ಕಾವ್ಯ ಸಂಗಾತಿ
ಲಕ್ಷ್ಮೀದೇವಿ ಪತ್ತಾರ
“ಮುಂದುವರೆದಿದೆ”


ಹೊಸದೆನ್ನುವುದು ಈ ಜಗದಲ್ಲಿ
ಯಾವುದಿದೆ ?
ಗಮನವಿಟ್ಟು ನೋಡಿದರೆ
ಎಲ್ಲವೂ ಹಳೆಯದರ ಹೊಸ ರೂಪವಷ್ಟೆ
ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳು
ಸತ್ತಿರುವುದು ಹಳೆಯ ಸಂಬಂಧ
ಹುಟ್ಟುವುದು ಮತ್ಯಾವುದೋ ಹೊಸ ಬಂಧ
ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು ಆಗದು
ಸೃಷ್ಟಿಯು ಇಲ್ಲ , ಲಯವೂ ಇಲ್ಲ
ಅದೇ ಮುರಿದು ಕಟ್ಟುವ ( ಕಾರ್ಯ )ದೃಷ್ಟಿ
ಕೆಟ್ಟದ್ದು ಕಳೆಯುವುದಿಲ್ಲ
ಒಳ್ಳೆಯದು ಅಳಿಯುವುದಿಲ್ಲ
ಕೊರಗಿ,ಮರುಗಲು ಕಾರಣವೇ ಇಲ್ಲ.
ಈಗ ಇರುವುದೆಲ್ಲವೂ ಮೊದಲೂ ಇತ್ತು
ಮತ್ತೆ ಮತ್ತೆ ಮುಂದುವರಿಯುವದು
ಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣಮುಂದುವರಿದಿದೆ
ಹೊಸದೆನ್ನುವುದು ಈ ಜಗದಲ್ಲಿ
ಯಾವುದಿದೆ ?
ಗಮನವಿಟ್ಟು ನೋಡಿದರೆ
ಎಲ್ಲವೂ ಹಳೆಯದರ ಹೊಸ ರೂಪವಷ್ಟೆ
ಹುಟ್ಟುವುದು ಅದೇ ಹಳೆಯ ಆತ್ಮ ಸಾಯುವುದು ಅವೆ ಪಂಚಭೂತಗಳು
ಸತ್ತಿರುವುದು ಹಳೆಯ ಸಂಬಂಧ
ಹುಟ್ಟುವುದು ಮತ್ಯಾವುದೋ ಹೊಸ ಬಂಧ
ಇದ್ದದ್ದನ್ನು ಲಯ ಮಾಡಲು ಬಾರದು ಇಲ್ಲದನ್ನು ಸೃಷ್ಟಿಸಲು ಆಗದು
ಸೃಷ್ಟಿಯು ಇಲ್ಲ , ಲಯವೂ ಇಲ್ಲ
ಅದೇ ಮುರಿದು ಕಟ್ಟುವ ( ಕಾರ್ಯ )ದೃಷ್ಟಿ
ಕೆಟ್ಟದ್ದು ಕಳೆಯುವುದಿಲ್ಲ
ಒಳ್ಳೆಯದು ಅಳಿಯುವುದಿಲ್ಲ
ಕೊರಗಿ,ಮರುಗಲು ಕಾರಣವೇ ಇಲ್ಲ.
ಈಗ ಇರುವುದೆಲ್ಲವೂ ಮೊದಲೂ ಇತ್ತು
ಮತ್ತೆ ಮತ್ತೆ ಮುಂದುವರಿಯುವದು
ಕಾಲಚಕ್ರದಲ್ಲಿ ಹಳೆಯದು ನವನವೀನ ಹೊಸದು ಹಳೆಯದಕ್ಕೆ ಹಚ್ಚಿದ ಬಣ್ಣ
ಲಕ್ಷ್ಮೀದೇವಿ ಪತ್ತಾರ




ಒಳ್ಳೆಯ ಕವಿತೆ ಓದಲು ನೀಡಿರುವಿರಿ ಸಹೋದರಿ
Super mdm
Very nice mam