ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ನೀ ನನ್ನ ನೆನಪಲ್ಲೇ ಪುನಃ ಪುನಃ
ಉಳಿಯುವಾಸೆ….
ನಿನ್ನ ಹಿಂದಿಗಿಂತ ಹೆಚ್ಚು ಹೆಚ್ಚು
ನಾ ಪ್ರೀತಿಸುವಾಸೆ…
ನಿನ್ನ ಹೃದಯದಲ್ಲೇ ಮತ್ತೆ ನಾನೇ
ಬಚ್ಚಿಟ್ಟುಕೊಳ್ಳುವಾಸೆ….
ನಿನ್ನ ಮನದಾಳದ ಮಾತುಗಳೆಲ್ಲಾ
ಮತ್ತೊಮ್ಮೆ ಆಲಿಸುವಾಸೆ….
ನಿನ್ನ ಆ ನಯನಗಳಲ್ಲಿ ಇನ್ನೊಮ್ಮೆ
ನಾ ಬೆರೆಯುವಾಸೆ….
ನಿನ್ನ ಆ ಕುಡಿಮಿಂಚು ನೋಟ ಮತ್ತೆ
ಮತ್ತೆ ನೋಡುವಾಸೆ ….
ನಿನ್ನ  ಮೌನವಾ ನಾ ಕೊನೆಯದಾಗಿ
ಅರ್ಥೈಸಿಕೊಳ್ಳುವಾಸೆ….
ನಮ್ಮಿಬ್ಬರಲ್ಲಿ ಮತ್ತೆಂದೂ ಅಗಲಿಕೆ
ಬಾರದಿರಲೆಂಬಾಸೆ….

————–

About The Author

Leave a Reply

You cannot copy content of this page

Scroll to Top