ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com
ಕಾವ್ಯಯಾನ

“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ

ಕಾವ್ಯ ಸಂಗಾತಿ ವೈ.ಯಂ.ಯಾಕೊಳ್ಳಿ “ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ಇಲ್ಲಿ ಇದ್ದ ಮೇಲೆ ಏನೂತೊರೆಯಲಾಗದುಬೆನ್ನತ್ತಿ ಬಂದಿರುವದನುನಮ್ಮದೆ ಎಂಬುದಮರೆಯಬಾರದು ಬಿಡಲೆನು ಮೂರು ದಿನದಸಂತೆಯಲ್ಲ ಜೀವನದಾಟಬಡಿದಾಡಿ ಮುಗಿಸಲುಅಪರಿಚಿತರೊಡನೆ ಜಗಳವಲ್ಲಸಂಸಾರ ಕೂಟ ಒಡನೆ ಇದ್ದವರು ಬಿಡದೆಕಾಡುವರು ನಿಜದ ಮಾತುಅನಿವಾರ್ಯ ಹೊಂದಿಕೆಯೆಇಲ್ಲಿ‌ ಮುಖ್ಯ ಧಾತು ಯಾರನೆ ದೂಷಿಸುತ ಏನನೋನಿಂದಿಸುತ ಅತ್ತರೇನು ಬಂತುಹೊತ್ತು ತಂದ ತಟ್ಟೆಯಅನ್ನವ ನಾವೇ ಉಣ್ಣಬೇಕು ಎನಿತು ಬಡಿದಾಡಿದರೂ.ಎಷ್ಟು ಕಾದಾಡಿದರೂಅಂತಿಮ ನಿರ್ಣಯವಾಗದ ಯುದ್ದಯಾವ ನ್ಯಾಯಾಲಯದಲೂದಾವೆ ಹೂಡಿದರೂ ಉತ್ತರಸಿಗದ ವ್ಯಾಜ್ಯ ಹೃದಯದ‌ ಪ್ರಶ್ನೆಗಳಿಗುತ್ತರವಹೃದಯವೆ ಕೊಡಬೇಕುದೊರಕದು‌ ಬೇರೆಡೆಗೆಎನಿತು ಹುಡುಕಿದರೂ ತಾಜಮಹಲಿ ಮುಂದೆ ನಗುತರಾಜರಾಣಿಯಂತೆ ನಿಂತುತಗೆಸಿಕೊಂಡ ಪೋಟೊಬಂದು ಕಾಡುತ್ತವೆ ಆಗಾಗಎಲ್ಲರಿಗೂ ಕನಸಿನಲ್ಲಿಅದನೆ ನಿಜವೆಂದು‌ ನಂಬಿಹೊರಡಲಾಗದುಮರುದಿನದ ನನಸಿನಲ್ಲಿ ಹಾಗೆಂದುಮಧ್ಯ ರಾತ್ರಿಯಲಿಎದ್ದು ಹೋಗಲಸಾಧ್ಯಅದು ಕವಿತೆಕಥೆಯಲಷ್ಟೇ ಬರೆದದ್ದು ತೂತಿರುವ ದೋಸೆಯನೆ ಕತ್ತರಿಸಿ ತಿನ್ನುತ್ತಸುಖವ ಅನುಭವಿಸಬೇಕುಹರಿದ ಹಾಸಿಗೆಯನೆಹೊಲಿದು ಹೊದ್ದುಕೊಂಡುಮತ್ತೆ ಕನಸುಗಳ ಕಾಣಬೇಕು —–ವೈ. ಎಂ.ಯಾಕೊಳ್ಳಿ

“ಪೂರ್ಣಗೊಳ್ಳದ ಚಿತ್ರಕ್ಕೆ ಬಣ್ಣವ ಬಳಿಯುತ್ತ….” ವೈ.ಯಂ.ಯಾಕೊಳ್ಳಿ Read Post »

ಕಾವ್ಯಯಾನ

ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ”

