ಕಾವ್ಯ ಸಂಗಾತಿ
ಡಾ ಡೋ ನಾ ವೆಂಕಟೇಶ
“ಅಮೃತ”


ಏನೆಂದು ಕರೆಯಲಿ ಈ ಭಾವಗಳನ್ನ ಜೀವ ನದಿಗಳನ್ನ.
ಬಾಡಿಹೋಗುವ ಮುನ್ನಿನ
ಹೊನ್ನುಗಳನ್ನ
ಪನ್ನೀರ ಸಿಂಚನಗಳನ್ನ
ಆಹ್ಲಾದಗಳನ್ನ.
ಆ ಸ್ವಾದಗಳ ಘಮ ನಾಲಿಗೆಯಿಂದ ನಾಲಿಗೆಗೆ
ಕೈ ಬಾಯಿ ತುಟಿ ಕಟಿಗಳ ಸಂಗೀತ ಸಂಭ್ರಮಗಳಿಗೆ
ಹೌದೆಂದರೆ ಹೌದು
ಇಲ್ಲವೇ ಇಲ್ಲವೆಂದರೆ
ನಾ ಯಾರು
ಇರುವ ತನಕ ಬದುಕಿದ್ದು
ಕನಸಲ್ಲೆ ಬದುಕು ಸಾಗಿಸಿದ್ದು
ಯಾರು.
ಬಯಸಿದ್ದು ಸಾಕು
ಇರುವ ತನಕ ಇಲ್ಲಿಲ್ಲದಿರುವ ಬೇಕುಗಳೂ ಸಾಕು
ಸಮುದ್ರ ಮಂಥನದ ಅಮೃತ
ಮತ್ತೆ ಸಮುದ್ರಕ್ಕೇ!
ಪುನಃ ಪುನಃ ದಡಕ್ಕಪ್ಪಳಿಸುವ
ತೀರದ ಬಯಕೆಗಳಿಗೇ!!
ಡಾ ಡೋ ನಾ ವೆಂಕಟೇಶ




ನಮ್ಮ ಬಾಡಿ ಹೋಗುವ ಜೀವಗಳಿಗೆ ಸದಾ ಅಮೃತ ನೀಡುವ ಮಿತ್ರ ವೆಂಕಣ್ಣ.. ನಮೋ ನಮಃ….
…… ಡಾ. ಕೆ ಬಿ ಸೂರ್ಯ ಕುಮಾರ್