬಿಡು ನೀನು, ಕವಿತೆಯ ಮೌನದ ಹಾಗೆ …


About The Author

1 thought on “ಡಾ ವಿಜಯಲಕ್ಷ್ಮಿ ಪುಟ್ಟಿ ಅವರ ಕವಿತೆ “ಬಚ್ಚಿಟ್ಟುಕೋ””

  1. ಉತ್ತಮ ಕವನ ವಿಜಯಲಕ್ಷ್ಮಿ ನಿಮ್ಮ ಕನಸು ನನಸಾಗುತ್ತದೆ
    ನಿಮ್ಮ ಆಸೆ ಈಡೇರಲಿ

Leave a Reply

You cannot copy content of this page

Scroll to Top