ಕಾವ್ಯ ಸಂಗಾತಿ ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ” ಅಂದು ಇದೇ ಹಾದಿಯಲ್ಲಿಬೆಂದ ಕಾಲುಗಳುಬಸವಳಿದು ರೋಧಿಸಿದವುದಿಕ್ಕು ದಿಕ್ಕಿಗೂ ಕೂಗಿ ಕರೆದ ಧ್ವನಿಮರಳಿ ಬಂದಿತುನನ್ನದೇ ಕನಸುಗಳ ಹಾದಿಗೆಸಂತಸದ ದಿನಗಳನ್ನು ಮೆಲುಕು ಹಾಕುತ್ತಾ   ಅಂತರಾತ್ಮದ ಅರಿವಿನ ಪ್ರಜ್ಞೆಗೆಮೂಕ ಸಾಕ್ಷಿಯಾಗಿಕಂಗಳಲ್ಲಿ ತುಂಬಿದ ಕನಸುಗಳಿಗೆಸೋತು ಹೋಗಿದ್ದೇನೆದುಡಿದು ಸವೆಸಿದ ಹಾದಿಗೆ ಹಸಿರುಕ್ರಾಂತಿಯ ಹರಿಕಾರಬಾಬು ಜಗಜ್ಜೀವನರಾಮ್  ನೆಹರು ಭೋಸರ ಅಂತರಾತ್ಮದಸ್ವಾತಂತ್ರ್ಯದ ಕಿಚ್ಚಿನ ರಕುತದಕಲೆಗಳು ಮಾಯವಾಗಿಲ್ಲ ಮಾಯದ ಜಿಂಕೆ ಬೆನ್ನತ್ತಿದರಾವಣನ ಅರಿ ರಾಮನರಾಮರಾಜ್ಯದ ಪರಿಕಲ್ಪನೆಮಹಾತ್ಮಾ ಗಾಂಧೀಜಿಯಕನಸು ನನಸಾಗಲೇ ಇಲ್ಲ ಸುಡುವ ಕಾಲು ನೆಲದಲ್ಲಿತಂಪು ತಂಗಾಳಿ ಸೂಸಿದಚಳಿ ಮಳೆ ಗಾಳಿ ಬಿಸಿಲಿಗೆಬೆವರು ಸುರಿಸಿದ ಕಂಗಳುಇನ್ನೂ ಸಂತಸ ಕಂಡಿಲ್ಲಸಂತರು ಶರಣರು ದಾಸರುಇದೆ ಹಾದಿಯಲ್ಲಿ ನಡೆದು ಹೋದಹೆಜ್ಜೆ ಗುರುತು ಪಾದಗಳ ಪೋಟೋನಮ್ಮ ನಮ್ಮ ಜಗುಲಿಯ ಮೇಲೆಹಾಗೇ ಕುಳಿತುಕೊಂಡುರಾರಾಜಿಸುತ್ತಿವೆ ನಮ್ಮದೇ ಕಟ್ಟೆಯೊಳಗೆ ಬಂಧಿಸಿ ಪರದೆಯೊಳಗೆ ಮಡಿ ಮಾಡಿ ಶೋಷಣೆಯ ಸುಲಿಗೆಯೊಳಗೆ ಬಂದಿಖಾನೆ ಆಗಿದ್ದಾವೆನಮ್ಮ ನಮ್ಮ ದೇವರುಗಳು ನಾಡು ಸಮತೆಯ ಗೂಡುಹುಡುಕುತ್ತಿರುವೆಅಲ್ಲಿ ಇಲ್ಲಿ ಬಸವಣ್ಣ ಬುದ್ಧ ಗಾಂಧಿಯ ಪೋಟೋಗಳ ಮೇಲೆಕುಳಿತ ಧೂಳು ವರೆಸುತ್ತ ಕಣ್ಣಗಲ ಮಾಡಿ ವರುಷಕ್ಕೊಮ್ಮೆತಳಿರು ತೋರಣ ಕಟ್ಟಿಸಿಂಗರಿಸಿ ಧ್ವಜವು ಹಾರಿಸಿಜೈಕಾರ ಕೂಗುವ ನಮ್ಮೆದೆಯಗಟ್ಟಿ ಕೂಗಿಗೆ ಎಚ್ಚರಗೊಳ್ಳಲಿಲ್ಲ ನಾಡು ತೆಂಗು ಬಾಳೆ ಶ್ರೀಗಂಧದ ಬೀಡುಅನೇಕ ಗುಡಿ ಗೋಪುರ ದೊಳಗೆಬಚ್ಚಿಕೊಂಡು ತಿರುಗುವಅಲೆಮಾರಿಯಂತೆನಮ್ಮ ನಮ್ಮ ಬದುಕುಎಲ್ಲಿಂದ ? ಬರಬೇಕುಸಮ ಸಮಾಜದ ಪರಿಕಲ್ಪನೆಇದು ನಮ್ಮ ಭ್ರಮೆ ಎನ್ನಲೇ? —————ಡಾ ಸಾವಿತ್ರಿ ಕಮಲಾಪೂರ

ಡಾ ಸಾವಿತ್ರಿ ಕಮಲಾಪೂರ “ಮಾರ್ಧನಿ” Read Post »

You cannot copy content of this page

Scroll to Top