ಕಾವ್ಯ ಸಂಗಾತಿ
ಹಾ.ಮ ಸತೀಶ ಬೆಂಗಳೂರು
ಗಜಲ್


ಸಾವಿರ ಬಾರಿ ಅಲೆದರೂ, ಪ್ರೀತಿಯು ಸಿಗಲಿಲ್ಲ
ನಿನ್ನನೆ ಹುಡುಕುತ ಬಂದರೂ,ಪ್ರೀತಿಯು ಸಿಗಲಿಲ್ಲ
ನಿನ್ನಯ ಹತ್ತಿರ ಬೇಡಿದೆ,ನೀನು ಹೋದೆ ಎಲ್ಲಿಗೆ
ಜೀವ ನನಸಲಿ ನಿಂದರೂ,ಪ್ರೀತಿಯು ಸಿಗಲಿಲ್ಲ
ಚೆಲುವ ಬೀರಿ ಮನಸನಿಂದು,ಕದಡಿ ಹೋದೆ ಏತಕೆ
ಸವಿಯು ಬಂದು ಕೂತರೂ,ಪ್ರೀತಿಯು ಸಿಗಲಿಲ್ಲ
ಚಿತ್ತದಲ್ಲಿ ಪ್ರೇಮರಾಗ, ಬೆರೆತು ಇರಲು ಹೋದೆಯಾ
ಮೋಹ ಸಮಯ ಇದ್ದರೂ, ಪ್ರೀತಿಯು ಸಿಗಲಿಲ್ಲ
ಸೊರಗಿ ಹೋದ ಮುಖದ ಭಾವ, ನನಗೆ ಏಕೆ ಈಶ
ಅತ್ತು ಕರೆದು ಹೇಳಿದರೂ, ಪ್ರೀತಿಯು ಸಿಗಲಿಲ್ಲ
ಹಾ.ಮ ಸತೀಶ ಬೆಂಗಳೂರು



