ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ನೆನಪಿನಂಗಳ”


ಅದೊಂದು ಕಾಲ
ನೋಡದೆ ಇದ್ದರೆ ನಿನ್ನ ಕಣ್ಣತುಂಬ,
ಮಾತನಾಡೇ ಇದ್ದರೆ ನಿನ್ನೊಡನೆ
ಮನಸ್ಸು ತುಂಬ,ದೇಹ ನಿರ್ಭಾವ ,
ಮಿದುಳು ಬಳ್ಳಿ ಕಳಚಿ ನಿರ್ನಾಮ.
ಅದೊಂದು ಕಾಲಘಟ್ಟ
ಕೆರೆ ಏರಿಯ ಮೇಲೆ ಹಾರಾಡುವ
ಪಕ್ಷಿ ಸಂಕುಲಗಳ ಚಾರಣ,
ಕ್ಷಿತಿಜದೊಳಗಿಂದ ಮೂಡಿದ ಕಿರಣ ಮುತ್ತಿಟ್ಟ ನಿನ್ನ ಹೊಳೆ ಹೊಳೆವ ಕಣ್ಣ ಪ್ರತಿ ಫಲಿಸಿದ ತನ್ಮಯಾಗ್ನಿಯಲಿ ಬೆಂದು
ದೇಹ ಫೀನಿಕ್ಸ್ ಆಗಿ ಮರು ಹುಟ್ಟು.
ಬೇಡ ಬೇಡವೆಂದರೂ ಕಾಡಿದ್ದ
ಪುನರ್ಜನ್ಮ.
ಎಲ್ಲ ಕಥೆ ಮರೆತರೂ ಹಾಡುತ್ತಿದ್ದ ಹಾಡಿಗಳೂ ಮತ್ತೆ ಮತ್ತೆ ನೆನಪಿನಂಗಳ.
ಜನ್ಮ ಜನ್ಮಾಂತರಗಳ ಮರುಹುಟ್ಟು!!
ಕೌತುಕಗಳ ಜಾಲ ಈ ನೆನಪಿನಂಗಳ-
ಈಗ ಮರೆಯದೆಯೂ ಮರೆತಂಥ ನಟನೆ ಆಗಿನ ನಿರ್ದಾಕ್ಷಿಣ್ಯ
ನಿರ್ಮಮಕಾರಗಳ ಅನುಭೂತಿಗಳ ನಿರ್ಮೂಲನೆಗಳ ಅನನ್ಯ ಮಾಯಾ ಜಾಲ!

ಡಾ ಡೋ ನಾ ವೆಂಕಟೇಶ




Nice Bhavoji