ಕಾವ್ಯ ಸಂಗಾತಿ
ಕೆ.ಎಂ. ಕಾವ್ಯ ಪ್ರಸಾದ್
“ಹೃದಯದ ದೇವತೆ”


ನನ್ನ ಹೃದಯದ ದೇವತೆ ಏಕೆ ನೀ ನಕ್ಕಿದೆ
ಈ ಎದೆಯಲ್ಲಿ ನಿನ್ನ ಪ್ರೀತಿ ಉಕ್ಕಿ ಹರಿಸಿದೆ!
ಮುಗಿಲಷ್ಟು ಪ್ರೇಮದ ಕಾಣಿಕೆಯ ನೀಡಿದೆ
ಹಾಲು ಜೇನಂತ ಮನಸು ನಿನ್ನದಾಗಿದೆ!!
ಆಸೆ ಕನಸುಗಳೆಲ್ಲ ಹಸಿರಾಗಿ ಚಿಗುರುತಿದೆ
ಮುತ್ತಿನ ಮಳೆಯು ಹೂಗಳಾಗಿ ಸುರಿದಿದೆ!
ನನ್ನ ಪ್ರೀತಿ ನಿನ್ನ ನೋಟಕೆ ಸೆರೆಯಾಗಿದೆ
ಹೆಣ್ಣು ದುಂಬಿ ಪ್ರೀತಿ ಆಸರೆ ಬಯಸಿದೆ!!
ಸಿಹಿ ತುಪ್ಪ ಸವಿಯುವ ಆಸೆ ಹೆಚ್ಚಾಗಿದೆ
ಗಲ್ಲ ಕರಗುವ ಬೆಣ್ಣೆಯಂತೆ ಮೃದುವಾಗಿದೆ!
ಕಣ್ಣು ಮುಚ್ಚಲು ನಿನ್ನ ರೂಪ ಕಾಣುವುದೇ
ನಿನ್ನ ಬಿಂಬ ನನಗೀಗ ಕಚಗುಳಿ ಇಡುತಿದೆ!!
ನಿನ್ನ ಮನಸಾರೆ ಸೇರುವ ತವಕ ಹೆಚ್ಚಾಗಿದೆ
ನಾ ಹುಡುಕುವ ಹಾದಿಯ ದಾರಿ ತಪ್ಪಿಸಿದೆ!
ಸುಂದರ ಸಾಮರಸ್ಯ ನಡಿಗೆಯು ನಿನ್ನಲ್ಲಿದೆ
ಕಣ್ಣ ಮುಚ್ಚಾಲೆಯ ಆಟ ಏಕೆ ಆಡಿಸಿದೆ!!
ನನ್ನೆದೆ ಬಡಿತವು ಜೋರಾಗಿ ತಾಳ ತಪ್ಪಿದೆ
ನಿನ್ನ ಅವರಿಸುವ ಆಸೆಯು ಹೆಚ್ಚಾಗಿದೆ!
ಖುಷಿಯಿಂದ ಜಗತ್ತನ್ನೆ ಮರೆಯಬೇಕಿದೆ
ಸಿಹಿ ಮುತ್ತಲ್ಲಿ ನನ್ನ ಬಂದಿ ಮಾಡಿ ಬಿಟ್ಟೆ
——
ಕೆ.ಎಂ. ಕಾವ್ಯ ಪ್ರಸಾದ್




